ಆನೇಕಲ್ನ 4 ಸ್ಥಳೀಯ ಸಂಸ್ಥೆ ಗಳಿಗೆ ನಡೆದ ಉಪ ಚುನಾವಣೆ : ಬಿಜೆಪಿಗೆ 2, ಕಾಂಗ್ರೆಸ್‌ಗೆ 1 ಸ್ಥಾನ

KannadaprabhaNewsNetwork |  
Published : Nov 29, 2024, 01:30 AM ISTUpdated : Nov 29, 2024, 04:07 AM IST
ಆನೇಕಲ್ ತಾಲೂಕು ಬಳ್ಳೂರ್ ಪಂಚಾಯತಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಿ ಎಸ್. ಸತೀಶ್ ರೆಡ್ಡಿ ಅವರು ಅತ್ಯಧಿಕ ಬಹುಮತದಿಂದ ಆಯ್ಕೆಯಾದರು. ಗ್ರಾಮಸ್ಥರು ಹಾಗೂ ಮುಖಂಡರು ಅಭಿನಂದನೆಗಳನ್ನು ಸಲ್ಲಿಸಿದರು.  | Kannada Prabha

ಸಾರಾಂಶ

ಆನೇಕಲ್ ತಾಲೂಕಿನ 4 ಸ್ಥಳೀಯ ಸಂಸ್ಥೆ ಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಗೆ 2, ಕಾಂಗ್ರೆಸ್ ಗೆ ಒಂದು ಸ್ಥಾನ ಲಭಿಸಿದ್ದು ಬಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅತ್ಯಧಿಕ ಮತಗಳನ್ನು ಪಡೆಯುವ ಮೂಲಕ ವಿಜಯ ಮಾಲೆಯನ್ನು ಧರಿಸಿದ್ದಾರೆ.

ಆನೇಕಲ್: ತಾಲೂಕಿನ 4 ಸ್ಥಳೀಯ ಸಂಸ್ಥೆ ಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಗೆ 2, ಕಾಂಗ್ರೆಸ್ ಗೆ ಒಂದು ಸ್ಥಾನ ಲಭಿಸಿದ್ದು ಬಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅತ್ಯಧಿಕ ಮತಗಳನ್ನು ಪಡೆಯುವ ಮೂಲಕ ವಿಜಯ ಮಾಲೆಯನ್ನು ಧರಿಸಿದ್ದಾರೆ. 

ಹೆಬ್ಬಗೋಡಿ ನಗರಸಭಾ ವಾರ್ಡ್ 27ರಲ್ಲಿ ಕಾಂಗ್ರೆಸ್‌ನ ಲಕ್ಷ್ಮಮ್ಮ ನಾರಾಯಣಸ್ವಾಮಿ 880 ಮತಗಳನ್ನು ಗಳಿಸಿ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಸ್ವಪ್ನ ಅವರನ್ನು ಪರಭಾವಗೊಳಿಸಿದ್ದಾರೆ. ಆನೇಕಲ್ ಪುರಸಭೆಯ ವಾರ್ಡ್ 22ರಲ್ಲಿ ಬಿಜೆಪಿಯ ಹರೀಶ್ ವಿ. 900 ಮತಗಳನ್ನು ಗಳಿಸಿ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಮಹೇಶ್ ಎಂ. ಅವರನ್ನು ಪರಭಾವಗೊಳಿಸಿದ್ದಾರೆ.

ಚಂದಾಪುರ ಪುರಸಭೆಯ ವಾರ್ಡ್ ಸಂಖ್ಯೆ 21ಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ರೂಪಶ್ರೀ ಅವರು 557 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸುರೇಖಾ ಅವರನ್ನು ಪರಭಾವಗೊಳಿಸಿದ್ದಾರೆ.ಬಳ್ಳೂರ್ ಪಂಚಾಯಿತಿಗೆ ನಡೆದ ಉಪ ಚುನಾವಣೆಯಲ್ಲಿ 7 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಬಿ.ಎನ್. ಸತೀಶ್ ರೆಡ್ಡಿ ಅತ್ಯಧಿಕ 624 ಮತಗಳನ್ನು ಪಡೆದು ವಿಜಯ ಮಾಲೆ ಧರಿಸಿದರೇ ಕಣದಲ್ಲಿ ಉಳಿದ ಇತರ 6 ಮಂದಿ ಗರಿಷ್ಠ 34, 7, 5, 3, 2, 1, ಮತಗಳನ್ನು ಪಡೆದು ಠೇವಣಿ ಕಳೆದು ಕೊಂಡಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಸರ್ವಜನಾಂಗ ಶಾಂತಿಯ ತೋಟ ಆಗಲು ಈ ಮಸೂದೆ ಬೇಕೇಬೇಕು