ರಾಜ್ಯದ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ‘ಸ್ಟಿಂಗ್‌ ಆಪರೇಷನ್‌’ ಕುರಿತು ಇದೇ ಮೊದಲ ಬಾರಿಗೆ ದೀರ್ಘವಾಗಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನನ್ನನ್ನು ಬ್ಲ್ಯಾಕ್‌ಮೇಲ್ ಮಾಡಲೆಂದೇ ಸ್ಟಿಂಗ್‌ ಮಾಡಿದ್ದರು’ ಎಂದು ನೇರವಾಗಿ ಆರೋಪಿಸಿದ್ದಾರೆ.

ಮೈಸೂರು : ರಾಜ್ಯದ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ‘ಸ್ಟಿಂಗ್‌ ಆಪರೇಷನ್‌’ ಕುರಿತು ಇದೇ ಮೊದಲ ಬಾರಿಗೆ ದೀರ್ಘವಾಗಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನನ್ನನ್ನು ಬ್ಲ್ಯಾಕ್‌ಮೇಲ್ ಮಾಡಲೆಂದೇ ಸ್ಟಿಂಗ್‌ ಮಾಡಿದ್ದರು’ ಎಂದು ನೇರವಾಗಿ ಆರೋಪಿಸಿದ್ದಾರೆ.

ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ

ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಶುಕ್ರವಾರ ಭೇಟಿ ನೀಡಿದ್ದ ಅವರು, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.

ತಮ್ಮ ವಿರುದ್ಧದ ಸ್ಟಿಂಗ್‌ ಆಪರೇಷನ್‌ ಕುರಿತು ಮೊದಲ ಬಾರಿಗೆ ಸುದೀರ್ಘವಾಗಿ ಬಹಿರಂಗ ಹೇಳಿಕೆ ನೀಡಿದ ಅವರು, ‘ಇದು ನನ್ನನ್ನು ಬ್ಲ್ಯಾಕ್‌ಮೇಲ್ ಮಾಡಲು ನಡೆಸಿರುವ ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಈ ವರ್ಷದ ಸೆಪ್ಟೆಂಬರ್‌ 26ರಂದು ಈ ವಿಚಾರ ನನ್ನ ಗಮನಕ್ಕೆ ಬಂತು. ರಾಕೇಶ್‌ ಶೆಟ್ಟಿ ಮತ್ತು ಮಂಗಳೂರಿನ ಕೃಪಾ ಆಳ್ವಾ ಸೇರಿಕೊಂಡು ಸ್ಟಿಂಗ್‌ ಮಾಡಿದ್ದಾರೆ. ಬ್ಲ್ಯಾಕ್‌ಮಾಡಲು ಈ ರೀತಿ ಮಾಡಿದ್ದು, ಸುಳ್ಳನ್ನೇ ಸತ್ಯ ಎಂದು ಬಿಂಬಿಸಲು ಹೊರಟಿದ್ದರು. ಸ್ಟಿಂಗ್‌ ಮಾಡಿದ್ದಾಗಿ ರಾಕೇಶ್‌ ಒಪ್ಪಿಕೊಂಡಿದ್ದಾರೆ. ಆದರೆ ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕು. ನನಗೆ ಇದರ ಹಿಂದೆ ಯಾರಿದ್ದಾರೇ ಎಂಬುದು ಗೊತ್ತಿಲ್ಲ. ಜನರಿಗೆ ಸತ್ಯ ಗೊತ್ತಾಗಬೇಕೆಂಬ ಕಾರಣಕ್ಕಾಗಿ ನಾನೇ ಸ್ವಯಂಪ್ರೇರಿತವಾಗಿ ಪೊಲೀಸರಿಗೆ ದೂರು ನೀಡಿದ್ದೇನೆ. ಎಸ್‌ಐಟಿ ತನಿಖೆಯೇ ಆಗಬೇಕೆಂದೇನಿಲ್ಲ. ಈಗ ಇರುವವರೇ ತನಿಖೆ ಮಾಡಲಿ ಎಂದರು.

