ಅತ್ಯಾಚಾರ, ದರೋಡೆಯಲ್ಲಿ ಮುಸ್ಲಿಮರುನಂ.1: ಅಸ್ಸಾಂ ನಾಯಕ ಬದ್ರುದ್ದೀನ್‌

KannadaprabhaNewsNetwork | Published : Oct 29, 2023 1:00 AM

ಸಾರಾಂಶ

ಕಾಶಿ ವಿಶ್ವನಾಥ ದೇಗುಲದಲ್ಲಿ ವಸ್ತ್ರ ಸಂಹಿತೆ ಅಳವಡಿಸುವ ಕುರಿತು ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅಧ್ಯಕ್ಷ ನಾಗೇಶ್‌ ಪಾಂಡೆ ತಿಳಿಸಿದ್ದಾರೆ
ದಿಸ್‌ಪುರ: ‘ದರೋಡೆ, ಡಕಾಯತಿ, ಅತ್ಯಾಚಾರ, ಲೂಟಿ ಮುಂತಾದ ಅಪರಾಧ ಪ್ರಕರಣಗಳಲ್ಲಿ ಮುಸ್ಲಿಮರು ನಂ.1’ ಎಂದು ಅಸ್ಸಾಂನ ಎಐಯುಡಿಎಫ್‌ನ ಮುಖ್ಯಸ್ಥ ಬದ್ರುದ್ದೀನ್‌ ಅಜ್ಮಲ್‌ ಅವರು ಹೇಳಿದ್ದು, ಇದು ಭಾರಿ ವಿವಾದ ಸೃಷ್ಟಿಸಿದೆ. ಅಸ್ಸಾಂನ ಗೋಲ್ಪಾರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಅತ್ಯಾಚಾರ, ಲೂಟಿ, ದರೋಡೆಯಂತಹ ಅಪರಾಧಗಳಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ಅಲ್ಲದೆ ಜೈಲಿಗೆ ಹೋಗುತ್ತಿರುವವರಲ್ಲೂ ನಾವು ಮೊದಲಿದ್ದೇವೆ. ನಮ್ಮ ಮಕ್ಕಳಿಗೆ ಶಾಲೆಗೆ ಹೋಗಲು ಸಮಯ ಸಿಗುತ್ತಿಲ್ಲ. ಆದರೆ ಇಂತಹವುಗಳನ್ನು ಮಾಡಲು ಸಮಯ ಸಿಗುತ್ತಿದೆ. ಯಾವುದೇ ತಪ್ಪು ನಡೆದರೂ ಅಲ್ಲಿ ಮುಸ್ಲಿಮರ ಹೆಸರು ಕೇಳಿ ಬರುತ್ತದೆ’ ಎಂದು ಅವರು ಹೇಳಿದ್ದಾರೆ. ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾದ ಬಳಿಕವೂ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅವರು, ‘ಜಗತ್ತಿನಾದ್ಯಂತ ಮುಸ್ಲಿಂ ಸಮುದಾಯದಲ್ಲಿ ಶಿಕ್ಷಣದ ಕೊರತೆ ಇದೆ. ಇಷ್ಟೆಲ್ಲಾ ಸಮಸ್ಯೆಗಳಿಗೆ ಅದೇ ಮೂಲ ಕಾರಣ’ ಎಂದು ಹೇಳಿದ್ದಾರೆ.

Share this article