ರಾಜಕೀಯ ಲಾಭಕ್ಕಾಗಿ  ಬಿಜೆಪಿ, ಜೆಡಿಎಸ್ ವಕ್ಫ್‌ ವಿವಾದ ಸೃಷ್ಟಿ : ಶಾಸಕ ಎಸ್.ಎನ್.ನಾರಾಯಣಸ್ವಾಮಿ

KannadaprabhaNewsNetwork | Updated : Nov 10 2024, 04:36 AM IST

ಸಾರಾಂಶ

 ಬಿಜೆಪಿ ಜೆಡಿಎಸ್ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ದ ಜನರಲ್ಲಿ ತಪ್ಪು ಕಲ್ಪನೆ ಮೂಡಲಿ ಎಂದು ರೈತರ ಮಠ,ಮಂದಿರಗಳ ಆಸ್ತಿಯನ್ನು ವಕ್ಫ್ ಬೋರ್ಡ್ ಹೆಸರಿಗೆ ಬದಲಾಯಿಸಿಕೊಂಡು ರೈತರನ್ನು ವಂಚನೆ ಮಾಡುತ್ತಿದೆ ಎಂದು ಆರೋಪ ಮಾಡುತ್ತಿದೆ 

 ಬಂಗಾರಪೇಟೆ : ಬಿಜೆಪಿ, ಜೆಡಿಎಸ್‌ ನವರು ರೈತರ ಜಮೀನುಗಳನ್ನು ವಕ್ಫ್ ಆಸ್ತಿಯಾಗಿ ಬದಲಾಯಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಅಪಪ್ರಚಾರ ಮಾಡಿ ರಾಜಕೀಯ ಲಾಭಕ್ಕಾಗಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಹುನ್ನಾರ ನಡೆಸಿದ್ದಾರೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆರೋಪಿಸಿದರು.

ಪಟ್ಟಣದ ಬೂದಿಕೋಟೆ ವೃತ್ತದಲ್ಲಿರುವ ಮಸೀದಿಯಲ್ಲಿ ಮಸೀದಿಗಳ ಬಗ್ಗೆ ಅನ್ಯ ಧರ್ಮಿಗಳಲ್ಲಿರುವ ತಪ್ಪು ಕಲ್ಪನೆಗಳನ್ನು ದೂರು ಮಾಡಿ ಇಬ್ಬರಲ್ಲಿಯೂ ಸಾಮರಸ್ಯ ಮೂಡಿಸಲು ಜಮಾತೆ ಅಹ್ಲೇ ಇಸ್ಲಾಮ ಹಾಗೂ ಜಮಾ ಅತೆ ಇಸ್ಲಾಮೀ ಹಿಂದ್ ನಮ್ಮೂರ ಮಸೀದಿ ನೋಡ ಬನ್ನಿ ಎನ್ನುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಆರೋಪ ಆಧಾರರಹಿತ

