ಪುರುಲಿಯಾ: ಟಿಎಂಸಿ ನಾಯಕರನ್ನು ಸಿಬಿಐ ಹಾಗೂ ಇ.ಡಿ.ಯಂಥ ಕೇಂದ್ರ ತನಿಖಾ ಸಂಸ್ಥೆಗಳು ಬಿಜೆಪಿಗೆ ಸೇರಿ ಇಲ್ಲ, ಕ್ರಮ ಎದುರಿಸಲು ಸಿದ್ಧರಾಗುವಂತೆ ಬೆದರಿಸುತ್ತಿವೆ ಎಂದು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಆರೋಪಿಸಿದ್ದಾರೆ.
ಪುರುಲಿಯಾ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್‍ಯಾಲಿ ಮಾತನಾಡಿದ ಅವರು, ಇಡಿ, ಸಿಬಿಐ, ಎನ್‌ಐಎ, ಐಟಿ ಏಜೆನ್ಸಿ ಬಿಜೆಪಿ ಅಸ್ತ್ರಗಳಾಗಿ ಕೆಲಸ ಮಾಡುತ್ತಿವೆ. ಟಿಎಂಸಿ ನಾಯಕರಿಗೆ ಕಿರುಕುಳ ನೀಡಲು ಕೇಂದ್ರ ಏಜೆನ್ಸಿ ಬಳಸಲಾಗುತ್ತಿದೆ. ಅವರು ಪೂರ್ವ ಮಾಹಿತಿಯಿಲ್ಲದೆ ಮನೆಗಳಿಗೆ ನುಗ್ಗುತ್ತಿದ್ದಾರೆ. ಎಲ್ಲರೂ ಮಲಗಿರುವಾಗ ಮನೆಗಳಿಗೆ ಯಾರಾದರೂ ಪ್ರವೇಶಿಸಿದರೆ ಮಹಿಳೆಯರು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಭೂಪತಿನಗರದಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲು ಎನ್‌ಐಎ ತಂಡ ಹೋದಾಗ ಗುಂಪೊಂದು ದಾಳಿ ಮಾಡಿದ ಘಟನೆ ಉಲ್ಲೇಖಿಸಿದರು.