ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿಗೆ ರಾಜಕೀಯ ಸ್ಪರ್ಶ ಬೇಡ: ಸಚಿವ ಸತೀಶ್ ಜಾರಕಿಹೊಳಿ

Published : Oct 08, 2024, 12:11 PM IST
Sathish Jarkiholi

ಸಾರಾಂಶ

ಬಿ.ವೈ.ವಿಜಯೇಂದ್ರ ಅವರು ಶಿಕಾರಿಪುರದ ರಸ್ತೆ ವಿಚಾರವಾಗಿ ಮಾತುಕತೆಗೆ ನನ್ನ ಭೇಟಿ ಮಾಡಿದ್ದರು. ಇದಕ್ಕೆ ರಾಜಕೀಯ ಸ್ಪರ್ಷ ನೀಡುವ ಅಗತ್ಯವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಬೆಂಗಳೂರು : ಬಿ.ವೈ.ವಿಜಯೇಂದ್ರ ಅವರು ಶಿಕಾರಿಪುರದ ರಸ್ತೆ ವಿಚಾರವಾಗಿ ಮಾತುಕತೆಗೆ ನನ್ನ ಭೇಟಿ ಮಾಡಿದ್ದರು. ಇದಕ್ಕೆ ರಾಜಕೀಯ ಸ್ಪರ್ಷ ನೀಡುವ ಅಗತ್ಯವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಗುಂಪುಗಾರಿಕೆ ಬಗ್ಗೆ ಹೈಕಮಾಂಡ್​ಗೆ ಮಾಹಿತಿ ಹೋಗುತ್ತೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಹೈಕಮಾಂಡ್‌ ಗಮನಿಸುತ್ತಿರುವುದು ನಿಜ. ಪಕ್ಷದ ವಿರುದ್ಧವಾಗಿ ನಾವೇನು ನಡೆದುಕೊಳ್ಳಲ್ಲ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪಕ್ಷಕ್ಕೆ ಹಾಗೂ ಸಂಘಟನೆಗೆ ಕೆಲಸ ಮಾಡಿರುತ್ತಾರೆ. ನಾವೂ ಸಹ ಕೆಲಸ ಮಾಡಿದ್ದೇವೆ. ಜತೆಗೆ ಪಕ್ಷ ಅಥವಾ ಸರ್ಕಾರಕ್ಕೆ ವಿರುದ್ಧವಾಗಿ ಯಾರೂ ನಡೆದುಕೊಂಡಿಲ್ಲ. ಹೀಗಾಗಿ ಯಾರೂ ಭಯಪಡುವ ಅಗತ್ಯವಿಲ್ಲ ಎಂದರು.

 ಟೋಲ್‌ ವಿಚಾರವಾಗಿ ಭೇಟಿ: ವಿಜಯೇಂದ್ರ

ಸಚಿವರ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಶಿವಮೊಗ್ಗ ಜಿಲ್ಲೆಯ ರಾಜ್ಯ ಹೆದ್ದಾರಿಯಲ್ಲಿ ಎರಡು ಟೋಲ್ ಇವೆ. ಶಿಕಾರಿಪುರ ತಾಲ್ಲೂಕಿನ ಟೋಲ್‌ನಿಂದ ರೈತರು, ಬಡವರಿಗೆ ಅನಾನುಕೂಲವಾಗಿದೆ. ಟೋಲ್ ಸ್ಥಳಾಂತರಕ್ಕೆ 2-3 ಬಾರಿ ಹೋರಾಟವೂ ನಡೆದಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.ಇದನ್ನು ಹೊರತಾಗಿ ರಾಜಕಾರಣ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ತಮ್ಮ ಮೇಲಿನ ಆರೋಪಗಳಿಗೆ ಉತ್ತರಿಸಿದ ಅವರು, ತಲೆ ಹಿಡಿಯುವ ರಾಜಕಾರಣ ಮಾಡುವುದಿಲ್ಲ. ತಂದೆಯವರಾದ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನವನ್ನು ನೋಡಿದ್ದೀರಿ. ರಾಜ್ಯಾಧ್ಯಕ್ಷನಾಗಿ ಪಕ್ಷ ಮುನ್ನಡೆಸುವುದರ ಕುರಿತು, ನನಗೆ ಕೆಲಸದ ಸ್ಪಷ್ಟತೆ ಇದೆ ಎಂದು ಹೇಳಿದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