ನಗರದ ಟನೆಲ್ ರಸ್ತೆ ಕಾಂಗ್ರೆಸ್‌ ಜೇಬು ತುಂಬಿಸುವ ಯೋಜನೆ : ತೇಜಸ್ವಿ ಸೂರ್ಯ ಆರೋಪ

KannadaprabhaNewsNetwork |  
Published : Jul 15, 2025, 01:01 AM ISTUpdated : Jul 15, 2025, 07:47 AM IST
Tejasvi Surya_BJP citizen March

ಸಾರಾಂಶ

ಬೆಂಗಳೂರಿನ ಟನೆಲ್ ರಸ್ತೆ ಯೋಜನೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಜೇಬು ತುಂಬಿಸುವ ಯೋಜನೆ ಎಂದು ಆಪಾದಿಸಿರುವ ಸಂಸದ ತೇಜಸ್ವಿ ಸೂರ್ಯ, ಈ ಯೋಜನೆಗೆ ಸಿದ್ಧಪಡಿಸಿರುವ ವಿಸ್ತೃತ ಯೋಜನಾ ವರದಿ ಹಾಗೂ ಕಾರ್ಯಸಾಧ್ಯತಾ ವರದಿಯಲ್ಲಿ ಸಮಸ್ಯೆಯಿದೆ ಎಂದು ಹೇಳಿದ್ದಾರೆ.

 ಬೆಂಗಳೂರು :  ಬೆಂಗಳೂರಿನ ಟನೆಲ್ ರಸ್ತೆ ಯೋಜನೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಜೇಬು ತುಂಬಿಸುವ ಯೋಜನೆ ಎಂದು ಆಪಾದಿಸಿರುವ ಸಂಸದ ತೇಜಸ್ವಿ ಸೂರ್ಯ, ಈ ಯೋಜನೆಗೆ ಸಿದ್ಧಪಡಿಸಿರುವ ವಿಸ್ತೃತ ಯೋಜನಾ ವರದಿ ಹಾಗೂ ಕಾರ್ಯಸಾಧ್ಯತಾ ವರದಿಯಲ್ಲಿ ಸಮಸ್ಯೆಯಿದೆ ಎಂದು ಹೇಳಿದ್ದಾರೆ.

ಈ ಟನೆಲ್ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದ ಟೋಲ್‌ ವಿಧಿಸುವ ಉದ್ದೇಶ ಹೊಂದಿರುವುದರಿಂದ ಕೋಟ್ಯಧಿಪತಿಗಳಿಗೆ ಮಾತ್ರ ಉಪಯೋಗಲಿದೆ ಎಂದೂ ಅವರು ಹರಿಹಾಯ್ದಿದ್ದಾರೆ.

ಸೋಮವಾರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಗಡಾಯಿಸುತ್ತಿರುವ ನಗರ ಸಂಚಾರ ಸಮಸ್ಯೆಗೆ ಮಾರಕವಾಗಬಹುದಾದ ಸುರಂಗ ರಸ್ತೆ ಯೋಜನೆಯನ್ನು ಜಾರಿಗೊಳಿಸುವ ಬದಲು ಹೆಚ್ಚು ಸಾರ್ವಜನಿಕ ಸಾರಿಗೆ ಪರಿಹಾರಗಳನ್ನು ನಿರ್ಮಿಸುವತ್ತ ಗಮನಹರಿಸಬೇಕು ಎಂದು ಪ್ರತಿಪಾದಿಸಿದರು.

ಹೆಬ್ಬಾಳದಿಂದ, ಸಿಲ್ಕ್ ಬೋರ್ಡ್‌ವರೆಗಿನ ಸುರಂಗ ರಸ್ತೆ ಸಾಮಾನ್ಯ ಜನರ ವೆಚ್ಚದಲ್ಲಿ ಗಣ್ಯರಿಗಾಗಿ ನಿರ್ಮಿಸುತ್ತಿರುವ ದುಂದುವೆಚ್ಚದ ಯೋಜನೆಯಾಗಿದೆ. ಸುಲಭ ಜೀವನ ಸುಧಾರಿಸುವ ಬದಲು, ಕಾಂಗ್ರೆಸ್ ವ್ಯವಸ್ಥಿತವಾಗಿ ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಯನ್ನು ಹಾಳು ಮಾಡುತ್ತಿದೆ ಎಂದು ಹೇಳಿದರು.

ಹೆಬ್ಬಾಳದಿಂದ -ಸಿಲ್ಕ್ ಬೋರ್ಡ್ ಮತ್ತು ಕೆ.ಆರ್. ಪುರಂನಿಂದ ನಾಯಂಡಹಳ್ಳಿವರೆಗಿನ ಸುರಂಗ ರಸ್ತೆ ಕಾರಿಡಾರ್‌ನ ಕಾರ್ಯಸಾಧ್ಯತಾ ಅಧ್ಯಯನ ಮತ್ತು ವಿಸ್ತ್ರತ ಯೋಜನಾ ವರದಿಯಲ್ಲಿ ಕಂಡುಬಂದ ಹಲವಾರು ಲೋಪದೋಷಗಳಿವೆ. ₹9.5 ಕೋಟಿ ವೆಚ್ಚದಲ್ಲಿ ತಯಾರಿಸಲಾದ ಸುರಂಗ ರಸ್ತೆ ಡಿಪಿಆರ್‌ನಲ್ಲಿ ಬಿಎಂಆರ್‌ಸಿಎಲ್‌ನಿಂದ ಕೇವಲ ₹1.6 ಕೋಟಿ ವೆಚ್ಚದಲ್ಲಿ ತಯಾರಿಸಿದ ಡಿಪಿಆರ್‌ನಿಂದ ನೇರವಾಗಿ ನಕಲಿಸಿದ ಡೇಟಾವನ್ನು ಒಳಗೊಂಡಿದೆ ಎಂದರು. 

