ಬೇರೆ ರಾಜ್ಯ ರೀತಿ ಕರ್ನಾಟಕಕ್ಕೂ ಕೇಂದ್ರ ಮುಂಗಡ ಬರ ಪರಿಹಾರ ಕೊಡಲಿ: ಸಿಎಂ

Published : Sep 26, 2026, 07:09 AM IST
DK Shivakumar

ಸಾರಾಂಶ

ಬರ ಪರಿಹಾರಕ್ಕಾಗಿ ಬೇರೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮುಂಗಡ ಕೊಟ್ಟಿದೆ. ರಾಜ್ಯಕ್ಕೂ ಮುಂಗಡ ಪರಿಹಾರ ನೀಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಸರ್ವಪಕ್ಷ ನಿಯೋಗ ತೆರಳಲು ನಿರ್ಧಾರ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಬೆಂಗಳೂರು : ಬರ ಪರಿಹಾರಕ್ಕಾಗಿ ಬೇರೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮುಂಗಡ ಕೊಟ್ಟಿದೆ. ರಾಜ್ಯಕ್ಕೂ ಮುಂಗಡ ಪರಿಹಾರ ನೀಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಸರ್ವಪಕ್ಷ ನಿಯೋಗ ತೆರಳಲು ನಿರ್ಧಾರ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

‘ಬರ ಪರಿಹಾರ ಕೋರಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಈಗ ಪತ್ರ ಬರೆಯಲಾಗಿದೆ. ಇಷ್ಟು ದಿನ ಏನು ಕತ್ತೆ ಕಾಯುತ್ತಿದ್ದರಾ?’ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ಶುಕ್ರವಾರ ನಗರದಲ್ಲಿ ಪ್ರತಿಕ್ರಿಯಿಸಿದ ಶಿವಕುಮಾರ್, ಆಯ್ತಪ್ಪಾ ನಾವು ಕತ್ತೆನೇ ಕಾಯುತ್ತಿದ್ದೇವೆ. ಆದರೆ, ಅವರೂ ತಮ್ಮ ಜವಾಬ್ದಾರಿ ಅರಿಯಲಿ ಎಂದರು.

ಬೇರೆ ರಾಜ್ಯಗಳಿಗೆ ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದಿಂದ ಮುಂಗಡ

ಬೇರೆ ರಾಜ್ಯಗಳಿಗೆ ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದಿಂದ ಮುಂಗಡ ಕೊಟ್ಟಿಲ್ಲವೇ? ರಾಜ್ಯದ ಬರ ಪರಿಹಾರ ಕೆಲಸಗಳಿಗೂ ಮುಂಗಡ ಅನುದಾನ ಕೋರಿ ಪ್ರಧಾನಮಂತ್ರಿ ಬಳಿ ಸರ್ವ ಪಕ್ಷ ನಿಯೋಗ ಕೊಂಡೊಯ್ಯಲಿದ್ದೇವೆ. ಸರ್ವ ಪಕ್ಷಗಳ ನಿಯೋಗದಿಂದ ಪ್ರಧಾನಿಯವರ ಭೇಟಿಗಾಗಿ ಸಮಯ ಕೇಳಲಾಗಿದೆ. ನಿಯೋಗದೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೂಡ ಬರಲಿ ಎಂದು ಹೇಳಿದರು.

ಇದೇ ವೇಳೆ ಬರ ವೀಕ್ಷಣೆಗೆ ಕೇಂದ್ರದಿಂದ ರಾಜ್ಯಕ್ಕೆ ತಂಡ ಕಳುಹಿಸಲಿ. ಈ ಕುರಿತು ನಾವು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ವಾಗ್ದಂಡನೆ ನಿರ್ಧಾರ ಸರಿ ಇದೆ:

ಇನ್ನು ಎಸ್‌ಐಆರ್ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿಯವರು, ಕೇಂದ್ರ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ವಿರೋಧ ಪಕ್ಷಗಳು ವಾಗ್ದಂಡನೆ ಕೈಗೊಳ್ಳುವ ನಿರ್ಧಾರ ಸರಿಯಾಗಿದೆ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಕೇಂದ್ರ ಚುನಾವಣಾ ಆಯೋಗದಲ್ಲಿ ಮೂವರು ಸದಸ್ಯರಿದ್ದು, ಎಸ್‌ಐಆರ್ ಕುರಿತು ಆಯೋಗದಲ್ಲಿನ ಸದಸ್ಯರಲ್ಲಿ ಒಮ್ಮತವಿಲ್ಲ. ಎಸ್‌ಐಆರ್ ಆಗಬೇಕು ನಿಜ. ಆದರೆ, ರಾಜಕೀಯವಾಗಿ ಬಳಕೆಯಾಗಬಾರದು ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ರಾಮಕೃಷ್ಣ ಹೆಗಡೆ ರೀತಿ ಸಿನಿಮಾದಲ್ಲಿ ನಟಿಸಲು ಸಿದ್ದು ಈಗ ತಯಾರಿ
2022-2026ರ ನಡುವೆ ದೇಶದಲ್ಲಿ 111 ಎಂಪಿ, ಶಾಸಕರ ಪಕ್ಷಾಂತರ