ಅಧಿಕಾರ ಹಂಚಿಕೆ ಕುರಿತು ಒಪ್ಪಂದ ಆಗಿದೆ ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆ ನಿಜ : ಮುನಿಯಪ್ಪ

Published : Dec 07, 2024, 09:33 AM IST
KH Muniyappa

ಸಾರಾಂಶ

 ಅಧಿಕಾರ ಹಂಚಿಕೆ ಒಪ್ಪಂದ ಆಗಿರುವುದು ನಿಜ ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.   ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತು ಒಪ್ಪಂದ ಆಗಿದೆ ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಡಿಕೆಶಿ ಹೇಳಿದ್ದು ಸರಿಯಾಗಿದೆ.  

ಕೋಲಾರ  : ರಾಜ್ಯದಲ್ಲಿ ಅಧಿಕಾರ ಹಂಚಿಕೆ ಒಪ್ಪಂದ ಆಗಿರುವುದು ನಿಜ ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ. ಮುಳಬಾಗಿಲಿನಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತು ಒಪ್ಪಂದ ಆಗಿದೆ ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಡಿಕೆಶಿ ಹೇಳಿದ್ದು ಸರಿಯಾಗಿದೆ. ಈ ಬಗ್ಗೆ ಬೇರೆ ಏನನ್ನೂ ಕೇಳಬೇಡಿ ಎಂದರು.

ಇದೇ ವೇಳೆ, ವಕ್ಫ್‌ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ನಡೆಸುತ್ತಿರುವ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಹೋರಾಟ ಮಾಡಿದಂತೆಲ್ಲಾ ಅದು ಕಾಂಗ್ರೆಸ್ ಗೆ ಹೆಚ್ಚು ಅನುಕೂಲವಾಗಲಿದೆ. ಬಿಜೆಪಿಯವರು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ, ಕಾಣಲಿ ಬಿಡಿ ಎಂದರು.

ಪರಂಗೂ ಸಿಎಂ ಆಗುವೆ ಆಸೆ: ಶಾಸಕ ಸುರೇಶ ಗೌಡ

ತುಮಕೂರು: ರಕ್ತಕೊಡುತ್ತೇವೆ ಆದರೆ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್ ವಿರುದ್ದ ಯಾ ವುದೇ ಕಾರಣಕ್ಕೂ ಹೋರಾಟ ನಿಲ್ಲುವು ದಿಲ್ಲ. ನಮ್ಮ ಹಕ್ಕನ್ನು ರಾಜಕೀಯಕ್ಕೆ ತೆಗೆದು ಕೊಂಡು ಹೋಗಲು ಬಿಡುವುದಿಲ್ಲ ಎಂದು ಶಾಸಕ ಸುರೇಶ ಗೌಡ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂ ದಿಗೆ ಮಾತನಾಡಿ, ಕೆನಾಲ್ ಯೋಜನೆ ವಾಪಸ್ ತೆಗೆದು ಕೊಳ್ಳದಿದ್ದರೆ ಹೋರಾಟ ನಿಲ್ಲುವುದಿಲ್ಲ. ಸದನದಲ್ಲೂ ಕೆನಾಲ್ ಯೋಜನೆ ಬಗ್ಗೆ ಜಿಲ್ಲೆಯ ಬಿಜೆಪಿ-ಜೆಡಿಎಸ್ ಶಾಸಕರು ಹೋರಾಟ ಮಾಡುತ್ತೇವೆ. ಅಧಿ ಕಾರ ಇದೆ ಅಂತ ಪೊಲೀಸ್ ಬಲ ಪ್ರಯೋಗ ನಡೆಸಿದರೆ ರೈತರು ಸುಮ್ಮನೆ ಇರುವುದಿಲ್ಲ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಕಾರಣ ಆಗುತ್ತಾರೆಯೇ ಎಂದರು.

ಕ್ಷೇತ್ರದ ಜನರನ್ನು ಬಿಟ್ಟು ಬೇರೆ ಯಾರಿಗೂ ಹೆದರುವುದಿಲ್ಲ. ವಿದ್ಯಾರ್ಥಿ ಯಾದಾಗಿನಿಂದ ನಾನು ಹೋರಾಟ ಮಾಡಿ ಕೊಂಡು ಬಂದವನು. 16 ವರ್ಷ ಇದ್ದಾಗಲೇ ಬೆಂಗಳೂರಿನಲ್ಲಿ ಗೋವಾ ಬಸ್‌ಗೆ ಕಲ್ಲು ಹೊಡೆದು ಜೈಲಿಗೆ ಹೋಗಿ ದ್ದೇ. ಹೆದರುವುದು, ಜಗ್ಗು ವುದು, ಬಗ್ಗುವುದು ಸುರೇಶ್ ಗೌಡ ಜಾಯ ಮಾನದಲ್ಲೇ ಇಲ್ಲ ಎಂದರು.

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮುಖ್ಯಮಂತ್ರಿ ಯಾಗಬೇಕು ಅಂತಾ ತುಂಬಾ ಆಸೆ ಇಟ್ಟು ಕೊಂಡಿದ್ದಾರೆ. ವೈಯಕ್ತಿಕವಾಗಿ ಪರಮೇಶ್ ಜೊತೆ ಮಾತನಾಡುವಾಗ ಮುಖ್ಯಮಂತ್ರಿ ಆಸೆ ಬಗ್ಗೆ ಅವರು ಹೇಳಿಕೊಂಡಿದ್ದರು. ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರನ್ನು ಸೋಲಿಸಿದರೂ ಜಿ.ಎಸ್.ಬಸವರಾಜು ಸಚಿವರಾಗಲಿಲ್ಲ. ಆದರೆ ತುಮಕೂರಿಗೆ ಬಂದು ಗೆದ್ದ ವಿ. ಸೋಮಣ್ಣ ಅವರಿಗೆ ಸಚಿವ ಸ್ಥಾನದ ಅದೃಷ್ಟ ಒಲಿದಿದೆ ಎಂದರು.

ಪರಮೇಶ್ವರ್‌ ಅವರಿಗೂ ಅದೃಷ್ಟ ಒಲಿಯಬಹುದು. ಕ್ಷೇತ್ರದ ಅನುದಾನ ವಿಚಾರದಲ್ಲಿ ಕಪ್ಪುಪಟ್ಟಿ, ಘೋಷಣೆ ಕೂಗೋ ವಿಚಾರದ ಬಗ್ಗೆ ಹೆದರಿ ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ. ಅನುದಾನ ಕೊಡುವ ಭರವಸೆಯಿಂದ ಹಿಂದೆ ಸರಿದಿದ್ದಾಗಿ ತಿಳಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಸಿಎಂ ಸಿದ್ದುಗೆ ಇದು ಕೊನೆ ಅಧಿವೇಶನ: ವಿಜಯೇಂದ್ರ
ಬಿವೈವಿ ಕಲೆಕ್ಷನ್‌ ಕಿಂಗ್‌, ಕಲೆಕ್ಷನ್‌ ಬಿಚ್ಚಿಡ್ಲಾ? : ಡಿಕೆ