3 ಬಾರಿ ನೀಟ್‌ ಸೋರಿಕೆ ಆದ್ರೂ ಚರ್ಚೆಗೇಕೆ ತಡ? : ಕೇಂದ್ರದ ವಿರುದ್ಧ ಅಣ್ಣಾಮಲೈ ಆಕ್ರೋಶ

Published : Jul 23, 2026, 01:52 PM IST
k annamalai

ಸಾರಾಂಶ

‘ಕಳೆದ 5 ವರ್ಷಗಳಲ್ಲಿ ನೀಟ್‌ ಪ್ರಶ್ನೆಪತ್ರಿಕೆ 3 ಬಾರಿ ಸೋರಿಕೆಯಾಗಿದೆ. ಇಷ್ಟಾದರೂ ಸರ್ಕಾರ ಹೊಣೆ ಹೊರಲಿಲ್ಲ. ಇದೇ ಕಾರಣಕ್ಕೆ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಡುವಂತಾಯಿತು. ಸರ್ಕಾರ ಇನ್ನಾದರೂ ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಬೇಕು’

ಚೆನ್ನೈ: ‘ಕಳೆದ 5 ವರ್ಷಗಳಲ್ಲಿ ನೀಟ್‌ ಪ್ರಶ್ನೆಪತ್ರಿಕೆ 3 ಬಾರಿ ಸೋರಿಕೆಯಾಗಿದೆ. ಇಷ್ಟಾದರೂ ಸರ್ಕಾರ ಹೊಣೆ ಹೊರಲಿಲ್ಲ. ಇದೇ ಕಾರಣಕ್ಕೆ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಡುವಂತಾಯಿತು. ಸರ್ಕಾರ ಇನ್ನಾದರೂ ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಬೇಕು’ ಎಂದು ಮಾಜಿ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಸರ್ಕಾರದ ವಿರುದ್ಧ ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಬಿಜೆಪಿ ತೊರೆದು, ವಿ ದ ಲೀಡರ್ಸ್‌ ಆಂದೋಲನ

ಇತ್ತೀಚೆಗಷ್ಟೇ ಬಿಜೆಪಿ ತೊರೆದು, ವಿ ದ ಲೀಡರ್ಸ್‌ ಆಂದೋಲನ ಆರಂಭಿಸಿರುವ ಅವರು, ‘ಪ್ರತಿಭಟನೆಯು ತೀವ್ರ ಸ್ವರೂಪ ಪಡೆದು ನಿರ್ಣಾಯಕ ಹಂತವನ್ನು ತಲುಪುವವರೆಗೂ ಅರ್ಥಪೂರ್ಣ ಸಮಾಲೋಚನೆ ಏಕೆ ವಿಳಂಬವಾಯಿತು? ನಿಮ್ಮನ್ನು ಕಾಯುವಂತೆ ಮಾಡಿದ್ದು ಯಾವುದು?’ ಎಂದು ಟ್ವೀಟ್‌ ಮೂಲಕ ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದ್ದಾರೆ.

ಕಳೆದ 5 ವರ್ಷಗಳಲ್ಲಿ ನೀಟ್‌ ಪ್ರಶ್ನೆಪತ್ರಿಕೆ 3 ಬಾರಿ ಸೋರಿಕೆ

‘ಕಳೆದ 5 ವರ್ಷಗಳಲ್ಲಿ ನೀಟ್‌ ಪ್ರಶ್ನೆಪತ್ರಿಕೆ 3 ಬಾರಿ ಸೋರಿಕೆಯಾಗಿದೆ. ಇದು ವಿದ್ಯಾರ್ಥಿಗಳ ಮೇಲೆ ಹೇರುವ ಒತ್ತಡವನ್ನು ಊಹಿಸಿ. ಆದರೂ ಅಲ್ಲಿ ಯಾವುದೇ ಹೊಣೆಗಾರಿಕೆ ಇರಲಿಲ್ಲ. ವಿದ್ಯಾರ್ಥಿಗಳು ತಮ್ಮ ಅಂತರಾಳದ ನೋವನ್ನು ಹೊರಹಾಕಲು ಬೀದಿಗಿಳಿಯುವಂತೆ ಮಾಡಿದ್ದು ಅದೇ ಕ್ಷಣ. ಇನ್ನಾದರೂ ಸರ್ಕಾರ ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಬೇಕು ಹಾಗೂ ಅವರ ಕಳವಳಗಳನ್ನು ಪರಿಹರಿಸಲು ಸೂಕ್ತ ರೀತಿಯಲ್ಲಿ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನೀಟ್‌ ಕುರಿತು ಸಮಗ್ರ ಚರ್ಚೆಗೆ ಸಿದ್ಧ : ಸರ್ಕಾರ
ರಾಜಕೀಯ ಲಾಭಕ್ಕೆ ರಾಹುಲ್‌ ಯತ್ನ: ನಡ್ಡಾ