ಬಂಗಾಳದಲ್ಲಿ ಬಿಜೆಪಿ ಗೆದ್ರೆ ಸಂಕಷ್ಟ : ಬಾಂಗ್ಲಾ ಎಂಪಿ!

Published : May 02, 2026, 09:14 AM IST
If BJP wins migrants will be sent back Bangladeshi MP expresses deep concern

ಸಾರಾಂಶ

ಪಶ್ಚಿಮ ಬಂಗಾಳದಲ್ಲಿರುವ ಅಕ್ರಮ ವಲಸಿಗರನ್ನು ಹೊರಹಾಕುವುದಾಗಿ ಘೋಷಿಸಿರುವ ಬಿಜೆಪಿಯು ರಾಜ್ಯದಲ್ಲಿ ಅಧಿಕಾರಕ್ಕೇರಲಿದೆ ಎಂಬ ಚುನಾವಣೋತ್ತರ ಸಮೀಕ್ಷೆಗಳ ಅಂದಾಜು, ನೆರೆಯ ಬಾಂಗ್ಲಾದೇಶದ ತಲೆನೋವಿಗೆ ಕಾರಣವಾಗಿದೆ. ಈ ಬಗ್ಗೆ ಬಾಂಗ್ಲಾದ ಎನ್‌ಸಿಪಿ ಸಂಸದ ಅಖ್ತರ್‌ ಹೊಸೈನಿ ಆತಂಕ ವ್ಯಕ್ತಪಡಿಸಿದ್ದಾರೆ.

 ಢಾಕಾ: ಪಶ್ಚಿಮ ಬಂಗಾಳದಲ್ಲಿರುವ ಅಕ್ರಮ ವಲಸಿಗರನ್ನು ಹೊರಹಾಕುವುದಾಗಿ ಘೋಷಿಸಿರುವ ಬಿಜೆಪಿಯು ರಾಜ್ಯದಲ್ಲಿ ಅಧಿಕಾರಕ್ಕೇರಲಿದೆ ಎಂಬ ಚುನಾವಣೋತ್ತರ ಸಮೀಕ್ಷೆಗಳ ಅಂದಾಜು, ನೆರೆಯ ಬಾಂಗ್ಲಾದೇಶದ ತಲೆನೋವಿಗೆ ಕಾರಣವಾಗಿದೆ. ಈ ಬಗ್ಗೆ ಬಾಂಗ್ಲಾದ ಎನ್‌ಸಿಪಿ ಸಂಸದ ಅಖ್ತರ್‌ ಹೊಸೈನಿ ಆತಂಕ ವ್ಯಕ್ತಪಡಿಸಿದ್ದಾರೆ.

ಅಲ್ಲಿನ ಸಂಸತ್ತಿನಲ್ಲಿ ಮಾತನಾಡಿದ ಅವರು, ‘ಸದ್ಯ ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿರುವಂತೆ ಬಿಜೆಪಿಗೆ ಅಧಿಕಾರ ಸಿಕ್ಕಿದರೆ ಅವರು ಬಾಂಗ್ಲನ್ನರನ್ನೆಲ್ಲ ಬಾಂಗ್ಲಾಗೆ ಓಡಿಸುತ್ತಾರೆ. ಮುಸಲ್ಮಾನರನ್ನು ಅವರು ಕಳಿಸುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಇಲ್ಲ. ಪರಿಣಾಮ ವಲಸಿಗರ ಸಾಗರವೇ ಹರಿದುಬಂದು ಇಲ್ಲಿ ಬಿಕ್ಕಟ್ಟು ಸೃಷ್ಟಿಯಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಬಿಜೆಪಿ ಪ್ರತಿಕ್ರಿಯೆ:

ಹೊಸೈನಿಯವರ ಈ ಹೇಳಿಕೆಯಿಂದ, ‘ಮತಬ್ಯಾಂಕ್‌ಗಾಗಿ ಟಿಎಂಸಿ ನುಸುಳುಕೋರರನ್ನು ಬೆಂಬಲಿಸುತ್ತದೆ’ ಎಂಬ ಬಿಜೆಪಿಯ ಆರೋಪಕ್ಕೆ ಇನ್ನಷ್ಟು ಬಲ ಬಂದಿದ್ದು, ‘ಟಿಎಂಸಿಯ ಸಹಾಯಕರು ನಿಧಾನವಾಗಿ ಮುನ್ನೆಲೆಗೆ ಬರುತ್ತಿದ್ದಾರೆ’ ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಚಾಟಿ ಬೀಸಿದ್ದಾರೆ.

ಸಮೀಕ್ಷೆ ಏನು ಹೇಳಿದ್ದವು?:

ರಾಜ್ಯದಲ್ಲಿ ಈ ಬಾರಿ ಟಿಎಂಸಿ ಮತ್ತು ಬಿಜೆಪಿ ನಡುವೆ ಸಮಬಲದ ಹೋರಾಟ ಏರ್ಪಟ್ಟಿದ್ದು, ಎರಡೂ ಪಕ್ಷಗಳು ಬಿರುಸಿನ ಪ್ರಚಾರ ಮಾಡಿ ಮತದಾರರ ಮನ ಗೆಲ್ಲಲು ಯತ್ನಿಸಿದ್ದವು. ಎರಡು ಹಂತದಲ್ಲಿ ನಡೆದ ಚುನಾವಣೆಯಲ್ಲೂ ಈ ಹಣಾಹಣಿ ಕಂಡುಬಂದಿತ್ತು. ಮತದಾನೋತ್ತರ ಸಮೀಕ್ಷೆಗಳ ಪೈಕಿ 6 ಬಿಜೆಪಿ ಪರ ಭವಿಷ್ಯ ನುಡಿದರೆ, ಇನ್ನೆರಡು ಸಂಸ್ಥೆಗಳು ಮಮತಾ ಬ್ಯಾನರ್ಜಿ 4ನೇ ಬಾರಿ ಸಿಎಂ ಪಟ್ಟಕ್ಕೇರಬಹುದು ಎಂದಿದ್ದವು. 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಕರ್ನಾಟಕ ಸೇರಿ 9 ಗ್ಯಾರಂಟಿ ರಾಜ್ಯಗಳಿಗೆ ಕೇಂದ್ರ ಎಚ್ಚರಿಕೆ
ಕಾಂಗ್ರೆಸ್‌ ಎರಡೂ ಬಣದಲ್ಲಿ ಖರ್ಗೆ ಮಾತಿಂದ ಸಂಚಲನ