ಪಂಪ್‌ ಸೆಟ್‌ಗಳಿಗೆ 7ಗಂಟೆ ವಿದ್ಯುತ್‌ ಪೂರೈಸಲು ಒತ್ತಾಯ

KannadaprabhaNewsNetwork |  
Published : Oct 20, 2023, 01:00 AM IST
ಫೋಟೋ 19ಪಿವಿಡಿ2ಪಾವಗಡ,ಬೆಂಗಳೂರಿನಲ್ಲಿ ರಾಜ್ಯ ವಿದ್ಯುತ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ಪ್ರತಿ ದಿನ 7ಗಂಟೆಗಳ ಕಾಲ ಪಂಪುಸೆಟ್‌ಗಳಿಗೆ ವಿದ್ಯುತ್‌ ಪೂರೈಸಿ ಇಲ್ಲಿನ ರೈತರ ನೀರಾವರಿ ಬೆಳೆಗಳ ಸಂರಕ್ಷಣೆಗೆ ಸಹಕರಿಸುವಂತೆ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹಾಗೂ ಜಿಲ್ಲಾಧ್ಯಕ್ಷ ಆರ್‌.ಸಿ.ಅಂಜಿನಪ್ಪ ಮನವಿ ಮಾಡಿದರು. | Kannada Prabha

ಸಾರಾಂಶ

20 ದಿನಗಳಿಂದ ಲೋಡ್ ಶೆಡ್ಡಿಂಗ್ ನೆಪದಲ್ಲಿ ಪದೇ ಪದೇ ವಿದ್ಯುತ್ ಕಡಿತಗೊಳಿಸುವ ಪರಿಣಾಮ ನೀರಿನ ಅಭಾವದಿಂದ ತಾಲೂಕಿನದ್ಯಂತ ನೀರಾವರಿ ಬೆಳೆಗಳು ನಷ್ಟಕ್ಕೀಡಾಗಿ ರೈತರು ಕಂಗಲಾಗಿದ್ದಾರೆ.

ಕನ್ನಡಪ್ರಭವಾರ್ತೆ ಪಾವಗಡ 20 ದಿನಗಳಿಂದ ಲೋಡ್ ಶೆಡ್ಡಿಂಗ್ ನೆಪದಲ್ಲಿ ಪದೇ ಪದೇ ವಿದ್ಯುತ್ ಕಡಿತಗೊಳಿಸುವ ಪರಿಣಾಮ ನೀರಿನ ಅಭಾವದಿಂದ ತಾಲೂಕಿನದ್ಯಂತ ನೀರಾವರಿ ಬೆಳೆಗಳು ನಷ್ಟಕ್ಕೀಡಾಗಿ ರೈತರು ಕಂಗಲಾಗಿದ್ದಾರೆ. ತಾಲೂಕಿನ ರೈತ ಮತ್ತು ಕೃಷಿ ಕಾರ್ಮಿಕರಲ್ಲಿ ಅತ್ಯಂತ ತೀವ್ರ ಚಿಂತೆಗೀಡಾಗಿದ್ದು, ವಿದ್ಯುತ್‌ ಸಮಸ್ಯೆ ಪರಿಣಾಮ ತಾಲೂಕಿನ ರೈತರ ಪರಿಸ್ಥಿತಿ ಗಂಭೀರವಾಗಿ ಪರಿಗಣಿಸಿದ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಗುರುವಾರ ಬೆಂಗಳೂರಿಗೆ ತೆರಳಿ ರಾಜ್ಯ ವಿದ್ಯುತ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ, ಪಾವಗಡದಲ್ಲಿ ಪದೇ ಪದೇ ವಿದ್ಯುತ್‌ ಕಡಿತ‍ಗೊಳಿಸುವ ಬಗ್ಗೆ ಮಾಹಿತಿ ಪಡೆದರು. ಈ ಮುಂಚೆ ಇಲ್ಲಿನ ರೈತರ ಪಂಪ್‌ಸೆಟ್‌ಗಳಿಗೆ ಪೂರೈಕೆ ಮಾಡುತ್ತಿದ್ದ ರೀತಿಯಲ್ಲಿಯೇ 7 ಗಂಟೆಗಳ ಕಾಲ ವಿದ್ಯುತ್ ಸರಬರಾಜು ವ್ಯವಸ್ಥೆ ಕಲ್ಪಿಸಿ, ರೈತರ ಜೀವನಾಡಿ ಬೆಳೆಗಳ ಸಂರಕ್ಷಣೆಗೆ ಸಹಕರಿಸುವಂತೆ ಮನವಿ ಮಾಡಿದರು. ಇದೇ ವೇ‍ಳೆ ಜೆಡಿಎಸ್‌ ಜಿಲ್ಲಾಧ್ಯಕ್ಷರಾದ ಪಾವಗಡ ಆರ್.ಸಿ ಅಂಜಿನಪ್ಪ ಇದ್ದರು. ಫೋಟೋ.... 19ಪಿವಿಡಿ2 ಪಾವಗಡ, ಬೆಂಗಳೂರಿನಲ್ಲಿ ರಾಜ್ಯ ವಿದ್ಯುತ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ಪ್ರತಿ ದಿನ 7ಗಂಟೆಗಳ ಕಾಲ ಪಂಪ್‌ ಸೆಟ್‌ಗಳಿಗೆ ವಿದ್ಯುತ್‌ ಪೂರೈಸಿ, ರೈತರ ನೀರಾವರಿ ಬೆಳೆಗಳ ಸಂರಕ್ಷಣೆಗೆ ಸಹಕರಿಸುವಂತೆ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹಾಗೂ ಜಿಲ್ಲಾಧ್ಯಕ್ಷ ಆರ್‌.ಸಿ.ಅಂಜಿನಪ್ಪ ಮನವಿ ಮಾಡಿದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