ಕಾಂಗ್ರೆಸ್‌ನಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ: ವಿಪಕ್ಷ ನಾಯಕ ಆರ್.ಅಶೋಕ್

KannadaprabhaNewsNetwork | Published : Jan 29, 2024 1:30 AM

ಸಾರಾಂಶ

ಬಾಯಲ್ಲಿ ಶ್ರೀರಾಮ ಇದ್ದರೆ ಸಾಲದು ಮನಸ್ಸಿನಲ್ಲೂ ಇರಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಸಿನಲ್ಲಿ ಟಿಪ್ಪು ಸುಲ್ತಾನ್ ಇದ್ದರೆ. ಹಳ್ಳಿ ಹಳ್ಳಿಯಲ್ಲೂ ರಾಮನ ದೇವಸ್ಥಾನ ಕಟ್ಟಿದ್ದೇವೆ ಅಂತಾ ಹೇಳುತ್ತಾರೆ. ಇದು ಹಿಂದೂ ವಿರೋಧಿ ನೀತಿ. ಹನುಮನ ವಿಚಾರದಲ್ಲಿ ಕಾಂಗ್ರೆಸ್ ದ್ವೇಷದ ರಾಜಕೀಯ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾಂಗ್ರೆಸ್ ಸರ್ಕಾರದಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಏನೇ ಆದರೂ ಸರ್ಕಾರವೇ ಇದಕ್ಕೆ ನೇರ ಹೊಣೆ. ಮಂಡ್ಯದಲ್ಲಿ ಅನುಮತಿ ಪಡೆದು 108 ಅಡಿ ಎತ್ತರದ ಧ್ವಜ ಹಾಕಿ ಹನುಮಂತನ ಬಾವುಟ ಕಿತ್ತು ಹಾಕಿರುವುದಕ್ಕೆ ಕಾಂಗ್ರೆಸ್ ಕಾರಣ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.

ಗ್ರಾಪಂನಿದ ರೆಜ್ಯುಲೇಷನ್ ಆಗಿ ಫರ್ಮಿಷನ್ ಕೂಡ ತೆಗೆದುಕೊಳ್ಳಲಾಗಿದೆ. ಇದನ್ನು ಒಂದು ದಿನದಲ್ಲಿ ಹಾಕಿಲ್ಲ. ಇದರಲ್ಲಿ ಉದ್ಘಾಟನೆಗೆ ಕಾಂಗ್ರೆಸ್ ಕರೆದಿಲ್ಲ ಎಂಬುದೇ ಒಂದು ಕಾರಣಕ್ಕೆ ಕಾಂಗ್ರೆಸ್ ಚಿತಾವಣೆ ಮಾಡಿದೆ ಎಂದರು.

ಭಯೋತ್ಪಾದನೆಗೆ ಯಾರು ಬಿರಿಯಾನಿ ಕೊಡುತ್ತಿರುವವವರು ಮತ್ತು ಬ್ರದರ್ಸ್ ಎಂದು ಯಾರು ಹೇಳುತ್ತಾರೆ ಎಂಬುದು ಈ ರಾಜ್ಯದ ಜನರಿಗೆ ತಿಳಿದಿದೆ. ರಾಷ್ಟ್ರಧ್ವಜವನ್ನು ಮಧ್ಯಾಹ್ನದ ಹೊತ್ತಿನಲ್ಲಿ ಹಾರಿಸಿದೆ. ಇವರಿಗೆ ಮಾನ ಮರ್ಯಾದೆ ಇದಿಯಾ ಎಂದು ಪ್ರಶ್ನಿಸಿದರು.

ರಾಷ್ಟ್ರಧ್ವಜಕ್ಕೆ ಕಾನೂನಿಲ್ಲವೇ ಇವರಿಗೆ ರಾಷ್ಟ್ರಧ್ವಜ ಹಾಕಬೇಕಿಂದ್ದರೆ ಅದಕ್ಕಿಂತ ಎತ್ತರಕ್ಕೆ ಮತ್ತೊಂದು ಕಂಬವನ್ನು ಹಾಕಿ ಹಾರಿಸಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.

ಇದು ರಾಮ ಭಕ್ತರು ಕಟ್ಟಿರುವ ಕಂಬ. ಕಳೆದ 40 ವರ್ಷಗಳಿಂದಲೂ ರಾಮ ಭಜನೆ ನಡೆಯುತ್ತಿದೆ. ಜೊತೆಗೆ ಧ್ವಜದ ಸ್ತಂಭವೂ ಇತ್ತು. ಇವರಿಗೆ ರಾಷ್ಟ್ರಧ್ವಜವಲ್ಲ ಮುಖ್ಯವಾಗಿರೋದು ಕೇವಲ ಹನುಮನ ಧ್ವಜವನ್ನು ತೆಗೆದು ಹಾಕುವುದೇ ಉದ್ದೇಶವಾಗಿದೆ. ಇದು ಕಾನೂನಿನ ವಿರುದ್ಧವಾಗಿದ್ದರೆ ಗ್ರಾಪಂ ನೊಟೀಸ್ ನೀಡಬೇಕಾಗಿತ್ತು. ಜೊತೆಗೆ ಕೋರ್ಟ್‌ಗೆ ಹೋಗಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಾಯಲ್ಲಿ ಶ್ರೀರಾಮ ಇದ್ದರೆ ಸಾಲದು ಮನಸ್ಸಿನಲ್ಲೂ ಇರಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಸಿನಲ್ಲಿ ಟಿಪ್ಪು ಸುಲ್ತಾನ್ ಇದ್ದರೆ. ಹಳ್ಳಿ ಹಳ್ಳಿಯಲ್ಲೂ ರಾಮನ ದೇವಸ್ಥಾನ ಕಟ್ಟಿದ್ದೇವೆ ಅಂತಾ ಹೇಳುತ್ತಾರೆ. ಇದು ಹಿಂದೂ ವಿರೋಧಿ ನೀತಿ. ಹನುಮನ ವಿಚಾರದಲ್ಲಿ ಕಾಂಗ್ರೆಸ್ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ದೂರಿದರು.

ಘಟನೆ ವಿಚಾರವಾಗಿ ಅಮಾಯಕರ ಮೇಲೆ ಲಾಠಿ ಚಾರ್ಜ್ ಮಾಡಿ, 144 ಸಕ್ಷನ್ ಹಾಕಿದ್ದಾರೆ. ಕುಕ್ಕರ್ನಲ್ಲಿ ಬಾಂಬ್ ಇಟ್ಟುಕೊಂಡು ಬಂದವರನ್ನು ಬಾಯ್ ಅಂತಾರೆ. ಇಂತಹ ಕೃತ್ಯ ಮಾಡಿದವರಿಗೆ ಏನು ಹೇಳಬೇಕು ಎಂದು ಕಿಡಿಕಾರಿದರು.

Share this article