ಮೊಬೈಲ್‌ ಕರೆ ಶುಲ್ಕ ಏರಿಕೆ: ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್‌ ತೀವ್ರ ತರಾಟೆ

KannadaprabhaNewsNetwork |  
Published : Jul 06, 2024, 12:50 AM ISTUpdated : Jul 06, 2024, 06:22 AM IST
Rahul Gandhi Spoke on Agniveer scheme

ಸಾರಾಂಶ

ದೇಶದ ಪ್ರಮುಖ ಮೂರು ಮೊಬೈಲ್‌ ಸೇವಾ ಕಂಪನಿಗಳ ಮೊಬೈಲ್‌ ಚಂದಾ ಶುಲ್ಕವನ್ನು ಏರಿಕೆ ಮಾಡಿರುವ ಕುರಿತು ಕಾಂಗ್ರೆಸ್‌ ಶುಕ್ರವಾರ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ನವದೆಹಲಿ: ದೇಶದ ಪ್ರಮುಖ ಮೂರು ಮೊಬೈಲ್‌ ಸೇವಾ ಕಂಪನಿಗಳ ಮೊಬೈಲ್‌ ಚಂದಾ ಶುಲ್ಕವನ್ನು ಏರಿಕೆ ಮಾಡಿರುವ ಕುರಿತು ಕಾಂಗ್ರೆಸ್‌ ಶುಕ್ರವಾರ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಭಾರತದಲ್ಲಿ 109 ಕೋಟಿ ಜನ ಮೊಬೈಲ್‌ಗಳನ್ನು ಬಳಕೆ ಮಾಡುತ್ತಿದ್ದು, ಮೊಬೈಲ್‌ ಸೇವಾ ಕಂಪನಿಗಳು ಮೊಬೈಲ್‌ ಚಂದಾ ಶುಲ್ಕವನ್ನು ದುಪ್ಪಟ್ಟು ಮಾಡಿವೆ. ಈ ದರಗಳನ್ನು ಏರಿಕೆ ಮಾಡಲು ಕೇಂದ್ರ ಯಾವುದೇ ವಿಚಾರಣೆ ಇಲ್ಲದೆ ಹೇಗೆ ಅನುಮತಿ ನೀಡಿದೆ ಪ್ರಶ್ನಿಸಿದೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ ಮಾತನಾಡಿ, ಮೋದಿ 3.0 ಅವಧಿಯಲ್ಲೂ ಬಂಡವಾಳಶಾಹಿಗಳ ಅಭಿವೃದ್ಧಿ ಮುಂದುವರೆದಿದೆ. ರಿಲಯನ್ಸ್‌ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್‌ ಐಡಿಯಾ ಮೊಬೈಲ್ ಸೇವಾ ಕಂಪನಿಗಳ ಲಾಭಕೋರತನಕ್ಕೆ ಕೇಂದ್ರ ಅನುಮತಿ ನೀಡುವ ಮೂಲಕ 109 ಕೋಟಿ ಮೊಬೈಲ್‌ ಬಳಕೆದಾರರನ್ನು ಸುಲಿಗೆ ಮಾಡುತ್ತಿದೆ ಎಂದು ಕಿಡಿಕಾರಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