ಮಾಜಿ ಸಚಿವ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಭಿಪ್ರಾಯ
ಕನ್ನಡಪ್ರಭ ವಾರ್ತೆ ಮಳವಳ್ಳಿದೇಶದಲ್ಲಿ ಪ್ರತಿಯೊಬ್ಬರು ಸಮಾನತೆಯಿಂದ ನೆಮ್ಮದಿ ಜೀವನ ಸಾಗಿಸಬೇಕೆಂಬುದು ಕಾಂಗ್ರೆಸ್ ಪಕ್ಷದ ಆಶಯ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದರು.
ತಾಲೂಕಿನ ಕಲ್ಕುಣಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಶಾಲೆ ಕಟ್ಟಡ ಕಾಮಗಾರಿಗೆ ಪೂಜಾ ಕಾರ್ಯವನ್ನು ಹಿಂದೂ ಧರ್ಮಕ್ಕೆ ಸೇರಿದ ಪುರೋಹಿತ ಪೂಜೆ ಮಾಡುತ್ತಿದ್ದಾರೆ. ಮೀಸಲು ಕ್ಷೇತ್ರದ ಶಾಸಕನ್ನಾಗಿ ನಾನು ಗುದ್ದಲಿ ಪೂಜೆಯನ್ನು ಮಾಡುತ್ತಿದ್ದೇನೆ. ಹಿಂದುಳಿದ ಸಮುದಾಯದ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದರು.ಎಲ್ಲರೂ ಒಗ್ಗೂಡಬೇಕು ಎನ್ನುವುದೇ ಕಾಂಗ್ರೆಸ್ ಸಿದ್ಧಾಂತವಾಗಿದೆ. ಇದೇ ರೀತಿ ಎಲ್ಲ ಸಮುದಾಯ ಮತ್ತು ಎಲ್ಲಾ ಧರ್ಮದ ಜನರು ಸಹೋದರರಂತೆ ಬದುಕುವುದರ ಮೂಲಕ ದೇಶ ಕಟ್ಟುವ ಕಾಯಕದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕೆಂದರು.
ನನ್ನ ಅಧಿಕಾರದ ಅವಧಿಯಲ್ಲಿ ಶಿಕ್ಷಣ, ಆರೋಗ್ಯ ಮತ್ತು ನೀರಾವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಸರ್ಕಾರಿ ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಶಿಕ್ಷಕರ ಕೊರತೆ ನಿವಾರಿಸಲಾಗಿದೆ. ಹೊಸ ಶಾಲೆಗಳ ಆರಂಭಕ್ಕೂ ಚಿಂತನೆ ನಡೆಸಲಾಗಿದೆ. ಗ್ರಾಮೀಣ ವಿದ್ಯಾರ್ಥಿಗಳು ಆಧುನಿಕ ತಕ್ಕಂತೆ ಶಿಕ್ಷಣ ಕಲಿಯುವ ವಾತಾವರಣವನ್ನು ನಿರ್ಮಿಸಲಾಗುವುದು ಎಂದರು.ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಭಾರತೀ, ಉಪಾಧ್ಯಕ್ಷ ಮಾಧನಾಯಕ್, ಸದಸ್ಯರಾದ ವೆಂಕಟೇಶ್, ನಾಗೇಂದ್ರ, ಪರಮೇಶ್, ಮಂಗಳಗೌರಿ, ರೇಖಾ, ಗಂಗಾ, ಕುಮಾರಿ, ಶಶಿಕಲಾ, ಮಹಾಕ್ಷ್ಮಿ, ವಿಜಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ತಾಪಂ ಮಾಜಿ ಅಧ್ಯಕ್ಷ ವಿಶ್ವಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಷ್, ಮುಖಂಡರಾದ ಶಿವಪ್ಪ, ಅಮಿರ್‌ಜಾನ್, ಸೇವುಲ್, ಶಿವಮಾದೇಗೌಡ ಸೇರಿದಂತೆ ಇತರರು ಇದ್ದರು.5ಕೆಎಂಎನ್ ಡಿ11
ಮಂಡ್ಯ ತಾಲೂಕು ಕಲ್ಕುಣಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗುದ್ದಲಿ ಪೂಜೆ ನೆರೆವೇರಿಸಿದರು.