;Resize=(412,232))
ಮದ್ದೂರು : ರಾಜ್ಯಕ್ಕೇ ಆಗಲಿ, ಜಿಲ್ಲೆಗೇ ಆಗಲಿ ಕುಮಾರಸ್ವಾಮಿ ಕೊಡುಗೆ ಏನಿದೆ ಎನ್ನುವುದನ್ನು ಮೊದಲು ತೋರಿಸಲಿ. ಕುಮಾರಸ್ವಾಮಿಯೂ ಸೇರಿದಂತೆ ಎಲ್ಲಾ ಸಂಸದರೂ ಡಮ್ಮಿ ಪೀಸ್‌ಗಳು. ಬಿಜೆಪಿ-ಜೆಡಿಎಸ್ ಸಂಸದರಿಗೆ ಮಾತನಾಡುವ ಧ್ವನಿಯೇ ಇಲ್ಲ ಎಂದು ಶಾಸಕ ಕೆ.ಎಂ.ಉದಯ್ ಗುಡುಗಿದರು.
ಸಂಸದರೆಲ್ಲರೂ ರಬ್ಬರ್ ಸ್ಟ್ಯಾಂಪ್‌ಗಳು. ಬಿಜೆಪಿ ನಾಯಕರು ಹೇಳಿದ ಕಡೆ ರುಜು ಮಾಡುವ ರಬ್ಬರ್ ಸ್ಟ್ಯಾಂಪ್‌ಗಳು. ನಮ್ಮ ಪಾಲಿನ ಜಿಎಸ್‌ಟಿ ಹಣವನ್ನು ಕೇಂದ್ರ ಸರ್ಕಾರ ಕೊಡುತ್ತಿಲ್ಲ. ಅದನ್ನೇ ಕೇಳೋದಕ್ಕೆ ಇವರಿಂದ ಆಗುತ್ತಿಲ್ಲ. ಅನ್ನ ಹಳಸಿತ್ತು, ನಾಯಿ ಕಾದಿತ್ತು ಎಂಬ ಸ್ಥಿತಿ ಕುಮಾರಸ್ವಾಮಿಗೆ ಆಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಣಕಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಲು ಬಿಜೆಪಿಗೆ ಆಗುತ್ತಿರಲಿಲ್ಲ. ಅದಕ್ಕೆ ಜೆಡಿಎಸ್‌ನವರನ್ನು ಜೊತೆಗೆ ಹಾಕಿಕೊಂಡಿದ್ದಾರೆ. ಜೆಡಿಎಸ್‌ನವರನ್ನು ಬಿಜೆಪಿಯವರು ಮೇಲಕ್ಕೆ ಕೂರಿಸಲ್ಲ. ಮುಂದಿನ ದಿನಗಳಲ್ಲಿ ಬುಡ ಸಮೇತ ಕಿತ್ತು ಹಾಕ್ತಾರೆ. ಮುಂದೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಫೈಟ್‌ಗೆ ಏನು ಬೇಕೋ ಅದನ್ನು ಮಾಡುತ್ತಿದ್ದಾರೆ ಎಂದರು.
ದೇಶವೆ ಅಲ್ಲೋಲ ಕಲ್ಲೋಲ ಆಗುತ್ತೆ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಇದೆಲ್ಲ ಪೊಳ್ಳು, ಠುಸ್ ಪಟಾಕಿ, ಇದೊಂದು ಖಾಲಿ ಡಬ್ಬ, ಬ್ಲಾಕ್‌ಮೇಲ್ ಮಾಡಿ ಹೆದರಿಸೋಕೆ ಹೇಳುತ್ತಿದ್ದಾರೆ. ಅಮೆರಿಕಾದಿಂದ ಬಂದು ಎಷ್ಟು ದಿನ ಆಯ್ತು.
ಏನಾದ್ರೂ ಇದ್ದಿದ್ರೆ ಹೇಳಬೇಕಲ್ಲವೇ. ಅವರ ಬಳಿ ಏನೂ ಇಲ್ಲ. ಅವರ ಬಳಿ ಯಾವ ಬಾಂಬೂ ಇಲ್ಲ. ಅದು ಯಾವತ್ತು ಸ್ಫೋಟವಾಗೋಲ್ಲ. ಸತ್ಯ ಇದ್ದಿದ್ದರೆ ಏಕೆ ಸುಮ್ಮನಿದ್ದಾರೆ. ಮುಂಚೆನೂ ತೋರಿಸಿದ ಪೆನ್‌ಡ್ರೈವ್‌ನಲ್ಲಿ ಏನಿತ್ತು. ಪೆನ್‌ಡ್ರೈವ್ ಬಂದಿದ್ದು, ಪ್ರಜ್ವಲ್‌ದು, ಅದೂ ಒರಿಜಿನಲ್ ಎಂದು ಕುಹಕವಾಡಿದರು.
ರಾಜ್ಯ ಸರ್ಕಾರದ ಖಜಾನೆ ಖಾಲಿ ಆರೋಪ ವಿಚಾರವಾಗಿ ಸರ್ಕಾರ ನಡೆಸುವವರಿಗೆ ಹಣ ಹೇಗೆ ತರಬೇಕು ಅಂತ ಗೊತ್ತಿದೆ. ಯಾವುದಾದರೂ ಮೂಲದಿಂದ ಫಂಡ್ ತರುತ್ತಾರೆ. ಹಣ ಇಲ್ಲದಿದ್ದರೆ ಇಷ್ಟೊಂದು ಅಭಿವೃದ್ಧಿ ಹೇಗೆ ಆಗುತ್ತಿತ್ತು. ದಿವಾಳಿ ಆಗಿದ್ದರೆ ಟನಲ್ ರೋಡ್ ಮಾಡಲಾಗುತ್ತಿತ್ತಾ. ಬೇರೆಯವರ ಕಾಲದಲ್ಲಿ ಈ ರೀತಿ ಅಭಿವೃದ್ಧಿ ಯೋಚನೆಗಳಾದರೂ ಬಂದಿತ್ತಾ. ನಿಮಗ್ಯಾಕೆ ಖಜಾನೆ ಕಥೆ, ಅಭಿವೃದ್ಧಿ ಆಗಬೇಕು. ಆಗುತ್ತೆ. ನಾವು ಸಾಲ ಮಾಡಿ ಹಾಕ್ತೀವೋ, ಬೇಬಿನಿಂದ ಹಾಕ್ತೀವೋ, ಆರ್ಥಿಕ ಮೂಲ ಸೃಷ್ಟಿ ಮಾಡ್ತೀವೊ ಅದೆಲ್ಲಾ ನಿಮಗ್ಯಾಕೆ ಎಂದು ಮರು ಪ್ರಶ್ನಿಸಿದರು.
ಮನ್‌ಮುಲ್ ಅಧ್ಯಕ್ಷ ಹರೀಶ್‌ಬಾಬು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸಂದರ್ಶ, ಮುಖಂಡರಾದ ಎಂ.ಡಿ.ಮಹಾಲಿಂಗಯ್ಯ, ಕಿರಣ್ ಇದ್ದರು.