ದಲಿತರು-ಅಲ್ಪಸಂಖ್ಯಾತರ ಹೆಸರಲ್ಲಿ ಕಾಂಗ್ರೆಸ್ ರಾಜಕಾರಣ: ಮಾಜಿ ಶಾಸಕ ಡಾ.ಕೆ.ಅನ್ನದಾನಿ

KannadaprabhaNewsNetwork |  
Published : Mar 16, 2024, 01:46 AM IST
ಮಾಜಿ ಶಾಸಕ ಡಾ.ಕೆ.ಅನ್ನದಾನಿ | Kannada Prabha

ಸಾರಾಂಶ

ಕುಮಾರಸ್ವಾಮಿ ಅವರು ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದಾರೆ. ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ರೈತರ ಸಾಲ ಮನ್ನಾ ಮಾಡಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನೀವುಗಳು ನೀಡಿದ ಫಲಿತಾಂಶವನ್ನು ಇನ್ನೂ ಅರಗಿಸಿಕೊಳ್ಳಲಾಗಿಲ್ಲ. ಕುಮಾರಸ್ವಾಮಿ, ದೇವೇಗೌಡರ ಆಶೀರ್ವಾದ ಪಡೆದು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ.

ಕನ್ನಡಪ್ರಭ ವಾರ್ತೆ ಮಂಡ್ಯ

ದಲಿತರು, ಅಲ್ಪಸಂಖ್ಯಾತರ ಹೇಸರೇಳಿಕೊಂಡು ಕಾಂಗ್ರೆಸ್ ಹಾಗೂ ನಾಯಕರು ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ಅನ್ನದಾನಿ ಆರೋಪಿಸಿದರು.

ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಜೆಡಿಎಸ್ ಲೋಕಸಭಾ ಚುನಾವಣಾ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಎಲ್ಲ ಹಂತದಲ್ಲೂ ದಲಿತರಿಗೆ ನ್ಯಾಯ ಹಾಗೂ ಅಧಿಕಾರ ಸಿಕ್ಕಿದೆ ಎಂದರೆ ಅದು ಎಚ್.ಡಿ. ದೇವೇಗೌಡರು ಕಲ್ಪಿಸಿಕೊಟ್ಟ ಮೀಸಲಾತಿಯಿಂದ. ಮುಸಲ್ಮಾನರಿಗೂ ಮೀಸಲಾತಿ ನೀಡಿದ್ದು ದೇವೇಗೌಡರು. ಜಾತ್ಯತೀತ ಜನತಾ ದಳ ಬಡವರ ಪರವಾಗಿರುವ ಪಕ್ಷ. ಮುಸಲ್ಮಾನರು, ರೈತರು, ಹಿಂದುಳಿದವರ ಪರವಾಗಿದೆ ಎಂದರು.

ಕುಮಾರಸ್ವಾಮಿ ಅವರು ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದಾರೆ. ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ರೈತರ ಸಾಲ ಮನ್ನಾ ಮಾಡಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನೀವುಗಳು ನೀಡಿದ ಫಲಿತಾಂಶವನ್ನು ಇನ್ನೂ ಅರಗಿಸಿಕೊಳ್ಳಲಾಗಿಲ್ಲ. ಕುಮಾರಸ್ವಾಮಿ, ದೇವೇಗೌಡರ ಆಶೀರ್ವಾದ ಪಡೆದು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ. ಲೋಕಸಭಾ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾಗಲಿ, ಅವರ ಪರ ಕೆಲಸ ಮಾಡಿ ಗೆಲ್ಲಿಸೋಣ ಎಂದರು.

ಒಕ್ಕಲಿಗರಿಂದ ಗೆದ್ದವರೇ ನಿರ್ನಾಮಕ್ಕೆ ಪಿತೂರಿ: ಜಿ.ಟಿ.ದೇವೇಗೌಡ

ಒಕ್ಕಲಿಗರ ಮತ ಪಡೆದು ಗೆದ್ದು ಬೀಗುತ್ತಿರುವವರೇ ಒಕ್ಕಲಿಗರನ್ನು ನಿರ್ನಾಮ ಮಾಡಲು ಮುಂದಾಗಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಕಿಡಿಕಾರಿದರು.

ಒಕ್ಕಲಿಗರ ಮತ ಪಡೆದು ಇದೀಗ ಒಕ್ಕಲಿಗರನ್ನೇ ತುಳಿಯಲು ಮುಂದಾಗಿದ್ದಾರೆ. ನಮ್ಮ ಪಕ್ಷದ್ದು ಅಧಿಕಾರ ಅನುಭವಿಸಿ, ಸಹಾಯ ಪಡೆದು ಈಗ ಕಾಂಗ್ರೆಸ್ ಸೇರ್ಪಡೆಗೊಂಡು ಅಕಾರ ಪಡೆದು ಕುಮಾರಸ್ವಾಮಿ ವಿರುದ್ಧವೇ ಮಾತನಾಡುತ್ತಾರೆ ಎಂದು ಚಲುವರಾಯಸ್ವಾಮಿ, ಬಾಲಕೃಷ್ಣ ವಿರುದ್ಧ ಹರಿಹಾಯ್ದರು.

ಚಲುವರಾಯಸ್ವಾಮಿಯನ್ನು ರಾಜಕೀಯವಾಗಿ ಸೃಷ್ಟಿ ಮಾಡಿದವರು ದೇವೇಗೌಡರ ಪಕ್ಷ ಮತ್ತು ಜಿಲ್ಲೆಯವರು ಎಂದು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಜಿಲ್ಲೆಯ ಜನ ಒಮ್ಮೆ ಎಸ್.ಎಂ.ಕೃಷ್ಣ ಅವರಿಗೆ ಬೆಂಬಲ ನೀಡಿದ್ದರು. ದೇವೇಗೌಡರು ಸಿಎಂ ಆಗಲೆಂದು ಸಂಪೂರ್ಣ ಬೆಂಬಲ ನೀಡಿದ್ದರು. ಕುಮಾರಸ್ವಾಮಿಯನ್ನೂ ಮುಖಮಂತ್ರಿ ಮಾಡಿದ್ದೀರಿ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು
ಮತಚೋರಿ ಬಗ್ಗೆ ದಿಲ್ಲೀಲಿ ಕೈ ನಾಯಕರ ರಣಕಹಳೆ