ಇದಲ್ಲದೆ, ಸಲಹೆಗಾರರು ಮತ್ತು ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ಬಹಿರಂಗಪಡಿಸಿ, ಅದೇ ಡಿಪಿಆರ್ ಬೆಂಗಳೂರಿನ ಕೆಲವು ಕಾರಿಡಾರ್‌ಗಳ ಸಂಚಾರ ಪ್ರಮಾಣವನ್ನು ವಿಶ್ಲೇಷಿಸುವಾಗ ಮಾಲೆಗಾಂವ್ ಮತ್ತು ನಾಸಿಕ್ ಅನ್ನು ಉಲ್ಲೇಖಿಸುತ್ತದೆ, ಇದು ಬೇರೆ ಯಾವುದೋ ವರದಿಯಿಂದ ನೇರವಾಗಿ ನಕಲು ಮಾಡಿರಬಹುದು ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು. 

ಅಲ್ಟಿನೋಕ್ ಜೊತೆ ಜಂಟಿ ಉದ್ಯಮದಲ್ಲಿ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಿದ ಲಯನ್ ಕನ್ಸಲ್ಟೆಂಟ್ಸ್‌ನ ಒಂದು ಗುಂಪಿನ ಕಂಪನಿಯು ಮಧ್ಯಪ್ರದೇಶದಲ್ಲಿ ಎನ್‌ಎಚ್‌ಎಐ ಯೋಜನೆಯಲ್ಲಿ ಕಪ್ಪುಪಟ್ಟಿಗೆ ಸೇರಿದೆ ಎಂದು ಅವರು ಗಮನ ಸೆಳೆದರು.

 ಡಿಪಿಆರ್ ರಚಿಸಿದ ರೋಡಿಕ್ ಕನ್ಸಲ್ಟೆಂಟ್ಸ್ ಜಮ್ಮು ಮತ್ತು ಕಾಶ್ಮೀರದಲ್ಲಿ ₹500 ಕೋಟಿ ಹಗರಣದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿದರು.ಬೆಂಗಳೂರು ಕೇವಲ ಒಂದು ನಗರವಲ್ಲ. ಇದು ಆಧುನಿಕ ಭಾರತದ ಹೃದಯ ಬಡಿತ. ಇದು ತನ್ನ ಜಾಗತಿಕ ಸ್ಥಾನಮಾನಕ್ಕೆ ಸರಿಹೊಂದುವ ಮೂಲಸೌಕರ್ಯಕ್ಕೆ ಅರ್ಹವಾಗಿದೆ. ಉಪಮುಖ್ಯಮಂತ್ರಿಗಳು ಈ ದುಂದುವೆಚ್ಚದ ಯೋಜನೆಯನ್ನು ಮುಂದುವರಿಸುವ ಅಥವಾ ನಗರದಾದ್ಯಂತ 100 ಕಿ.ಮೀ ಮೇಲ್ಸೇತುವೆ ನಿರ್ಮಿಸುವ ಮೊದಲು ಈಜಿಪುರ ಮೇಲ್ಸೇತುವೆ ಮತ್ತು ಹೊಸಕೆರೆಹಳ್ಳಿ ಜಂಕ್ಷನ್‌ನಂತಹ ಸ್ಥಗಿತಗೊಂಡ ಯೋಜನೆಗಳನ್ನು ಪೂರ್ಣಗೊಳಿಸಬೇಕು.

 ಬೆಂಗಳೂರಿಗೆ ಸಮಗ್ರ ಸಂಚಾರ ಯೋಜನೆ 2031ರ ವೇಳೆಗೆ 317 ಕಿ.ಮೀ ಮೆಟ್ರೋ ಜಾಲವನ್ನು ಕಲ್ಪಿಸುತ್ತದೆ ಮತ್ತು ನಾವು ಈಗ 78 ಕಿ.ಮೀ ನಲ್ಲಿ ಸಿಲುಕಿದ್ದೇವೆ. ಸಿಎಂಪಿ 2031 ರ ವೇಳೆಗೆ ಬೆಂಗಳೂರಿಗೆ ಒಟ್ಟು 16,582 ಬಸ್‌ಗಳ ಅಗತ್ಯವಿದೆ ಎಂದು ಹೇಳುತ್ತದೆ, ಬೆಂಗಳೂರಿನಲ್ಲಿ ಕೇವಲ 6,835 ಬಸ್‌ಗಳನ್ನು ಮಾತ್ರ ಬಳಕೆಯಲ್ಲಿವೆ. ಆಡಳಿತವು, ಜನರ ಸುಗಮ ಸಂಚಾರಕ್ಕೆ ಗಮನ ಹರಿಸಬೇಕೇ ಹೊರತು ವಾಹನಗಳಿಗಲ್ಲ ಎಂದು ಸಲಹೆ ನೀಡಿದರು.

PREV
Read more Articles on

Latest Stories

ಒಂಡಬಡಿಕೆ ಆಗಿದ್ದರೆ ಡಿಕೆ ಸಿಎಂ ಮಾಡಿ: ಶ್ರೀಶೈಲಶ್ರೀ
ಸಿಎಂ ಸಿದ್ದು ಅಧ್ಯಕ್ಷತೆಯಲ್ಲಿಕೈ ಒಬಿಸಿ ಟೀಂ 3 ನಿರ್ಣಯ
ಆಡಳಿತ ದೃಷ್ಟಿಯಿಂದ ಐದು ಪಾಲಿಕೆಗಳ ರಚನೆ ಖಚಿತ : ಡಿಸಿಎಂ ಡಿ.ಕೆ. ಶಿವಕುಮಾರ್‌