‘ಬಿವೈವಿ ಮುಂದಿನ ಮುಖ್ಯಮಂತ್ರಿ’

KannadaprabhaNewsNetwork |  
Published : Nov 06, 2024, 12:42 AM ISTUpdated : Nov 06, 2024, 12:43 AM IST
೫ಕೆಎಲ್‌ಆರ್-೮ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹುಟ್ಟುಹಬ್ಬ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ಕೋಲಾರದ ಶ್ರೀ ಕೋಲಾರಮ್ಮ ದೇವಾಲಯ ಆವರಣದಲ್ಲಿ ೧೦೧ ಇಡುಗಾಯಿ ಒಡೆಯುವ ಮೂಲಕ ಬಿಜೆಪಿ ಕಾರ್ಯಕರ್ತರು  ಅಭಿಮಾನಿಗಳು ಆಚರಿಸಿದರು. | Kannada Prabha

ಸಾರಾಂಶ

ಮಾಜಿ ಸಿಎಂ ಬಿಎಸ್‌ವೈ ಗುಡುಗಿದರೆ ವಿಧಾನಸೌಧ ನಡುಗುತ್ತಿತ್ತು. ಈಗ ಪುನರಾವರ್ತಿಯಂತೆ ವಿಜಯೇಂದ್ರ ಗುಡುಗಿದರೆ ವಿಧಾನಸೌಧ ನಡುಗುತ್ತದೆ. ಆಡಳಿತ ಪಕ್ಷ ಕಾಂಗ್ರೆಸ್ ಮಾಡುವ ಪ್ರತಿಯೊಂದು ತಪ್ಪನ್ನು ನಮ್ಮ ರಾಜ್ಯಾಧ್ಯಕ್ಷರು ಎತ್ತಿ ಹಿಡಿದು ನಾಡಿನ ಜನತೆಗೆ ತೋರಿಸುವ ಮೂಲಕ ಪ್ರಶ್ನಿಸುತ್ತಿದ್ದಾರೆ ಎಂಬುದು ಕಾರ್ಯಕರ್ತರ ಅಭಿಪ್ರಾಯ

ಕನ್ನಡಪ್ರಭ ವಾರ್ತೆ ಕೋಲಾರಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಹುಟ್ಟುಹಬ್ಬ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ನಗರದ ಶಕ್ತಿ ದೇವತೆ ಶ್ರೀ ಕೋಲಾರಮ್ಮ ದೇವಾಲಯ ಆವರಣದಲ್ಲಿ ೧೦೧ ಇಡುಗಾಯಿ ಒಡೆಯುವ ಮೂಲಕ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಆಚರಿಸಿದರು.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಓಂ ಶಕ್ತಿ ಚಲಪತಿ ಮಾತನಾಡಿ, ಕರ್ನಾಟಕ ಬಿಜೆಪಿಯು ದಕ್ಷಿಣ ಭಾರತದ ಹೆಬ್ಬಾಗಿಲು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ಸಂಘಟನೆ ಉತ್ತಮವಾಗಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ತರುತ್ತಾರೆ. ಈ ನಿಟ್ಟಿನಲ್ಲಿ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವುದು ಖಚಿತ ಎಂದರು. ಬಿಜೆಪಿ ಗೆಲುವು ಖಚಿತ

ವಿಜಯೇಂದ್ರ ಅವರ ಸಂಘಟನೆಯಿಂದಾಗಿ ಮೂರೂ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತದೆ. ನಿಸ್ವಾರ್ಥದಿಂದ ಜನರ ಸೇವೆ ಮಾಡುತ್ತಿರುವ ವಿಜಯೇಂದ್ರ ಅವರಿಗೆ ಕೋಲಾರಮ್ಮ ತಾಯಿ ಆರೋಗ್ಯ ಹಾಗೂ ಜನರ ಸೇವೆ ಕೈಗೊಳ್ಳಲು ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಎಂದು ಶುಭ ಕೋರಿದರು.ಕುಡಾ ನಿಕಟ ಪೂರ್ವ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತಿತ್ತು. ಈಗ ಪುನರಾವರ್ತಿಯಂತೆ ವಿಜಯೇಂದ್ರ ಗುಡುಗಿದರೆ ವಿಧಾನಸೌಧ ನಡುಗುತ್ತದೆ. ಆಡಳಿತ ಪಕ್ಷ ಕಾಂಗ್ರೆಸ್ ಮಾಡುವ ಪ್ರತಿಯೊಂದು ತಪ್ಪನ್ನು ನಮ್ಮ ರಾಜ್ಯಾಧ್ಯಕ್ಷರು ಎತ್ತಿ ಹಿಡಿದು ನಾಡಿನ ಜನತೆಗೆ ತೋರಿಸುವ ಮೂಲಕ ಪ್ರಶ್ನಿಸುತ್ತಿದ್ದಾರೆ. ಜನತೆಗೆ ಯಾವುದೇ ರೀತಿ ಮೋಸ ಆಗದಂತೆ ಕಾಂಗ್ರೆಸ್ ಸರ್ಕಾರದ ಕಿವಿ ಹಿಂಡುತ್ತಿದ್ದಾರೆ ಎಂದರು.ಬಿಜೆಪಿ ಕಾರ್ಯಕರ್ತರಾದ ಸಾಮ ಬಾಬು, ನಾಮಲ್ ಮಂಜುನಾಥ್, ಎವಿವಿಪಿ ಹರೀಶ್, ಹೊಗರಿ ರವಿ, ಸಿದ್ದಾರ್ಥ್, ವಿನಯ್, ಮಹೇಶ್, ರೂಪೇಶ್, ಆನಂದ್, ಮುರಳಿ, ಶ್ರೀನಿವಾಸ್, ಅನಿಲ್ ಇದ್ದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