ಅತಿವೃಷ್ಟಿ-ಅನಾವೃಷ್ಟಿ ಅಧ್ಯಯನಕ್ಕೆ ಬಿಜೆಪಿ 6 ತಂಡ

Published : Jul 24, 2026, 01:03 PM IST
BJP

ಸಾರಾಂಶ

ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಉಂಟಾಗಿರುವ ಹಿನ್ನೆಲೆಯಲ್ಲಿ ಅಧ್ಯಯನ ಮಾಡಲು ರಾಜ್ಯ ಬಿಜೆಪಿಯಿಂದ ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಮುಖಂಡರನ್ನು ಒಳಗೊಂಡ ಆರು ತಂಡಗಳನ್ನು ರಚಿಸಲಾಗಿದೆ.

  ಬೆಂಗಳೂರು :  ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಉಂಟಾಗಿರುವ ಹಿನ್ನೆಲೆಯಲ್ಲಿ ಅಧ್ಯಯನ ಮಾಡಲು ರಾಜ್ಯ ಬಿಜೆಪಿಯಿಂದ ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಮುಖಂಡರನ್ನು ಒಳಗೊಂಡ ಆರು ತಂಡಗಳನ್ನು ರಚಿಸಲಾಗಿದೆ.

ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್‌, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಅರಗ ಜ್ಞಾನೇಂದ್ರ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್ ನೇತೃತ್ವದಲ್ಲಿ ಮುಖಂಡರನ್ನು ಒಳಗೊಂಡು ತಂಡಗಳು ರಚನೆಯಾಗಿವೆ.

ಈ ತಂಡಗಳು ರಾಜ್ಯದ ಜಿಲ್ಲಾ ಕೇಂದ್ರಗಳು ಮತ್ತು ತಾಲೂಕುಗಳಿಗೆ ಭೇಟಿ ನೀಡಿ ರೈತರ ಬಿತ್ತನೆ ಸ್ಥಿತಿ, ಪ್ರದೇಶ ವೀಕ್ಷಣೆ, ಕುಡಿಯುವ ನೀರಿನ ಸಮಸ್ಯೆ, ಜನ-ಜಾನುವಾರುಗಳ ಸಮಸ್ಯೆಗಳು, ಕೆರೆ, ಅಣೆಕಟ್ಟೆಗಳಲ್ಲಿನ ನೀರಿನ ಸ್ಥಿತಿ ಕುರಿತು ಪರಿಶೀಲಿಸಿ ಜು.31ರೊಳಗೆ ಸಮಗ್ರ ವರದಿ ನೀಡಲು ಸೂಚಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಂಡ ಒಂದು:

ಬಿ.ವೈ.ವಿಜಯೇಂದ್ರ, ಜ್ಯೋತಿ ಗಣೇಶ್, ಸುರೇಶ್‌ಗೌಡ, ಧೀರಜ್‌ ಮುನಿರಾಜು, ಚಿದಾನಂದ ಗೌಡ, ಡಾ.ವೈ.ಎ.ನಾರಾಯಣಸ್ವಾಮಿ, ಎಸ್‌.ಮುನಿಸ್ವಾಮಿ ಮತ್ತು ವೆಂಕಟಮುನಿಯಪ್ಪ (ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು).

ತಂಡ ಎರಡು:

ಆರ್‌.ಅಶೋಕ್‌, ಜನಾರ್ಧನ ರೆಡ್ಡಿ, ಬೈರತಿ ಬಸವರಾಜು, ಸಿ.ಸಿ.ಪಾಟೀಲ್‌, ಎಂ.ಚಂದ್ರಪ್ಪ, ಬಿ.ಪಿ.ಹರೀಶ್‌, ಕೃಷ್ಣಾ ನಾಯಕ್‌, ಡಾ.ಚಂದ್ರು ಲಮಾಣಿ, ಪ್ರೊ.ಎಸ್‌.ವಿ.ಸಂಕನೂರು ಮತ್ತು ವೈ.ಎಂ.ಸತೀಶ್‌ (ವಿಜಯನಗರ, ಬಳ್ಳಾರಿ, ಗದಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳು).

ತಂಡ ಮೂರು:

ಛಲವಾದಿ ನಾರಾಯಣಸ್ವಾಮಿ, ಟಿ.ಎಸ್‌.ಶ್ರೀವತ್ಸ, ರಘು ಕೌಟಿಲ್ಯ, ಎಸ್‌.ಕೇಶವ ಪ್ರಸಾದ್‌, ಎಚ್‌.ಎಸ್‌.ಗೋಪಿನಾಥ ರೆಡ್ಡಿ ಮತ್ತು ಎನ್‌.ಮಹೇಶ್‌ (ಚಾಮರಾಜನಗರ, ಮೈಸೂರು, ರಾಮನಗರ, ಮಂಡ್ಯ).