ನನ್ನ ವಿರುದ್ಧದ ಆರೋಪದಲ್ಲಿ ಯಾವುದೇ ಹುರುಳಿಲ್ಲ

ನನ್ನ ವಿರುದ್ಧದ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಸಂಪೂರ್ಣ ಸತ್ಯಕ್ಕೆ ದೂರವಾದ ಆರೋಪವಿದು. 8 ವರ್ಷ ಸಿಎಂ ಆಗಿದ್ದ ಅವಧಿಯಲ್ಲಿ ಇಂತಹ ಯತ್ನ ನಡೆಯಲಿಲ್ಲ. ಈಗ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ನನ್ನ ವೈಯುಕ್ತಿಕ ತೇಜೋವಧೆಗಾಗಿ ಈ ರೀತಿ ಮಾಡಿದ್ದಾರೆ. ಈ ರೀತಿ ಪಿತೂರಿ ಮಾಡಿರುವವರ ಉದ್ದೇಶ ಫಲಪ್ರದ ಆಗುವುದಿಲ್ಲ. ಈ ವಿಚಾರ ಗೊತ್ತಾದ ಕೂಡಲೇ ಸ್ವಯಂಪ್ರೇರಿತವಾಗಿ ದೂರು ಕೊಟ್ಟಿದ್ದೇನೆ. ಸುಳ್ಳು ಆರೋಪಗಳ ಮೂಲಕ ಅಪಪ್ರಚಾರ ಮಾಡುವುದನ್ನು ತಡೆಯಲು ಕೋರ್ಟ್ ಆದೇಶ ತಂದಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ, ಈ ವಿಚಾರದಲ್ಲಿ ಬೇಸರಿಸಿಕೊಳ್ಳುವ ಪ್ರಮೇಯವಿಲ್ಲ’ ಎಂದು ಅವರು ಹೇಳಿದರು.

‘ನನ್ನ ಪರವಾಗಿ ಯಾರು ಇರುವುದೂ ಬೇಡ, ನನಗೆ ಯಾರ ನೈತಿಕ ಬೆಂಬಲ ಕೂಡ ಬೇಡ. ಯಾಕೆಂದರೆ, ನಾನು ಈ ಪ್ರಕರಣದಲ್ಲಿ ತಪ್ಪು ಮಾಡಿಲ್ಲ. ತಪ್ಪೇ ಮಾಡಿಲ್ಲದ ಮೇಲೆ ಬೆಂಬಲ ಯಾಕೆ ಬೇಕು?. ರಾಜಕೀಯ ಕಾರಣಕ್ಕಾಗಿ ಕೆಲವರು ಈ ಬಗ್ಗೆ ಮಾತನಾಡುತ್ತಿದ್ದಾರೆ, ಮಾತನಾಡಲಿ’ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.

ನನಗೆ ಸರ್ಕಾರದ ತನಿಖೆ ಮೇಲೆ ನಂಬಿಕೆ ಇದೆ. ಇದಕ್ಕೆ ಎಸ್ಐಟಿ ಅಥವಾ ಇನ್ನೂ ಉನ್ನತ ಮಟ್ಟದ ತನಿಖೆಯ ಅಗತ್ಯ ಇಲ್ಲ’ ಎಂದರು.

ಸ್ಟಿಂಗ್‌ ಕುರಿತು ನನಗೆ ಗೊತ್ತಾಗಿದ್ದು ಸೆ.26ಕ್ಕೆ

ಈ ವರ್ಷದ ಸೆಪ್ಟೆಂಬರ್‌ 26ರಂದು ಸ್ಟಿಂಗ್‌ ಆಪರೇಷನ್‌ ವಿಚಾರ ನನ್ನ ಗಮನಕ್ಕೆ ಬಂತು. ಇದರ ಹಿಂದೆ ಯಾರಿದ್ದಾರೆ ಅಂತ ಗೊತ್ತಿಲ್ಲ. ಎಸ್ಐಟಿ ತನಿಖೆಯೇ ಬೇಕೆಂದಿಲ್ಲ. ಈಗ ಇರುವವರೇ ತನಿಖೆ ಮಾಡಲಿ. ಸತ್ಯ ಗೊತ್ತಾಗಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನನ್ನ ಮೇಲೆ ಒಂದೂ ಕಪ್ಪು ಚುಕ್ಕೆ ಇಲ್ಲ

8 ವರ್ಷ ಸಿಎಂ ಆಗಿದ್ದ ಅವಧಿಯಲ್ಲಿ ಇಂತಹ ಯತ್ನ ನಡೆಯಲಿಲ್ಲ. ಈಗ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ ಎಂದು ಮಾಜಿ ಸಿಎಂ ಸಿದ್ದು ತಿಳಿಸಿದ್ದಾರೆ.