ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀರಾಮೆಗೆ ಆಗ್ರಹಿಸಿ ಮತ್ತು ಮತಗಳ್ಳತ ವಿರೋಧಿಸಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟ ನ.1ರಂದು ದೆಹಲಿಯಲ್ಲಿ ಕರೆ ನೀಡಿರುವ ಬೃಹತ್‌ ಪ್ರತಿಭಟನೆಯಲ್ಲಿ ಭಾಗವಹಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅ.31ಕ್ಕೆ ದೆಹಲಿಗೆ ತೆರಳಿದ್ದಾರೆ.

ಬೆಂಗಳೂರು : ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀರಾಮೆಗೆ ಆಗ್ರಹಿಸಿ ಮತ್ತು ಮತಗಳ್ಳತ ವಿರೋಧಿಸಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟ ನ.1ರಂದು ದೆಹಲಿಯಲ್ಲಿ ಕರೆ ನೀಡಿರುವ ಬೃಹತ್‌ ಪ್ರತಿಭಟನೆಯಲ್ಲಿ ಭಾಗವಹಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅ.31ಕ್ಕೆ ದೆಹಲಿಗೆ ತೆರಳಿದ್ದಾರೆ.

ರಾಹುಲ್‌ ಗಾಂಧಿ ಅವರ ಭೇಟಿ?

ದೆಹಲಿ ಭೇಟಿ ವೇಳೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ಭೇಟಿಗೆ ಸಮಯ ಕೇಳಲಿದ್ದು, ಅವಕಾಶ ಸಿಕ್ಕರೆ ಈ ವೇಳೆ ‘ಸ್ಟಿಂಗ್‌ ಆಪರೇಷನ್‌’ ಪ್ರಕರಣದ ಕುರಿತು ಮಾಹಿತಿ ನೀಡುವ ಸಾಧ್ಯತೆ ಇದೆ.

ನ.1ರಂದು ನಡೆಸಲಿರುವ ಇಂಡಿಯಾ ಮೈತ್ರಿಕೂಟದ ಬೃಹತ್‌ ಪ್ರತಿಭಟನೆ

ನ.1ರಂದು ನಡೆಸಲಿರುವ ಇಂಡಿಯಾ ಮೈತ್ರಿಕೂಟದ ಬೃಹತ್‌ ಪ್ರತಿಭಟನೆಯಲ್ಲಿ ಭಾಗವಹಿಸಲು ಕಾಂಗ್ರೆಸ್‌ ತನ್ನೆಲ್ಲಾ ಸಂಸದರು, ಎಲ್ಲ ರಾಜ್ಯಗಳ ಪಕ್ಷದ ಪ್ರಮುಖ ಮುಖಂಡರು, ನಾಯಕರು, ಶಾಸಕರುಗಳಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ) ಸದಸ್ಯರೂ ಆದ ಸಿದ್ದರಾಮಯ್ಯ ಅವರು ಅ.31ರಂದು ದೆಹಲಿಗೆ ತೆರಳಲಿದ್ದಾರೆ. ಈ ವೇಳೆ, ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಭೇಟಿಗೆ ಅವಕಾಶ ಕೇಳಲಿದ್ದಾರೆ. ಅವಕಾಶ ಸಿಕ್ಕರೆ ರಾಜ್ಯ ರಾಜಕೀಯ ವಿಚಾರಗಳನ್ನು ಚರ್ಚೆ ನಡೆಸಲಿದ್ದಾರೆ, ಪ್ರಮುಖವಾಗಿ ತಮ್ಮ ಬ್ಲಾಕ್‌ಮೇಲ್‌ ಉದ್ದೇಶದಿಂದ ನಡೆದಿದೆ ಎನ್ನಲಾದ ‘ಸ್ಟಿಂಗ್‌ ಆಪರೇಷನ್‌’ ಪ್ರಕರಣದ ಕುರಿತು ತಮಗಿರುವ ಮಾಹಿತಿ, ಅನುಮಾನಗಳು, ದೂರು ದಾಖಲು ಸೇರಿದಂತೆ ಎಲ್ಲ ಮಾಹಿತಿಗಳನ್ನೂ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.