ಸಂಸ್ಕೃತಿರಹಿತ ಅನಂತ್ ಕುಮಾರ್‌ ಹೆಗಡೆ ಹೇಳಿಕೆ: ಸಿದ್ಧರಾಮಯ್ಯ ಕಿಡಿ

KannadaprabhaNewsNetwork |  
Published : Jan 14, 2024, 01:30 AM ISTUpdated : Jan 14, 2024, 12:05 PM IST
siddaramaih

ಸಾರಾಂಶ

ಅನಂತ ಕುಮಾರ್ ಹೆಗಡೆ ಅವರು ಕೇಂದ್ರ ಮಂತ್ರಿ ಆಗಿದ್ದಾಗ ನಾವು ಅಧಿಕಾರಕ್ಕೆ ಬಂದಿದ್ದೇ ಸಂವಿಧಾನ ಬದಲಾವಣೆ ಮಾಡಲು ಎಂದು ಹೇಳಿದ್ದರು. ಇಂಥವರನ್ನು ಸುಸಂಸ್ಕೃತರು ಎಂದು ಹೇಳಲು ಆಗುತ್ತಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅನಂತ ಕುಮಾರ್ ಹೆಗಡೆ ಅವರು ಕೇಂದ್ರ ಮಂತ್ರಿ ಆಗಿದ್ದಾಗ ನಾವು ಅಧಿಕಾರಕ್ಕೆ ಬಂದಿದ್ದೇ ಸಂವಿಧಾನ ಬದಲಾವಣೆ ಮಾಡಲು ಎಂದು ಹೇಳಿದ್ದರು. ಇಂಥವರನ್ನು ಸುಸಂಸ್ಕೃತರು ಎಂದು ಹೇಳಲು ಆಗುತ್ತಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಅನಂತ ಕುಮಾರ್‌ ಹೆಗಡೆಯವರ ಪ್ರಚೋದನಾಕಾರಿ ಹೇಳಿಕೆಗೆ ಸಂಬಂಧಿಸಿ ಶನಿವಾರ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಆ ರೀತಿಯ ಹೇಳಿಕೆ ಅವರ ಸಂಸ್ಕೃತಿ. ಅವರಿಂದ ನಾವು ಸಂಸ್ಕೃತಿ ಬಯಸಲು ಆಗುತ್ತಾ ಎಂದು ತಿರುಗೇಟು ನೀಡಿದರು.

ಇದೇ ವೇಳೆ ತಮ್ಮ ಕುರಿತು ಅವರು ಮಾಡಿದ ಟೀಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ''''ಅವರ ಭಾಷೆ ಬಳಕೆ, ಅವರ ಮಾತು ಆ ರೀತಿ ಇರುತ್ತದೆ. ರಾಜ್ಯದ ಮುಖ್ಯಮಂತ್ರಿಗೆ ಗೌರವ ಕೊಡುವವರೂ ಇದ್ದಾರೆ, ಕೊಡದೇ ಇರೋರು ಸಹ ಇದ್ದಾರೆ. 

ರಾಜಕೀಯವಾಗಿ ಮಾತನಾಡುವವರಿಗೆ ಗೌರವ ಕೊಡಿ ಎಂದು ಹೇಳಲು ಆಗುತ್ತಾ? ಅವರು ರಾಜಕೀಯವಾಗಿ ಅಶ್ಲೀಲ ಪದಗಳನ್ನು ಬಳಸಿದರೆ ಅವರ ಘನತೆಗೆ ಕುಂದು ಬರುತ್ತದೆಯೇ ಹೊರತು ನನಗಲ್ಲ'''' ಎಂದು ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಹೊಗಳಿ ಹೊಗಳಿ ಅನುದಾನ ಪಡೆಯಿರಯ್ಯ -ಡಿಕೆಶಿ ಹೊಗಳಿ 50 ಕೋಟಿ ಅನುದಾನ ಪಡೆದ ಎಚ್ಕೆ ಸುರೇಶ್‌
ದಾವಣಗೆರೆ, ಬಾಗಲಕೋಟೆ ಕ್ಷೇತ್ರ ನಮ್ದೆ : ಡಿ.ಕೆ.ಶಿವಕುಮಾರ್‌