ಮಧ್ಯಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳಲು ಪಣತೊಟ್ಟಿರುವ ಬಿಜೆಪಿ
ನ.17ರ ವಿಧಾನಸಭಾ ಚುನಾವಣೆಗೆ 70 ವರ್ಷ ಮೀರಿದ 14 ಜನ ಕಣಕ್ಕೆ80 ವರ್ಷ ವಯಸ್ಸಿನ ನಾಗೇಂದ್ರ ಸಿಂಗ್ ನಗೋಡ್‌ಗೂ ಬಿಜೆಪಿ ಟಿಕೆಟ್
ಟಿಕೆಟ್ ಹಂಚಿಕೆಗೆ ಈ ಬಾರಿ ಗೆಲುವೊಂದೇ ಮಾನದಂಡ70 ದಾಟಿದ 14 ಮಂದಿ ಬಿಜೆಪಿಯಿಂದ ಕಣಕ್ಕೆ (ನಿಯಮ ಸಡಿಲಿಕೆ)ಭೋಪಾಲ್: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹಿರಿಯರ ಬದಲು ಯುವಕರಿಗೆ ಮಣೆ ಹಾಕಿ ಪಾಠ ಕಲಿತ ಬಿಜೆಪಿ, ಮಧ್ಯಪ್ರದೇಶದಲ್ಲಿ ಮತ್ತೆ ಹಿರಿಯರ ಮೊರೆ ಹೋಗಿದೆ. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು 70 ವರ್ಷದ ದಾಟಿದವರಿಗೆ ಟಿಕೆಟ್ ಇಲ್ಲ ಎಂಬ ತನ್ನ ಅಘೋಷಿತ ನಿಯಮವನ್ನು ಮೀರಿ 14 ಜನರಿಗೆ ಟಿಕೆಟ್ ನೀಡಿದೆ.
ಹೀಗಾಗಿ ಮಧ್ಯಪ್ರದೇಶ ಚುನಾವಣೆಯಲ್ಲಿ ಪ್ರಯೋಗಕ್ಕೆ ಬ್ರೇಕ್ ಹಾಕಿರುವ ಬಿಜೆಪಿ ನಾಯಕರು, ಗೆಲುವೊಂದೇ ಮೂಲಮಂತ್ರ ಎಂಬುದಕ್ಕೆ ಶರಣಾಗಿದ್ದಾರೆ. ಅದಕ್ಕೆಉದಾಹರಣೆ ಎಂಬಂತೆ ನ.17ರಂದು ಮತದಾನ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 70 ವರ್ಷದ ದಾಟಿದ 14 ಜನರಿಗೆ ಟಿಕೆಟ್ ನೀಡಿದೆ. ಈ ಪೈಕಿ ಗರಿಷ್ಠ ವಯೋಮಿತಿಯ ಅಭ್ಯರ್ಥಿಯೆಂದರೆ ನಾಗೇಂದ್ರ ಸಿಂಗ್ ನಗೋಡ್ (80). ಉಳಿದಂತೆ ಜಯಂತ್ ಮಲಯ್ಯ (76), ಜಗನ್ನಾತ್ ಸಿಂಗ್ (75), ಸೀತಾಶರಣ್ ಶರ್ಮಾ (73), ಬಿಸಾಹುಲಾಲ್ ಸಿಂಗ್ (73), ಮಾಯಾ ಸಿಂಗ್ (73) ಮೊದಲಾದವರು ಸೇರಿದ್ದಾರೆ.
ಇನ್ನು ಬಿಜೆಪಿಯನ್ನು ಸವಕಲು ಪಕ್ಷ ಎಂದು ಟೀಕಿಸಿದ್ದ ಕಾಂಗ್ರೆಸ್ ಕೂಡಾ ಈ ಬಾರಿಯ ಚುನಾವಣೆಯಲ್ಲಿ 70 ವರ್ಷದ ದಾಟಿದ 9 ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸುವ ಮೂಲಕ ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳಲು ತಂತ್ರ ರೂಪಿಸಿದೆ.