ಕಾರ್ಯಕರ್ತರ ಕೈ ಬಿಡೋಲ್ಲ: ಕೆಎಚ್ಚೆಂ

KannadaprabhaNewsNetwork |  
Published : May 22, 2024, 12:54 AM ISTUpdated : May 22, 2024, 06:35 AM IST
೨೧ಕೆಎಲ್‌ಆರ್-೪ಕೋಲಾರ ತಾಲೂಕಿನ ವೇಮಗಲ್ ಹೋಬಳಿ ಚನ್ನಸಂದ್ರ ಶ್ರೀ ಗಂಗಮ್ಮ ದೇವಿ ೧೫ನೇ ವರ್ಷದ ದೀಪೋತ್ಸವ ಕಾರ್ಯಕ್ರಮದಲ್ಲಿ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಬಡವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕತೆ ಸಾಧಿಸಿ

  ಕೋಲಾರ : ಕೋಲಾರ ಕ್ಷೇತ್ರದಿಂದ ತಮ್ಮನ್ನು ಏಳು ಬಾರಿ ಸಂಸದರನ್ನಾಗಿ ಆಯ್ಕೆ ಮಾಡಿದ ಮತದಾರ ಬಂಧುಗಳನ್ನು ನನ್ನ ಕಂಠದಲ್ಲಿ ಪ್ರಾಣ ಇರುವ ತನಕ ಮರೆಯುವುದಿಲ್ಲ, ನಾನು ಎಲ್ಲೇ ಇರಲಿ ಜಿಲ್ಲೆಯ ಕಾರ್ಯಕರ್ತರನ್ನ ಮರೆಯುವುದಿಲ್ಲ. ಯಾವುದೇ ರೀತಿಯ ಕಷ್ಟಗಳು ಇದ್ದರೂ ಕೂಡ ನನಗೆ ಕರೆ ಮಾಡಿ ನಾನು ಸ್ಪಂದಿಸುತ್ತೇನೆ ಎಂದು ರಾಜ್ಯ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಕಾರ್ಯಕರ್ತರಿಗೆ ಭರವಸೆ ನೀಡಿದರು.

ತಾಲೂಕಿನ ವೇಮಗಲ್ ಹೋಬಳಿ ಚನ್ನಸಂದ್ರ ಶ್ರೀ ಗಂಗಮ್ಮ ದೇವಿ 15ನೇ ವರ್ಷದ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಬಡವರಿಗಾಗಿ ಅನೇಕ ಯೋಜನೆಗಳನ್ನು ತಂದಿದ್ದೇವೆ ಅವುಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕತೆಯಲ್ಲಿ ಮುಂದೆ ಬರಬೇಕು ಎಂದು ತಿಳಿಸಿದರು.ಕಾಂಗ್ರೆಸ್‌ ಸಂಘಟನೆ ಮಾಡಿ

ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತಂದರೆ ಪಕ್ಷದಲ್ಲಿ ಮುಂದೆ ನಿಮಗೂ ಸಹ ಅಧಿಕಾರ ಸಿಗುತ್ತದೆ, ಗ್ರಾಮಗಳಲ್ಲಿ ಎಲ್ಲ ಜಾತಿಯ ಜನಾಂಗದ ಮುಖಂಡರು ಒಂದು ಕಡೆ ಸೇರಿ ಗ್ರಾಮ ದೇವತಾ ಕಾರ್ಯಗಳಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವುದರಿಂದ ಮನಸ್ಸಿಗೆ ನೆಮ್ಮದಿ ಮತ್ತು ಆರೋಗ್ಯ ಸಹ ಕಾಪಾಡುತ್ತದೆ, ಗಂಗಮ್ಮ ದೇವಿಯ ಆಶೀರ್ವಾದದಿಂದ ರಾಜ್ಯದಲ್ಲಿ ಉತ್ತಮ ಮಳೆ ಮತ್ತು ಬೆಳೆ ಹಾಗೂ ರೈತರಿಗೆ ಉತ್ತಮ ಆರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ತಾಯಿಯಲ್ಲಿ ಬೇಡಿಕೊಳ್ಳುತ್ತಿದ್ದೇನೆ ಎಂದರು.

ಕಾಂಗ್ರೆಸ್ ಮುಖಂಡರಾದ ಊರಿಬಾಗಲು ಶ್ರೀನಿವಾಸ್, ಜಯದೇವ್, ಉದಯಶಂಕರ್, ಮುಖಂಡರಾದ ಹೂಡಿ ನಾರಾಯಣ ರೆಡ್ಡಿ, ಸಿ.ಡಿ.ರಾಮಚಂದ್ರಗೌಡ, ಕಡಗಟ್ಟೂರು ದೇವರಾಜ್, ಪಿಳ್ಳಪ್ಪಯ್ಯ, ದೇವರಹಳ್ಳಿ ಡಿ.ವಿ.ಶ್ರೀನಿವಾಸ್, ಎಚ್.ವೆಂಕಟೇಶ್, ಸಿ.ಎಚ್.ಮುನಿರಾಜ್, ರಮೇಶ್, ಮಧು, ರಾಮಕೃಷ್ಣಪ್ಪ, ನಾಗರಾಜ್, ತಿರುಮಲಪ್ಪ, ಚಂಜಿಮಲೆ ಸ್ವಾಮಿ, ನರಸಿಂಹ, ಬೈರಂಡಹಳ್ಳಿ ರಾಮಾಂಜಿ ಇದ್ದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