ಬೋಗಸ್‌ ‘ಗ್ಯಾರಂಟಿ’ ಹೆಸರಿನಲ್ಲಿ ಭ್ರಷ್ಟಾಚಾರ: ಪ್ರಹ್ಲಾದ್ ಜೋಶಿ

KannadaprabhaNewsNetwork |  
Published : Feb 13, 2024, 12:50 AM ISTUpdated : Feb 13, 2024, 07:38 AM IST
Pralhad joshi

ಸಾರಾಂಶ

ರಾಜ್ಯಕ್ಕೆ ಕೇಂದ್ರ ಸರ್ಕಾರ ತೆರಿಗೆ ಕೊಡುವ ವಿಚಾರ ನಮ್ಮ ಕಾಲದಲ್ಲಿ ೨ ಲಕ್ಷ ೬೧ ಸಾವಿರ ಕೋಟಿ ರಾಜ್ಯಕ್ಕೆ ಕೊಟ್ಟಿದ್ದೇವೆ. ಯುಪಿಎ ಸರ್ಕಾರದಲ್ಲಿ ೬೦ ಸಾವಿರ ಕೋಟಿ ಕೊಟ್ಟಿದ್ದಾರೆ ಅಷ್ಟೇ, ೨೫೬ ಪರ್ಸೆಂಟ್ ನಮ್ಮ ಸರ್ಕಾರ ಹೆಚ್ಚಿಗೆ ಕೊಟ್ಟಿದೆ

ಕನ್ನಡಪ್ರಭ ವಾರ್ತೆ ಕೋಲಾರ

ರಾಜ್ಯದಲ್ಲಿ ಎಲ್ಲಿಯೂ ಅಭಿವೃದ್ಧಿ ಕೆಲಸ ಆಗ್ತಿಲ್ಲ, ಕಾಂಗ್ರೆಸ್ ಶಾಸಕರೆ ಇದರ ವಿರುದ್ಧ ತಕರಾರು ಮಾಡಿದ್ದಾರೆ, ಬೋಗಸ್ ಗ್ಯಾರಂಟಿ ಹೆಸರಿನ ಮೂಲಕ ಭ್ರಷ್ಟಾಚಾರ ಮಾಡುತ್ತಿದ್ದಾರೆ.

 ಕಾಂಗ್ರೆಸ್ ಸರ್ಕಾರ ವಿರುದ್ದ ಖುದ್ದು ಕೆಂಪಣ್ಣ ನವರೆ ಆರೋಪ ಮಾಡಿದ್ದಾರೆ. ಸಿಎಂ ವಿರುದ್ಧವೇ ಬಂಡಾಯ ಎಬ್ಬಿಸುವ ಕೆಲಸ ಆಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ಮುಳಬಾಗಲು ತಾಲೂಕಿನ ಕುರುಡುಮಲೆ ದೇವಾಲಯಕ್ಕೆ ಭೇಟಿ ನೀಡಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ತಮಿಳುನಾಡು ವಿಧಾನಸಭಾ ಕಲಾಪದಲ್ಲಿ ರಾಜ್ಯಪಾಲರ ನಡೆ ಕುರಿತು ರಾಜ್ಯಪಾಲರ ಮಾತಿನ ಅರ್ಥ ಗೊತ್ತಿಲ್ಲ.

ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡೋದಕ್ಕೆ ನಿರಾಕರಿಸಬಹುದು. ಗ್ಯಾರಂಟಿ ಕುರಿತು ಕರ್ನಾಟಕ ರಾಜ್ಯಪಾಲ ಮೆಚ್ಚುಗೆ ವಿಚಾರ, ಗ್ಯಾರಂಟಿ ಚೆನ್ನಾಗಿದೆ ಅಂತ ರಾಜ್ಯಪಾಲರು ಹೇಳಿರೋದು ಗೊತ್ತಿಲ್ಲ. ರಾಜ್ಯ ಸರ್ಕಾರ ಸಿದ್ದ ಮಾಡಿರುವ ಪ್ರತಿಯನ್ನುರಾಜ್ಯಪಾಲರು ಓದಿರುತ್ತಾರೆ ಎಂದರು.

ತಿನ್ನೋಕೆ ನಾನು, ಯುದ್ಧಕ್ಕೆ ನೀವು: ಬಿಜೆಪಿ ತಪ್ಪಿನಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಗ್ಯಾರಂಟಿಯಿಂದ ಅಲ್ಲ, ಆಗಾದ್ರೆ ರಾಜಸ್ಥಾನದಲ್ಲಿ ಏಕೆ ಅಧಿಕಾರಕ್ಕೆ ಬಂದಿಲ್ಲ.

ಕಾಂಗ್ರೆಸ್ ಪಾರ್ಟಿ ಅನ್ನೋದು ಸುಳ್ಳು ಪಾರ್ಟಿ, ರಾಜ್ಯಕ್ಕೆ ಕೇಂದ್ರ ಸರ್ಕಾರ ತೆರಿಗೆ ಕೊಡುವ ವಿಚಾರ ನಮ್ಮ ಕಾಲದಲ್ಲಿ ೨ ಲಕ್ಷ ೬೧ ಸಾವಿರ ಕೋಟಿ ರಾಜ್ಯಕ್ಕೆ ಕೊಟ್ಟಿದ್ದೇವೆ. 

