ಮಾನಸ ಕ್ಯಾಂಪಸ್ ನಲ್ಲಿ ಭ್ರಷ್ಟಾಚಾರ ವಿರೋಧಿ ಜಾಗೃತಿ ಸಪ್ತಾಹ । ಮ್ಯಾಥೋ ಥಾಮಸ್
ಕೊಳ್ಳೇಗಾಲ: ಭ್ರಷ್ಟಾಚಾರ ಎಂಬುದು ಒಂದು ಸಾಮಾಜಿಕ ಪಿಡುಗು, ಇದರ ನಿರ್ಮೂಲನೆಗೆ ನಾವೆಲ್ಲರೂ ಕೈಜೋಡಿಸಬೇಕು ಎಂದು ಲೋಕಾಯುಕ್ತ ಕಚೇರಿಯ ಉಪಾಧೀಕ್ಷಕ ಮಾಥ್ಯೂ ಥಾಮಸ್ ಹೇಳಿದರು.ಮಾನಸ ಕ್ಯಾಂಪಸ್ ನಲ್ಲಿ ಮಾನಸ ಟ್ರಸ್ಟ್, ಲೋಕಾಯುಕ್ತ ಕಚೇರಿ ಸಹಯೋಗದಲ್ಲಿ ಅಯೋಜಿಸಲಾಗಿದ್ದ ಭ್ರಷ್ಟಾಚಾರ ವಿರೋಧಿ ಜಾಗೃತಿ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉತ್ತಮವಾಗಿ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳುವ ಮೂಲಕ ಉನ್ನತ ಹುದ್ದೆ ಸಂಪಾದಿಸುವಂತಾಗಬೇಕು. ತಂದೆ, ತಾಯಿ, ಗುರು, ಹಿರಿಯರಿಗೆ ವಿಧೇಯರಾಗಬೇಕು. ಜೀವನದಲ್ಲಿ ನಿರ್ಧಿಷ್ಟ ಗುರಿಯನ್ನು ಬೆನ್ನಟ್ಟಿ ಸಾಧಿಸುವ ಮೂಲಕ ಪೋಷಕರಿಗೆ ಒಳ್ಳೆಯ ಗೌರವ ಸ್ಥಾನ ತಂದುಕೊಡಬೇಕು. ಮೌಲ್ಯಯುತ ಶಿಕ್ಷಣ ಪಡೆಯುವ ಮೂಲಕ ಉತ್ತಮ ಪ್ರಜೆಗಳಾಗಿ, ಸಮಾಜದಲ್ಲಿ ನಡೆಯುವ ಅನ್ಯಾಯ, ದೌರ್ಜನ್ಯಗಳನ್ನು ಪ್ರಶ್ನಿಸುವಂತಾಗಬೇಕು. ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳಿಗೆ ಯಾವುದೇ ಕಾರಣಕ್ಕೂ ಲಂಚ ನೀಡಬಾರದು ಎಂದರು.
ಮಾನಸ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ.ಎಸ್. ದತ್ತೇಶ್ ಕುಮಾರ್ ಮಾತನಾಡಿ, ಭ್ರಷ್ಟಾಚಾರದಿಂದ ನಾವು ಮುಕ್ತವಾದರೆ ಪ್ರಪಂಚದಲ್ಲೇ ನಮ್ಮದು ವಿಶಿಷ್ಟ ಮತ್ತು ಬಲಿಷ್ಠ ದೇಶವಾಗುವುದರಲ್ಲಿ ಸಂದೇಹವಿಲ್ಲ. ಸಂತೋಷ ಹೆಗಡೆ , ಟಿ.ಎನ್. ಶೇಷನ್, ವೆಂಕಟಾಚಲ ಮೊದಲಾದವರು ದೇಶದಲ್ಲಿನ ಭ್ರಷ್ಟಾಚಾರ ವ್ಯವಸ್ಥೆಯನ್ನು ನಾಶಪಡಿಸಲು ಪಣತೊಟ್ಟಿದ್ದರು. ಅಲ್ಲದೆ, ಅದರಲ್ಲಿ ಯಶಸ್ಸನ್ನೂ ಕಂಡರು. ಪ್ರಸ್ತುತ ಭ್ರಷ್ಟಾಚಾರವನ್ನು ಲೋಕಾಯುಕ್ತರು ಪತ್ತೆ ಹಚ್ಚಿ ಸದೆಬಡಿಯುತ್ತಿರುವುದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ, ನಾವು ಮಾಡಿದ ಆಸ್ತಿಗೆ ಲೆಕ್ಕ ನೀಡಬೇಕು, ತೆರಿಗೆ ಕಟ್ಟಬೇಕು. ಸ್ವಸ್ಥ ಸಮಾಜ ಮತ್ತು ದೇಶವನ್ನು ಕಟ್ಟುವಲ್ಲಿ ಲೋಕಾಯುಕ್ತ ಕಚೇರಿಯ ಪಾತ್ರ ಶ್ಲಾಘನೀಯ ಎಂದರು.----------
6ಕೆಜಿಎಲ್ 1ಕೊಳ್ಳೇಗಾಲದ ಮಾನಸ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಕಚೇರಿಯ ಉಪಾಧೀಕ್ಷಕ ಮಾಧ್ಯೂ ಥಾಮಸ್ ಅವರನ್ನು ಅಭಿನಂದಿಸಲಾಯಿತು. ಡಾ. ದತ್ತೇಶ್ ಕುಮಾರ್ ಇದ್ದರು.