ತಂಡ ನಾಲ್ಕು:

ಆರಗ ಜ್ಞಾನೇಂದ್ರ, ವಿ.ಸುನೀಲ್‌ ಕುಮಾರ್‌, ಗುರುರಾಜ್‌ ಗಂಟಿಹೊಳೆ, ಕಿರಣ್‌ ಕುಮಾರ್‌ ಕೂಡ್ಗಿ, ಯಶಪಾಲ್ ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ, ಹರೀಶ್‌ ಪೂಂಜಾ, ಉಮಾನಾಥ್‌ ಕೊಟ್ಯಾನ್‌, ಡಾ.ವೈ.ಭರತ್‌ ಶೆಟ್ಟಿ, ವೇದವ್ಯಾಸ ಕಾಮತ್‌, ರಾಜೇಶ್‌ ನಾಯ್ಕ್‌, ಭಾಗೀರಥಿ ಮುರುಳ್ಯ, ಸಿಮೆಂಟ್‌ ಮಂಜುನಾಥ್‌, ಎಚ್‌.ಕೆ.ಸುರೇಶ್‌, ಚನ್ನಬಸಪ್ಪ, ಎಂ.ಕೆ.ಪ್ರಾಣೇಶ್‌, ಸುಜಾ ಕುಶಾಲಪ್ಪ, ಡಾ.ಧನಂಜಯ ಸರ್ಜಿ ಮತ್ತು ಕಿಶೋರ್‌ ಕುಮಾರ್‌ ಪುತ್ತೂರು (ಮಂಗಳೂರು, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳು).

ತಂಡ ಐದು:

ಸಿ.ಟಿ.ರವಿ, ಭಗವಂತ ಖೂಬಾ, ಉಮೇಶ್‌ ಜಾಧವ್‌, ದೊಡ್ಡನಗೌಡ ಪಾಟೀಲ್‌, ಪ್ರಭು ಚೌವ್ಹಾಣ್‌, ಶರಣು ಸಲಗಾರ್‌, ಸಿದ್ದು ಪಾಟೀಲ್‌, ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಶಿವರಾಜ್ ಪಾಟೀಲ್‌, ಮಾನಪ್ಪ ಡಿ.ವಜ್ಜಲ್‌, ಬಸವರಾಜ ಮತ್ತಿಮೂಡ್‌, ಡಾ.ಅವಿನಾಶ್‌ ಜಾಧವ್‌, ಹೇಮಲತಾ ನಾಯಕ್‌, ಬಿ.ಜೆ.ಪಾಟೀಲ್‌, ಶಶಿಲ್‌ ನಮೋಶಿ, ಡಾ.ಎಂ.ಜಿ.ಮುಳೆ ಮತ್ತು ಅಮರೇಶ್‌ ನಾಯಕ್‌ (ಬೀದರ್‌, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳು).

ತಂಡ ಆರು:

ಎನ್‌.ರವಿಕುಮಾರ್‌, ಮುರುಗೇಶ್‌ ನಿರಾಣಿ, ಅರವಿಂದ ಬೆಲ್ಲದ, ಸಿದ್ದು ಸವದಿ, ಅಭಯ್‌ ಪಾಟೀಲ್‌, ಬಾಲಚಂದ್ರ ಜಾರಕಿಹೊಳಿ, ರಮೇಶ್‌ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ಮಹೇಶ್‌ ಟೆಂಗಿನಕಾಯಿ, ವಿಠ್ಠಲ್‌ ಹಲಗೇಕರ್‌, ದುರ್ಯೋಧನ ಐಹೊಳೆ, ದಿನಕರ್‌ ಶೆಟ್ಟಿ, ಜಗದೀಶ್‌ ಗುಡಗಂಟಿ, ಎಂ.ಆರ್‌.ಪಾಟೀಲ್‌, ನಿಖಿಲ್‌ ಕತ್ತಿ, ಪಿ.ಎಚ್‌.ಪೂಜಾರ, ಹನುಮಂತ ನಿರಾಣಿ, ಪ್ರದೀಪ್‌ ಶೆಟ್ಟರ್‌, ಗಣಪತಿ ಉಳ್ವೇಕರ್‌ ಮತ್ತು ಲಿಂಗರಾಜ ಪಾಟೀಲ್‌ (ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳು).

ಯಾರ್‍ಯಾರ ನೇತೃತ್ವ?

- ಬಿ.ವೈ.ವಿಜಯೇಂದ್ರ, ಆರ್.ಅಶೋಕ್‌, ವಿಧಾನಪರಿಷತ್ತಿನ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಅರಗ ಜ್ಞಾನೇಂದ್ರ, ಸಿ.ಟಿ.ರವಿ ಹಾಗೂ ಎನ್‌.ರವಿಕುಮಾರ್

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನೀಟ್‌: ರಾಜ್ಯಕ್ಕೂ ಹಬ್ಬಿದ ವಿದ್ಯಾರ್ಥಿಗಳ ಹೋರಾಟ
ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಇಂದು ಕೇಂದ್ರದ ಬ್ರಹ್ಮಾಸ್ತ್ರ!