ಕಾಕ್ರೋಚ್‌, ಕಾಂಗ್ರೆಸ್‌ ಪಕ್ಷ ಎರಡೂ ಒಂದೇ: ಪ್ರಿಯಾಂಕ್‌ ಖರ್ಗೆ

Published : Oct 17, 2026, 10:10 AM IST
Priyank Kharge

ಸಾರಾಂಶ

''''ಕಾಕ್ರೋಚ್ ಜನತಾ ಪಾರ್ಟಿ ಮತ್ತು ಕಾಂಗ್ರೇಸ್ ಎರಡೂ ಒಂದೇ, ಹೆದರಬೇಡಿ ನಿಮ್ಮನ್ನು ಇಲ್ಲಿ ಯಾರೂ ಬಂಧಿಸುವುದಿಲ್ಲ’ ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಯು ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಪ್ರಿಯಾಂಕ್‌ ಖರ್ಗೆ ನಡುವೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ಬೆಂಗಳೂರು : ''''ಕಾಕ್ರೋಚ್ ಜನತಾ ಪಾರ್ಟಿ ಮತ್ತು ಕಾಂಗ್ರೇಸ್ ಎರಡೂ ಒಂದೇ, ಹೆದರಬೇಡಿ ನಿಮ್ಮನ್ನು ಇಲ್ಲಿ ಯಾರೂ ಬಂಧಿಸುವುದಿಲ್ಲ’ ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಯು ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಪ್ರಿಯಾಂಕ್‌ ಖರ್ಗೆ ನಡುವೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ಗುರುವಾರ ಥಣಿಸಂದ್ರದ ಟ್ರಾಫಿಕ್ ಪಾರ್ಕ್ ಗುದ್ದಲಿ ಪೂಜೆ ಕಾರ್ಯಕ್ರಮ ಹಾಗೂ ಟ್ರಾಫಿಕ್ ಪೊಲೀಸರಿಗೆ ಬೈಕ್ ವಿತರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರು, ಕಾಕ್ರೋಚ್ ಜನತಾ ಪಾರ್ಟಿ ಮತ್ತು ಕಾಂಗ್ರೆಸ್ ಎರಡೂ ಒಂದೇ ಎಂದಿದ್ದರು.

ವಿದ್ಯಾರ್ಥಿಗಳ ಬಳಿ ಸಂಭಾಷಣೆ ವೇಳೆ, ‘ನೀವೆಲ್ಲ ಜೆನ್ ಝಿ ಗಳಿದ್ದೀರ. ನೀವು ಕಾಂಗ್ರೆಸ್ಸಾ ಅಥವಾ ಕಾಕ್ರೋಚ್ ಜನತಾ ಪಾರ್ಟಿನಾ?’ ಎಂದು ಪ್ರಶ್ನೆ ಮಾಡಿದರು.

ಇದಕ್ಕೆ ಯಾವುದೇ ವಿದ್ಯಾರ್ಥಿಗಳು ಉತ್ತರ ನೀಡದಿದ್ದಾಗ ''''ಹೆದರಬೇಡಿ ನಿಮ್ಮನ್ನು ಇಲ್ಲಿ ಯಾರೂ ಬಂಧಿಸುವುದಿಲ್ಲ’ ಎಂದರು.

ಆಗ ಕೆಲ ವಿದ್ಯಾರ್ಥಿಗಳು ‘ಕಾಕ್ರೋಚ್.., ಕಾಕ್ರೋಚ್..’ ಮತ್ತೆ ಕೆಲವರು ‘ಕಾಂಗ್ರೆಸ್‌, ಕಾಂಗ್ರೆಸ್‌’ ಎಂದು ಕೂಗಿದರು.

ಈ ವೇಳೆ ಪ್ರಿಯಾಂಕ್‌, ‘ನೀವ್ಯಾರೂ ಇಲ್ಲಿ ಇಬ್ಭಾಗವಾಗಿ ಕೂಗಬೇಡಿ. ಕಾಕ್ರೋಚ್ ಜನತಾ ಪಾರ್ಟಿ ಮತ್ತು ಕಾಂಗ್ರೆಸ್ಎ ರಡೂ ಒಂದೇ ಬಿಡಿ’ ಎಂದು ಹೇಳಿದ್ದರು.

