ಕಾಮಿ ಜ್ಯೋತಿಷಿ ಖರಾತ್‌ನ 1500 ಕೋಟಿ ರು. ಆಸ್ತಿ ! - 100 ಸೆ* ಸಿಡಿ, 5 ಗುಂಡುಗಳು ಪತ್ತೆ

Published : Mar 25, 2026, 05:19 AM IST
  Ashok Kharat

ಸಾರಾಂಶ

ಹುಸಿ ಜ್ಯೋತಿಷ್ಯ ಹೇಳಿ ಮಹಿಳೆಯರನ್ನು ಬೆದರಿಸಿ ಅವರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪ ಹೊತ್ತಿರುವ  ಅಶೋಕ್‌ ಖರಾತ್‌ಗೆ ಸೇರಿದ 1500 ಸಾವಿರ ಕೋಟಿ ರು. ಮೌಲ್ಯದ ಆಸ್ತಿಯನ್ನು ಮಹಾರಾಷ್ಟ್ರ ವಿಶೇಷ ತನಿಖಾ ತಂಡ ಪತ್ತೆ ಮಾಡಿದೆ, ಅಲ್ಲದೆ, 100 ಅಶ್ಲೀಲ ವಿಡಿಯೋಗಳು ಬೆಳಕಿಗೆ ಬಂದಿವೆ.

 ಮುಂಬೈ: ಹುಸಿ ಜ್ಯೋತಿಷ್ಯ ಹೇಳಿ ಮಹಿಳೆಯರನ್ನು ಬೆದರಿಸಿ ಅವರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪ ಹೊತ್ತಿರುವ ಮಹಾರಾಷ್ಟ್ರದ ನಾಸಿಕ್‌ನ ವಿವಾದಿತ ಜ್ಯೋತಿಷಿ ಅಶೋಕ್‌ ಖರಾತ್‌ಗೆ ಸೇರಿದ 1500 ಸಾವಿರ ಕೋಟಿ ರು. ಮೌಲ್ಯದ ಆಸ್ತಿಯನ್ನು ಮಹಾರಾಷ್ಟ್ರ ವಿಶೇಷ ತನಿಖಾ ತಂಡ ಪತ್ತೆ ಮಾಡಿದೆ, ಅಲ್ಲದೆ, 100 ಅಶ್ಲೀಲ ವಿಡಿಯೋಗಳು ಬೆಳಕಿಗೆ ಬಂದಿವೆ.

ಈತನ ವಿರುದ್ಧ ತನಿಖೆಗೆ ಇದೀಗ ವಿಶೇಷ ತನಿಖಾ ತಂಡ-ಆದಾಯ ಇಲಾಖೆ

ಹೀಗಾಗಿ ಈತನ ವಿರುದ್ಧ ತನಿಖೆಗೆ ಇದೀಗ ವಿಶೇಷ ತನಿಖಾ ತಂಡದ (ಎಸ್‌ಐಟಿ) ಜತೆ ಆದಾಯ ಇಲಾಖೆ ಅಧಿಕಾರಿಗಳೂ ಕೈಜೋಡಿಸಿದ್ದಾರೆ. ಅಲ್ಲದೆ ಈತನ ಮನೆಯ ಮೇಲೆ ದಾಳಿ ವೇಳೆ ಅಲ್ಲಿ 21 ಸಜೀವ ಕಾರ್ಟ್ರಿಡ್ಜ್‌ಗಳು ಹಾಗೂ 5 ಬುಲೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಇವನ್ನು ‘ನರಬಲಿ’ ನೀಡಲು ಬಳಸುತ್ತಿದ್ದನೇ ಎಂಬ ಶಂಕೆ ಉಂಟಾಗಿದೆ. 

20 ವರ್ಷಗಳ ಕಾಲ ವಾಣಿಜ್ಯ ಹಡಗಿನಲ್ಲಿ ಅಧಿಕಾರಿ

20 ವರ್ಷಗಳ ಕಾಲ ವಾಣಿಜ್ಯ ಹಡಗಿನಲ್ಲಿ ಅಧಿಕಾರಿಯಾಗಿದ್ದ ಅಶೋಕ್‌ ಬಳಿಕ ಜ್ಯೋತಿಷ್ಯ ಹೇಳಲು ಶುರು ಮಾಡಿದ್ದ. ತನ್ನ ಬಳಿ ಬರುತಿದ್ದ ಸ್ತ್ರೀಯರ ಜತೆ ಅನುಚಿತವಾಗಿ ವರ್ತಿಸಿ ಅದರ ಸಿಸಿಟೀವಿ ದೃಶ್ಯಾವಳಿಗಳನ್ನು ಕಾಪಿಡುತ್ತಿದ್ದ. ಈ ಬಗ್ಗೆ ಮಹಿಳೆಯೊಬ್ಬರು ನೀಡಿದ್ದ ದೂರಿನ ಆಧಾರದಲ್ಲಿ ಮಾ.18ರಂದು ಆತನನ್ನು ಬಂಧಿಸಲಾಗಿತ್ತು. ಇದೀಗ ಆ ವಿಡಿಯೋಗಳನ್ನು ಸೈಬರ್ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಅತ್ತ ಐಟಿ ಇಲಾಖೆಯು ಹಣಕಾಸಿನ ಅಕ್ರಮ ಮತ್ತು ಆಸ್ತಿ ಹಿಡುವಳಿಯ ತನಿಖೆ ನಡೆಸುತ್ತಿದೆ.

- ಮಹಾರಾಷ್ಟ್ರದ ನಾಸಿಕ್‌ನಲ್ಲಿ ಇತ್ತೀಚೆಗೆ ಬಂಧಿತನಾಗಿದ್ದ ಕುಖ್ಯಾತ ಜ್ಯೋತಿಷಿ ಅಶೋಕ್‌

- ನಿಮ್ಮ ಪತಿಗೆ ಕಂಟಕ ಎಂದು ಹೇಳಿ ಶ್ರೀಮಂತ ಸ್ತ್ರೀಯರಿಗೆ ವಂಚನೆ, ಲೈಂಗಿಕ ಕಿರುಕುಳ

- ಇತ್ತೀಚೆಗೆ ಮಹಿಳೆಯೊಬ್ಬಳು ದೂರು ನೀಡಿದ ಬಳಿಕ ಆರೋಪಿ ಸೆರೆ, ಪೊಲೀಸರ ದಾಳಿ

- ಈ ವೇಳೆ ಜ್ಯೋತಿಷಿಗೆ ಸೇರಿದ ₹1500 ಕೋಟಿ ಮೌಲ್ಯದ ಆಸ್ತಿ, 100 ಸೆಕ್ಸ್‌ ಸಿಡಿ ಪತ್ತೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬೆಂಗಳೂರು ನಗರದಲ್ಲಿ ಇ-ಖಾತಾ ಮಾಫಿಯಾ: ಆರ್‌.ಅಶೋಕ್‌ ಗಂಭೀರ ಆರೋಪ
ಬಡವ್ರಿಗೆ ಫ್ರಿಜ್‌, ಗಂಡಸ್ರಿಗೂ ಫ್ರೀ ಬಸ್‌ : ಅಣ್ಣಾ ಗ್ಯಾರಂಟಿ!