ಅನಗತ್ಯವಾಗಿ ಬಿಜೆಪಿ ಜೆಡಿಎಸ್ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ದ ಜನರಲ್ಲಿ ತಪ್ಪು ಕಲ್ಪನೆ ಮೂಡಲಿ ಎಂದು ರೈತರ ಮಠ,ಮಂದಿರಗಳ ಆಸ್ತಿಯನ್ನು ವಕ್ಫ್ ಬೋರ್ಡ್ ಹೆಸರಿಗೆ ಬದಲಾಯಿಸಿಕೊಂಡು ರೈತರನ್ನು ವಂಚನೆ ಮಾಡುತ್ತಿದೆ ಎಂದು ಆರೋಪ ಮಾಡುತ್ತಿದೆ, ಆದರೆ ತಾಲೂಕಿನಲ್ಲಿ ಅಂತಹ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ, ಬೇರೆಡೆ ಸಹ ವಕ್ಫ್ ಆಸ್ತಿಯನ್ನು ಮಾತ್ರ ಅಧಿಕೃತ ಮಾಡಿಕೊಳ್ಳಲಾಗುತ್ತಿದೆ ವಿನಃ ಯಾರ ಆಸ್ತಿಯನ್ನೂ ಲಪಟಾಯಿಸುತ್ತಿಲ್ಲ ಬಿಜೆಪಿಗರ ಆರೋಪ ಆದಾರರಹಿತವಾಗಿದೆ ಎಂದು ಸ್ಪಷ್ಟನೆ ನೀಡಿದರು.ಸಮಾಜದಲ್ಲಿ ಮುಸ್ಲೀಂರು ಹಿಂದೂಗಳ ವಿರೋಧಿಗಳು ಎಂದು ಬಿಂಬಿಸುವ ಕೆಲಸ ಮಾಡಲಾಗುತ್ತಿದೆ. ಮವದಂತಿ ಹಬ್ಬಿಸಿ ಕಲಹ ಸೃಷ್ಟಿಸಲು ಹುನ್ನಾರ ಮಾಡಿರುವವರಿಗೆ ದೇವರೇ ಶಿಕ್ಷೆ ನೀಡಲಿ. ಪಟ್ಟಣದಲ್ಲಿ ಹಿಂದೂ ಮುಸಲ್ಮಾನರು ಸಹೋದರರಂತೆ ಇದ್ದೇವೆ. ಇಲ್ಲಿ ಇದುವರೆಗೂ ಯಾವುದೇ ಕೋಮುಗಲಭೆಗಳು ನಡೆದಿಲ್ಲ ಮಸೀದಿಗಳ ಬಗ್ಗೆ ಸಮಾಜದಲ್ಲಿರುವ ಎಲ್ಲರ ಸಂಶಯಗಳಿಗೆ ತೆರೆ ಎಳೆಯಲು ಮಸೀದಿ ದರ್ಶನ ಕಾರ್ಯಕ್ರಮ ಉತ್ತಮ ಬೆಳವಣಿಗೆ ಎಂದು ಶಾಸಕ ಹೇಳಿದರು.

ಸಂಶಯ ನಿವಾರಣೆ ಉದ್ದೇಶಆಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಮಾತನಾಡಿ, ದೇವರು ಎಲ್ಲರಿಗೂ ಒಬ್ಬನೆ ಆದರೆ ಪ್ರಾರ್ಥಿಸುವ ವಿಧಾನ ಮಾತ್ರ ಬದಲಾಗಬಹುದು, ಆದರೆ ಮಸೀದಿಗಳ ಬಗ್ಗೆ ಅನ್ಯಧರ್ಮಿಗಳಲ್ಲಿ ಹಲವು ಸಂಶಯಗಳು ಇದೆ, ಅದನ್ನು ಹೋಗಲಾಡಿಸಲು ಮಸೀದಿ ದರ್ಶನವನ್ನು ಆಯೋಜಿಸಲಾಗಿದೆ, ಸಮಾಜದಲ್ಲಿ ಸೌಹಾರ್ಧತೆ ಸಾಮರಸ್ಯ ಸಹಬಾಳ್ವೆಯನ್ನು ಮತ್ತಷ್ಟು ಬಲಗೊಳಿಸಲು ಹಾಗೂ ಪರಸ್ಪರ ತಪ್ಪು ಕಲ್ಪನೆಯನ್ನು ದೂರ ಮಾಡಲು ಈ ಕಾರ‍್ಯಕ್ರಮ ಪೂರಕವಾಗಿದೆ ಎಂದು ವಿವಿರಿಸಿದರು.ಈ ವೇಳೆ ಪುರಸಭೆ ಅಧ್ಯಕ್ಷ ಗೋವಿಂದ,ಪುರಸಭೆ ಸದಸ್ಯರಾದ ಪ್ರಶಾಂತ್, ರಾಜನ್,ಸುಹೇಲ್,ಜಮಾಆತೆ ಟ್ರಸ್ಟ್ ಅಧ್ಯಕ್ಷ ನಿಸಾರ್ ಅಹ್ಮದ್,ಮುಬಾರಕ್ ಬಾಗಬಾನ್,ಇದಾಯಿತ್ತುಲ್ಲಾ,ರಫೀಕ್,ಕಸಾಪ ಅಧ್ಯಕ್ಷ ಸಂಜೀವಪ್ಪ,ಎಸ್.ಎ.ಪಾರ್ಥಸಾರಥಿ ಮತ್ತಿತರರು ಇದ್ದರು.

Share this article