ನಾನು ಸಂಸದನಾಗಲು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಪ್ರತಿಯೊಬ್ಬ ಮತದಾರನ ಸಹಕಾರ ನೆರವಿನಿಂದ ಸಾಧ್ಯವಾಯಿತು ಹಾಗೂ ದೇಶದ ಜನತೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಹೆಬ್ಬಯಕೆಯೊಂದಿಗೆ ಮತ ಚಲಾಯಿಸಿದ್ದರಿಂದ ನಾನು ಗೆಲ್ಲಲು ಸಾಧ್ಯವಾಯಿತೆಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು..
ಚಿಂತಾಮಣಿ : ನಾನು ಸಂಸದನಾಗಲು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಪ್ರತಿಯೊಬ್ಬ ಮತದಾರನ ಸಹಕಾರ ನೆರವಿನಿಂದ ಸಾಧ್ಯವಾಯಿತು ಹಾಗೂ ದೇಶದ ಜನತೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಹೆಬ್ಬಯಕೆಯೊಂದಿಗೆ ಮತ ಚಲಾಯಿಸಿದ್ದರಿಂದ ನಾನು ಗೆಲ್ಲಲು ಸಾಧ್ಯವಾಯಿತೆಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು..
ಇತ್ತೀಚಿಗೆ ಸಚಿವ ಡಾ.ಎಂ.ಸಿ.ಸುಧಾಕರ್ ಎಸ್.ಮುನಿಸ್ವಾಮಿರಿಗೆ ಟಿಕೆಟ್ ಕೊಡಿಸಿ ಅವರ ಗೆಲುವಿಗೆ ನನ್ನ ಹಾಗೂ ಶಾಸಕ ಕೊತ್ತೂರು ಮಂಜುನಾಥ್‌ರ ಶ್ರಮ ಏನೆಂಬುದನ್ನು ಮರೆತು ಮುನಿಸ್ವಾಮಿ ಮಾತನಾಡುತ್ತಿದ್ದಾರೆಂದು ಟೀಕಿಸಿದ್ದರು. ಇದಕ್ಕೆ ಮುನಿಸ್ವಾಮಿ ಉತ್ತರಿಸಿದ್ದಾರೆ.
ಟಿಕೆಟ್ ಕೊಡಿಸಿದ್ದು ಡಾ.ಸುಧಾಕರ್
ವಕ್ಫ್ ವಿಚಾರದ ವಿರುದ್ಧ ನಡೆಸುತ್ತಿರುವ ಹೋರಾಟ ಹಿನ್ನಲೆಯಲ್ಲಿ ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದ ಸರ್ವೇ ನಂಬರ್13/1cಮತ್ತು 13/3 ರ ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, 2019ರಲ್ಲಿ ತಮಗೆ ಟಿಕೆಟ್ ದೊರೆಯಲು ಡಾ ಎಂ.ಸಿ.ಸುಧಾಕರ್ ಬಿ.ಫಾರಂಗೆ ಸಹಿ ಮಾಡಿದ್ದರೆ, ಅವರು ಆಗ ಯಾವ ಪಕ್ಷದಲ್ಲಿದ್ದರೂ, ಯಾವ ಹುದ್ದೆಯಲ್ಲಿದ್ದರೆಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ.ಅಧಿಕಾರಿಗಳ ವಿರುದ್ಧ ಆಕ್ರೋಶ
ವಿವಾದಿತ ಸ್ಥಳದ ಸಮೀಪ ಎಸ್.ಮುನಿಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದಾಗ ವಿವಾದಿತ ಜಮೀನಿನ ಮಾಲೀಕ ನಾಗೇಶ್ ವಿವಾದಿತ ಸ್ಥಳ ಪ್ರವೇಶಿಸಿದ್ದರೆಂಬ ಹಿನ್ನಲೆಯಲ್ಲಿ ಪೋಲಿಸರು ಆತನನ್ನು ಬಲವಂತವಾಗಿ ಹೊರಹಾಕಲು ಯತ್ನಿಸಿದಾಗ ತೀವ್ರ ಕೆಂಡಾಮಂಡಲರಾದ ಮುನಿಸ್ವಾಮಿ ಇದು ಹಿಂದೂಸ್ತಾನ, ಪಾಕಿಸ್ತಾನವಲ್ಲ, ಈ ಜಮೀನು ಪುಕ್ಕಟೆ ಬಂದಿರುವುದಿಲ್ಲ ೧೯೬೨ರಲ್ಲಿ ಕ್ರಯ ಮಾಡಿಕೊಂಡಿರುವ ಜಮೀನು, ತಮ್ಮ ಜಮೀನಿಗೆ ರೈತರನ್ನು ಪ್ರವೇಶ ಮಾಡದಂತೆ ತಡೆಯಲು ನಿಮಗೇನು ಅಧಿಕಾರವಿದೆ. ನಿಮ್ಮ ಈ ವರ್ತನೆ ಖಂಡನೀಯ ಇದರ ವಿರುದ್ಧ ಪ್ರತಿಭಟನೆ ನಡೆಸಬೇಕಾದಿತೆಂದು ಎಚ್ಚರಿಸಿದರು.
ಅಧಿಕಾರಿಗಳ ಜಾಣಕುರುಡು
ಚಿಂತಾಮಣಿ ಸರ್ವೇ ನಂಬರ್ 4 ಮುರುಗಮಲ್ಲದ ಗುಂಡು ತೋಪಿನಲ್ಲಿ ದರ್ಗಾ ಅಭಿವೃದ್ಧಿ ಮಾಡಿಕೊಂಡಿರುವುದನ್ನು ಜಾಣಕುರುಡರಂತೆ ಜಾಣ ಕಿವುಡರಂತೆ ಏನೂ ಅರಿಯದಂತೆ ನಡೆದುಕೊಳ್ಳುತ್ತಿರುವ ಸಚಿವ ಹಾಗೂ ರಾಜ್ಯ ಸರ್ಕಾರದ ಧೋರಣೆ ಖಂಡನೀಯ ಒಂದೊಮ್ಮೆ ರೈತರೇನಾದರೂ ಗುಂಡುತೋಪನ್ನು ಉಳುಮೆ ಮಾಡಿಕೊಂಡಿದ್ದರೆ ಸುಮ್ಮನೆ ಬಿಡುತ್ತಿತ್ತೆ ದೇಶಕ್ಕೆ ಅನ್ನ ನೀಡುವ ರೈತರಿಗೊಂದು ನ್ಯಾಯ ತಮಗೆ ಓಟು ನೀಡಿದ ಒಂದು ಕೋಮಿನವರಿಗೆ ಮತ್ತೊಂದು ನ್ಯಾಯವೇ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಬಿಜೆಪಿ ಮುಖಂಡ ದೇವನಹಳ್ಳಿ ವೇಣುಗೋಪಾಲ್ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.