ಸಿಎಂ ಬದಲಾವಣೆ ಬಗ್ಗೆ ಬಾಯಿ ಬಿಟ್ರೆ ಹುಷಾರ್‌ : ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ

Published : Jan 14, 2025, 06:56 AM IST
surjewala 1

ಸಾರಾಂಶ

ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ. ಈ ಬಗ್ಗೆ ಗೊಂದಲದ ಹೇಳಿಕೆಗಳು ಬೇಡ. ಅನಗತ್ಯವಾಗಿ ಯಾರೂ ಮುಖ್ಯಮಂತ್ರಿ ಬದಲಾವಣೆ ಸೇರಿ ಯಾವುದೇ ರಾಜಕೀಯ ಹೇಳಿಕೆ ನೀಡಬೇಡಿ. ನೀಡಿದರೆ, ಶಿಸ್ತುಕ್ರಮ ಖಚಿತ' - ಹೀಗಂತ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಶಾಸಕರಿಗೆ ತಾಕೀತು ಮಾಡಿದ್ದಾರೆ.

ಬೆಂಗಳೂರು : ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ. ಈ ಬಗ್ಗೆ ಗೊಂದಲದ ಹೇಳಿಕೆಗಳು ಬೇಡ. ಅನಗತ್ಯವಾಗಿ ಯಾರೂ ಮುಖ್ಯಮಂತ್ರಿ ಬದಲಾವಣೆ ಸೇರಿ ಯಾವುದೇ ರಾಜಕೀಯ ಹೇಳಿಕೆ ನೀಡಬೇಡಿ. ನೀಡಿದರೆ, ಶಿಸ್ತುಕ್ರಮ ಖಚಿತ' - ಹೀಗಂತ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಶಾಸಕರಿಗೆ ತಾಕೀತು ಮಾಡಿದ್ದಾರೆ.

ಸೋಮವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. 'ಇತ್ತೀಚೆಗೆ ಅನಗತ್ಯ ವಿಚಾರಗಳ ಬಗ್ಗೆ ಪಕ್ಷದ ನಾಯಕರು ಹಾಗೂ ಶಾಸಕರು ಹೇಳಿಕೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ಇಲ್ಲಿಗೆ ನಿಲ್ಲಿಸಿ. ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ಮಾಡಿ ಪಕ್ಷದ ಶಿಸ್ತು ಉಲ್ಲಂಘನೆ ಮಾಡಬೇಡಿ. ಅಷ್ಟೇ ಅಲ್ಲ, ಪಕ್ಷ ಹಾಗೂ ಸರ್ಕಾರಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಶಾಸಕಾಂಗ ಪಕ್ಷದ ಹೊರತಾಗಿಬೇರೆಲ್ಲೂಹೇಳಿಕೆನೀಡುವಂತಿಲ್ಲ. ನೀಡಿದರೆ ಕಠಿಣ ಕ್ರಮ ಖಚಿತ' ಎಂದು ಸುರ್ಜೇವಾಲ ಹೇಳಿದರು ಎನ್ನಲಾಗಿದೆ.