ಯುಪಿಎ ಸರ್ಕಾರದಲ್ಲಿ ೬೦ ಸಾವಿರ ಕೋಟಿ ಕೊಟ್ಟಿದ್ದಾರೆ ಅಷ್ಟೇ, ೨೫೬ ಪರ್ಸೆಂಟ್ ನಮ್ಮ ಸರ್ಕಾರ ಹೆಚ್ಚಿಗೆ ಕೊಟ್ಟಿದೆ. ನರೇಂದ್ರ ಮೋದಿ ಕಾಲದಲ್ಲಿ ಬಜೆಟ್ ಗಾತ್ರವೂ ಹೆಚ್ಚಿದೆ. ತಿನ್ನೋದಕ್ಕೆ ನಾನು, ಯುದ್ಧಕ್ಕೆ ನೀವು ಹೋಗಿ ಅಂತ ಸಿಎಂ ಹೇಳ್ತಿದ್ದಾರೆ ಎಂದರು.

ಹಣಕಾಸು ಆಯೋಗದ ಮುಂದೆ ಹೇಳಲಿ: ರಾಜ್ಯಕ್ಕೆ ೧ ಲಕ್ಷ ೫೦ ಸಾವಿರ ಕೋಟಿ ಆದ್ರೂ ಯುಪಿಎ ಸರ್ಕಾರ ಕೊಡಬೇಕಿತ್ತು, ಯಾಕೆ ಕೊಟ್ಟಿಲ್ಲ. ನರೇಂದ್ರ ಮೋದಿ ಜಾತಿಯ ವಿಚಾರ ರಾಹುಲ್ ಗಾಂಧಿ ಹೇಳಿಕೆ ಕುರಿತು ರಾಹುಲ್ ಗಾಂಧಿ ಅವರಿಗೆ ಬುದ್ದಿ ಇಲ್ಲ. 

ಮೋದಿಯ ಜಾತಿಯ ಬಗ್ಗೆ ಮಾತನಾಡಿ ಈಗಾಗಲೇ ೨ ವರ್ಷ ಶಿಕ್ಷೆ ಆಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಮೋದಿ ಅವರ ಜಾತಿ ಒಬಿಸಿಗೆ ಸೇರಿದೆ.

ಯಾರೋ ಬರೆದು ಕೊಡೋದನ್ನು ರಾಹುಲ್ ಗಾಂಧಿ ಹೇಳಿದ್ದಾರೆ. ಬೇರೆ ವಿಚಾರ ಹೇಳಿ ಕೊಡುವವರೆಗೂ ಇದನ್ನೇ ಹೇಳ್ತಾರೆ ಎಂದು ತಿಳಿಸಿದರು.

ಕೋಲಾರ ಟಿಕೆಟ್‌ ತೀರ್ಮಾನ ಆಗಿಲ್ಲ: ಟಿಕೆಟ್ ಹಂಚಿಕೆ ಬಗ್ಗೆ ಇನ್ನು ತೀರ್ಮಾನ ವಾಗಿಲ್ಲ, ಕಮಿಟಿ ಮುಂದೆ ಚರ್ಚೆ ಮಾಡಿ ತೀರ್ಮಾನ. ಕೋಲಾರ ಬಿಜೆಪಿಯ ನಮ್ಮ ಬಲವಾದ ಕ್ಷೇತ್ರವಾಗಿದ್ದು, ಜೆಡಿಎಸ್‌ಗೆ ಬಿಟ್ಟು ಕೊಡುವ ಬಗ್ಗೆ ತೀರ್ಮಾನವಾಗಿಲ್ಲ.

ದೇವೇಗೌಡರ ಜೊತೆ ಮಾತನಾಡಿ ತೀರ್ಮಾನ ಆಗುತ್ತೆ ಎಂದು ಹೇಳಿದರು.ಬಿಜೆಪಿ-ಜೆಡಿಎಸ್ ಟಿಕೆಟ್ ಹಂಚಿಕೆ ಬಗ್ಗೆ ತೀರ್ಮಾನವಾಗಿಲ್ಲ. ಕೆಜಿಎಫ್ ಚಿನ್ನದ ಗಣಿ ಗುತ್ತಿಗೆ ನವೀಕರಣ ಕುರಿತು ಕೆಜಿಎಫ್ ದು ಲೀಸ್ ಅವಧಿ ಮುಕ್ತಾಯವಾಗಿದೆ. 

ನವೀಕರಣ ಮಾಡಿಕೊಂಡು ಬೇರೆ ರೀತಿಯ ಚಟುವಟಿಕೆ ಮಾಡ್ತೇವೆ. ಕೆಜಿಎಫ್‌ನಲ್ಲಿ ಪ್ರಮಾಣದಲ್ಲಿ ಚಿನ್ನ ಇಲ್ಲವೆಂದು ತಿಳಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಎಸ್ಕಾಂಗಳಿಂದ ₹110 ಕೋಟಿ ಹೆಚ್ಚುವರಿ ವೆಚ್ಚ : ಸಿಎಜಿ ವರದಿ
ಶಕ್ತಿಯಡಿ ಸರ್ಕಾರದಿಂದ ಸಾರಿಗೆ ನಿಗಮಕ್ಕೆ ₹4000 ಕೋಟಿ ಬಾಕಿ: ರೆಡ್ಡಿ