ಕುಮಾರಸ್ವಾಮಿಗೆ ಹೇಳಿಕೆಗೆ ತಿರುಗೇಟು:

ಪ್ರಿಯಾಂಕ್ ಖರ್ಗೆ ಅವರ ಈ ಹೇಳಿಕೆಗೆ ಎಚ್.ಡಿ.ಕುಮಾರಸ್ವಾಮಿ, ‘ಕಾಂಗ್ರೆಸ್ ಮತ್ತು ಸಿಜೆಪಿ ಎರಡೂ ಒಂದೇ. ಸಿಜೆಪಿ ಅವರು ಏನು ಬೇಕಾದರೂ ಗಲಾಟೆ ಮಾಡಿದರೂ ನಾವು ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ. ಆ ಮೂಲಕ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಪರೋಕ್ಷವಾಗಿ ಕಾಂಗ್ರೆಸ್‌ ಫಂಡಿಂಗ್‌ ಒಪ್ಪಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.

ಇದಕ್ಕೆ ಶುಕ್ರವಾರ ಎಕ್ಸ್ ಖಾತೆ ಪೋಸ್ಟ್ ಮೂಲಕ ತಿರುಗೇಟು ನೀಡಿರುವ ಪ್ರಿಯಾಂಕ್ ಖರ್ಗೆ, ‘ಕಾಂಗ್ರೆಸ್ ಮತ್ತು ಸಿಜೆಪಿ ಎರಡೂ ಚುನಾವಣಾ ಆಯೋಗವನ್ನು ಸ್ವಚ್ಛಗೊಳಿಸಬೇಕೆಂದು ಹೇಳಿದ್ದಕ್ಕೆ ಕುಮಾರಣ್ಣನಿಗೆ ಮತ್ತೆ ಬೇಸರವಂತೆ. ಪ್ರಧಾನಿ ತಮ್ಮದೇ ಸಚಿವರನ್ನು ಮೂಲೆಗುಂಪು ಮಾಡಿರುವಾಗ, ವಿವಾದಗಳನ್ನು ಸೃಷ್ಟಿಸುವುದೇ ಇವರ ಕೆಲಸವಾಗಿಬಿಟ್ಟಿದೆ’ ಎಂದು ಕಿಡಿಕಾರಿದ್ದಾರೆ.

ಇನ್ನು ಬಲಿತ ದಲಿತ ಮೀಸಲಾತಿ ಸ್ಥಾನ ಬಿಟ್ಟುಕೊಡಲಿ ಎಂಬ ಹೇಳಿಕೆಗೆ, ‘ನಾನು ನನ್ನ ಸ್ಥಾನ ತೆರವು ಮಾಡಬೇಕಂತೆ. ಆದರೆ ಅವರ ಕುಟುಂಬದ 8 ಮಂದಿ ತಮ್ಮ ಸ್ಥಾನಗಳಲ್ಲಿ ಮುಂದುವರಿಯಬಹುದು. ನನ್ನ ಒಂದು ಸ್ಥಾನ ಅಪರಾಧ. ಅವರ ಕುಟುಂಬದ ಎಂಟು ಸ್ಥಾನಗಳು ಜನ್ಮಸಿದ್ಧ ಹಕ್ಕು?

ಇದೇನಾ ಇವರ ನ್ಯಾಯ? ಇದೇನಾ ಇವರ ಪ್ರಜಾಪ್ರಭುತ್ವದ ವ್ಯಾಖ್ಯಾನ?’ ಎಂದು ಪ್ರಶ್ನಿಸಿದ್ದಾರೆ.

- ನೀವು ಕಾಂಗ್ರೆಸ್ಸಾ, ಕಾಕ್ರೋಚ್‌ ಜನತಾ ಪಾರ್ಟಿನಾ?

- ಜೆನ್‌ಝೀಗಳಿಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನೆ

- ಜೆನ್‌ಝೀಗಳು ಉತ್ತರಿಸದಾಗ ಧೈರ್ಯ ತುಂಬಲು ಯತ್ನ

- ಹೆದರಬೇಡಿ ಇಲ್ಲಿ ನಿಮ್ಮನ್ಯಾರೂ ಬಂಧಿಸಲ್ಲ ಎಂದ ಸಚಿವ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನನಗೆ 4ನೇ ಬಾರಿಗೆ ಹಾರ್ಟ್‌ ಸರ್ಜರಿ ಆಗ್ಲೆಂದು ಪ್ರಿಯಾಂಕ್‌ ಬಯಕೆ: ಎಚ್ಡಿಕೆ
56% ಮೀಸಲಿಗಾಗಿ ಸುಪ್ರೀಂಗೆ ಮೊರೆ : ಸಂಪುಟ ಸಭೆ ನಿರ್ಧಾರ