ಜೆಡಿಎಸ್‌ಗೆ ಭರ್ಜರಿ ಲಾಭ ತಂದ ಮೈತ್ರಿ

ಸಾರಾಂಶ

ಸುಮಾರು ಎಂಟು ತಿಂಗಳ ಹಿಂದೆ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ಒಲವು ತೋರಿದ ಜೆಡಿಎಸ್‌ಗೆ ಆ ದೋಸ್ತಿ ಅಂತಿಮವಾಗಿ ಒಳ್ಳೆಯ ಲಾಭವನ್ನೇ ತಂದು ಕೊಟ್ಟಿದೆ.

ಬೆಂಗಳೂರು :  ಸುಮಾರು ಎಂಟು ತಿಂಗಳ ಹಿಂದೆ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ಒಲವು ತೋರಿದ ಜೆಡಿಎಸ್‌ಗೆ ಆ ದೋಸ್ತಿ ಅಂತಿಮವಾಗಿ ಒಳ್ಳೆಯ ಲಾಭವನ್ನೇ ತಂದು ಕೊಟ್ಟಿದೆ. 

ಲೋಕಸಭಾ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನಗಳನ್ನು ಗಳಿಸಿದರೂ ಮಂಡ್ಯ ಕ್ಷೇತ್ರದಿಂದ ಜಯಭೇರಿ ಬಾರಿಸಿದ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ಲಭಿಸಿದೆ. ಇದರಿಂದ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಬಲಪಡಿಸಲು ಆನೆಬಲ ಬಂದಂತಾಗಿದೆ.

Share this article