;Resize=(412,232))
ಬೆಂಗಳೂರು : ಸದನದಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಸಚಿವರಿಗೂ ಪತ್ರ ಬರೆದಿದ್ದು, ‘ಪ್ರಶ್ನೆಗಳಿಗೆ ಉತ್ತರಿಸದಿರುವುದರಿಂದ ಸರ್ಕಾರಕ್ಕೆ ಮುಜುಗರ ಉಂಟಾಗಿದೆ. ಜತೆಗೆ ಸದನದ ಸದಸ್ಯರ ಹಕ್ಕು ಚ್ಯುತಿಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನ ಮಂಡಲ ಶಾಸಕರ ಪ್ರಶ್ನೆಗಳಿಗೆ ಸಕಾಲದಲ್ಲಿ ಉತ್ತರ ನೀಡದಿರುವ ಬಗ್ಗೆ ಪತ್ರ ಬರೆದಿರುವ ಅವರು, ಮಾ.16 ರಂದು ನಡೆದ ಸದನ ಸಭೆಯಲ್ಲಿ 245 ಪ್ರಶ್ನೆಗಳಲ್ಲಿ ಈವರೆಗೂ 90 ಪ್ರಶ್ನೆಗಳಿಗೆ ಮಾತ್ರ ಉತ್ತರ ಒದಗಿಸಿರುವುದು ಕಂಡುಬಂದಿರುತ್ತದೆ.
ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಸದನದಲ್ಲಿ ಉತ್ತರಿಸಲು ಬಾಕಿ ಇರುವ ಪ್ರಶ್ನೆಗಳಿಗೆ ಉತ್ತರಗಳನ್ನು ಇದುವರೆಗೂ ಕಳುಹಿಸಿಲ್ಲ. ಇದು ವಿಧಾನಸಭಾ ಸದಸ್ಯರು ಸದನದಲ್ಲಿ ಚರ್ಚಿಸಲು ಅನಾನುಕೂಲ ಉಂಟು ಮಾಡಿದೆ. ಜತೆಗೆ ಸರ್ಕಾರಕ್ಕೆ ತೀವ್ರ ಮುಜುಗರ ಸೃಷ್ಟಿಸುತ್ತದೆ. ಅಲ್ಲದೆ ಶಾಸಕರ ಹಕ್ಕಿಗೆ ಮತ್ತು ಸದನದ ಘನತೆಗೆ ಚ್ಯುತಿಯನ್ನುಂಟು ಮಾಡಿರುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
- ಸಚಿವರು ಪ್ರಶ್ನೆಗೆ ಉತ್ತರಿಸಿಲ್ಲ ಎಂದು ಕಿಡಿಕಾರಿದ್ದ ಖಾದರ್
- ಸೋಮವಾರ ಸದನದಿಂದ ಎದ್ದು ಹೊರನಡೆದಿದ್ದ ಸ್ಪೀಕರ್
- ಇದರ ಬೆನ್ನಲ್ಲೇ ಎಲ್ಲ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಪತ್ರ
- ಸದಸ್ಯರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲು ಸೂಚನೆ
- 245 ಪ್ರಶ್ನೆಗಳಲ್ಲಿ 90 ಪ್ರಶ್ನೆಗಷ್ಟೇ ಉತ್ತರ ನೀಡಲಾಗಿದೆ
- ಇದರಿಂದ ವಿಧಾನಮಂಡಲದ ಚರ್ಚೆಗೆ ಸಮಸ್ಯೆಯಾಗ್ತಿದೆ
- ಸ್ಪೀಕರ್ ಅಸಮಾಧಾನದಿಂದ ಎಚ್ಚೆತ್ತ ಸಿದ್ದರಾಮಯ್ಯ ಸೂಚನೆ