ಬಿಜೆಪಿ ದೇಶದ ನಾರಿಯರನ್ನು ಅವಮಾನಿಸುತ್ತಿದೆ: ಸುರ್ಜೇವಾಲಾ

'ಮುಖ್ಯಮಂತ್ರಿ ಬದಲಾವಣೆ ಎಲ್ಲವೂ ಹೈಕಮಾಂಡ್ ಹಂತದಲ್ಲಿ ಆಗುವ ಚರ್ಚೆ. ಆ ಬಗ್ಗೆ ಇಲ್ಲಿ ಹೇಳಿಕೆಗಳು ಅಗತ್ಯವಿಲ್ಲ. ಪಕ್ಷ ಇದ್ದರೆ ಸರ್ಕಾರವೇ ಹೊರತು ಸರ್ಕಾರದಿಂದ ಪಕ್ಷವಲ್ಲ. ಸರ್ಕಾರ ಮಗುವಾದರೆ ಪಕ್ಷವು ಅದರ ತಾಯಿ. ಇದು ಕಾಂಗ್ರೆಸ್ ಸರ್ಕಾರ ಎಂಬುದನ್ನು ಯಾರೂ ಮರೆಯಬಾರದು ಎಂದೂ ತಾಕೀತು ಮಾಡಿದರು' ಎಂದು ಮೂಲಗಳು ತಿಳಿಸಿವೆ. ಜ.21 ರಂದು ನಡೆಯಲಿರುವ ಬೆಳಗಾವಿ ಗಾಂಧಿ ಭಾರತ ಸಮಾವೇಶ ಯಶಸ್ವಿಗೊಳಿ ಸಲುಎಲ್ಲಾಶಾಸಕರು, ಸಚಿವರುಶ್ರಮವಹಿಸಿ ಕೆಲಸಮಾಡಬೇಕು. ಎಲ್ಲಾ ಕ್ಷೇತ್ರಗಳಿಂದಲೂ ಜನರನ್ನು ಸೇರಿಸಿ ರಾಜ್ಯದೆಲ್ಲೆಡೆಯಿಂದ ನಾ ಯಕರು, ಕಾರ್ಯಕರ್ತರು ಭಾಗವಹಿಸಲು ಸಹಕರಿಸಬೇಕು ಎಂದು ಕರೆ ನೀಡಿದರು. ໖.. ಉಪಮುಖ್ಯಮಂತ್ರಿ ಶಿವಕುಮಾರ್, ರಾಜ್ಯ ಸಭೆ ಸದಸ್ಯ ಜೈರಾಮ್ ರಮೇಶ್ ಸೇರಿ ಹಲವು ಮುಖಂಡರು ಹಾಗೂ ಪಕ್ಷದ ಬಹುತೇಕ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಸಿಎಂ ಬದಲಾವಣೆ ಎಂಬುದು ಮಾಧ್ಯಮ ಸೃಷ್ಟಿ: ಸುರ್ಜೇವಾಲಾ

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾ ವಣೆ ಕುರಿತ ಯಾವುದೇ ವಿವಾದವಿಲ್ಲ. ಇದು ಕೆಲ ನಿರ್ದಿಷ್ಟ ಮಾಧ್ಯಮ ಸಮೂಹ ಗಳ ಸೃಷ್ಟಿ. ಪಕ್ಷ ಹಾಗೂ ಸರ್ಕಾರ ಒಗ್ಗಟ್ಟಾಗಿದೆ. ಬಿಜೆಪಿಯವರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಇಂಥ ಸುಳ್ಳು ಸುದ್ದಿ ಹುಟ್ಟುಹಾಕುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಒಗ್ಗಟ್ಟಾಗಿದೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನಡುವೆ ಯಾವುದೇ ಭಿನ್ನಾ ಭಿಪ್ರಾಯವಿಲ್ಲ. ಇಬ್ಬರೂ ಒಟ್ಟಾಗಿ ಸರ್ಕಾರ ವನ್ನು ಸಮರ್ಥವಾಗಿ ಮುನ್ನೆಡೆಸುತ್ತಿದ್ದಾರೆ ಎಂದು ಸಮರ್ಥನೆ ನೀಡಿದರು.

ಸುರ್ಜೇವಾಲಾ ಕಟುನುಡಿಗಳು

• ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್ ಹಂತದಲ್ಲಿ ಆಗುವ ಚರ್ಚೆ, ಇಲ್ಲಿ ಅಲ್ಲ

• ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಹೇಳಿಕೆಗಳು ಅಗತ್ಯವಿಲ್ಲ

• ಏನೇ ಇದ್ದರೂ ಶಾಸಕಾಂಗ ಸಭೆ, ಪಕ್ಷದ ಸಭೆಯಲ್ಲಿ ಹೇಳಿ

• ಪಕ್ಷ ಇದ್ದರೆ ಸರ್ಕಾರವೇ ಹೊರತು ಸರ್ಕಾರದಿಂದ ಪಕ್ಷವಲ್ಲ ಎಂದು ಮನಗಾಣಿ ಸಿಎಂ ಬದಲು ಬಗ್ಗೆ ಹೇಳಿಕೆ ನೀಡಿದರೆ ಕಠಿಣ ಕ್ರಮ ಖಚಿತ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಗೃಹಲಕ್ಷ್ಮಿ ಸ್ಕೀಂ ₹5000 ಕೋಟಿ ಹಗರಣ: ಬಿಜೆಪಿ
ಬೆಳಗಾವಿ ಸದನದಲ್ಲೂ ಸಿಎಂ ಕುರ್ಚಿಯ ಕದನ!