ಬಿಜೆಪಿ-ಕಾಂಗ್ರೆಸ್ ಮಧ್ಯೆ ‘ಪನೌತಿ’ ವಾರ್‌

KannadaprabhaNewsNetwork | Published : Nov 25, 2023 1:15 AM

ಸಾರಾಂಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ‘ಪನೌತಿ’ (ಅಪಶಕುನ) ಎಂದು ಟೀಕಿಸಿದ ಬೆನ್ನಲ್ಲೇ ಬಿಜೆಪಿ- ಕಾಂಗ್ರೆಸ್‌ ಮಧ್ಯೆ ‘ಪನೌತಿ’ ಪದದ ರಾಜಕೀಯ ಕೆಸರೆರಚಾಟ ಶುರುವಾಗಿದೆ.

ಮೋದಿ ಪನೌತಿ-ಎ-ಆಜಂ: ಕಾಂಗ್ರೆಸ್‌

ಗಾಂಧಿ ಕುಟುಂಬವೇ ಪನೌತಿ: ಬಿಜೆಪಿ

ರಾಹುಲ್‌ಗೆ ನೋಟಿಸ್‌ ಬೆನ್ನಲ್ಲೇ ಕೆಸರೆರಚಾಟ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ‘ಪನೌತಿ’ (ಅಪಶಕುನ) ಎಂದು ಟೀಕಿಸಿದ ಬೆನ್ನಲ್ಲೇ ಬಿಜೆಪಿ- ಕಾಂಗ್ರೆಸ್‌ ಮಧ್ಯೆ ‘ಪನೌತಿ’ ಪದದ ರಾಜಕೀಯ ಕೆಸರೆರಚಾಟ ಶುರುವಾಗಿದೆ.

ಶುಕ್ರವಾರ ಪ್ರಧಾನಿ ಮೋದಿಯನ್ನು ಕಾಂಗ್ರೆಸ್‌, ‘ಪನೌತಿ- ಎ- ಆಜಂ’ ಎಂದು ಟ್ವೀಟರ್‌ನಲ್ಲಿ ಟೀಕಿಸಿದೆ. ಇದರ ಬೆನ್ನಲ್ಲೇ ‘ಗಾಂಧಿ ಕುಟುಂಬವೇ ನಿಜವಾದ ಪನೌತಿ’ ಎಂದು ಬಿಜೆಪಿ ಟ್ವೀಟ್‌ ಮೂಲಕ ತಿರುಗೇಟು ನೀಡಿದೆ.

ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿಯನ್ನು ‘ಜೇಬುಗಳ್ಳ ಮತ್ತು ಅಪಶಕುನ’ ಎಂದು ಕರೆದಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಗುರುವಾರ ಶೋಕಾಸ್ ನೋಟಿಸ್‌ ಜಾರಿ ಮಾಡಿರುವ ಚುನಾವಣಾ ಆಯೋಗವು ಶನಿವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ. ಅದರ ಬೆನ್ನಲ್ಲೇ ಶುಕ್ರವಾರ ಪರಸ್ಪರ ವಾಗ್ದಾಳಿಗಳು ಮುಂದುವರೆದಿವೆ. ----- ‘ಪನೌತಿ- ಎ- ಆಜಂ’ ಎಂದು ಬರೆಯಲಾದ ಪರದೆಯ ಹಿಂದೆ ಮೋದಿಯನ್ನು ತೋರಿಸಿರುವ ಪೋಸ್ಟರ್ ಅನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.

ಕಾಂಗ್ರೆಸ್‌ಗೆ ತಿರುಗೇಟು ನೀಡಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ, ಮತ್ತೊಂದು ಪೋಸ್ಟರ್‌ನಲ್ಲಿ ‘ಪ್ರಿಯಾಂಕಾ, ರಾಹುಲ್, ಸೋನಿಯಾ, ರಾಜೀವ್, ನೆಹರು, ರಾಬರ್ಟ್ ವಾದ್ರಾ ಮತ್ತು ಇಂದಿರಾ ಗಾಂಧಿ’ ಅವರ ಹೆಸರಿಗೆ ‘ಪನೌಟಿ’ ಎಂದು ಬರೆದಿದ್ದಾರೆ. ಅಲ್ಲದೇ ‘ಏ ಹೈ ಭಾರತ್ ಕೆ ಲಿಯೇ ಅಸಲಿ’ (ಇವರೇ ಭಾರತದ ನಿಜವಾದ ಅಪಶಕುನಗಳು) ಎಂದು ಪೋಸ್ಟರ್ ಹಂಚಿಕೊಂಡಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡದ ನಡುವಿನ ವಿಶ್ವಕಪ್‌ ಫೈನಲ್‌ ಪಂದ್ಯಕ್ಕೆ ಪಿಎಂ (ಮೋದಿ) ಎಂಬ ಪನೌತಿ ಹೋಯಿತು. ಹೀಗಾಗಿ ಭಾರತ ಸೋತಿತು ಎಂದು ರಾಹುಲ್‌ ಪ್ರಚಾರದ ವೇಳೆ ವ್ಯಂಗ್ಯವಾಡಿದ್ದರು.

Share this article