ಚನ್ನಪಟ್ಟಣ ಪ್ರಚಾರಕ್ಕೆ ದೇವೇಗೌಡರೇ ಫೋನ್‌ ಮಾಡಿ ಕರೆದಿದ್ದಾರೆ : ಸಾ.ರಾ.ಮಹೇಶ್‌ ಸ್ಪಷ್ಟನೆ

ಸಾರಾಂಶ

 ಉಪ ಚುನಾವಣೆಯಲ್ಲಿ   ನಿಖಿಲ್‌  ಪರ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಸಾ.ರಾ.ಮಹೇಶ್‌, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರೇ ಜಿಟಿಡಿ ಅವರಿಗೆ ಖುದ್ದಾಗಿ ಫೋನ್ ಮಾಡಿ ಆಹ್ವಾನಿಸಿದ್ದಾರೆ ಎಂದು ಹೇಳಿದ್ದಾರೆ.

 ಮೈಸೂರು : ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರ ಪರ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಸಾ.ರಾ.ಮಹೇಶ್‌, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರೇ ಜಿಟಿಡಿ ಅವರಿಗೆ ಖುದ್ದಾಗಿ ಫೋನ್ ಮಾಡಿ ಆಹ್ವಾನಿಸಿದ್ದಾರೆ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಟಿ.ದೇವೇಗೌಡರಿಗೆ ಮಾಜಿ ಪ್ರಧಾನಿಗಳೇ ಫೋನ್‌ ಮಾಡಿ ಕರೆದಿದ್ದೇನೆ. ಬೇಕಾದರೆ ಅವರನ್ನೇ ಕೇಳಿ ಎಂದು ಜಿಟಿಡಿ ಅವರ ಆರೋಪವನ್ನು ತಳ್ಳಿಹಾಕಿದರು.

ಮಹೇಶ್‌ ಇನ್ನು ಮುಂದೆ ‘ಬಿ’ ಫಾರಂ ನೀಡುತ್ತಾರೆ ಎಂಬ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನೇ ಬಿ ಫಾರಂ ಕೊಡುತ್ತೇನೆ ಎಂದೂ ಹೇಳಿಲ್ಲ. ಹಾಗೆ ಹೇಳಿದ್ದರೆ ಎಲ್ಲಿ ಹೇಳಿದ್ದೇನೆ ಹೇಳಲಿ. ಕುಮಾರಸ್ವಾಮಿ ಜೊತೆ ತಿರುಗಬೇಡಿ. ಸಕ್ರಿಯವಾಗಿ ಇರುವವರಿಗೆ ಸ್ಥಳಿಯ ಸಂಸ್ಥೆಗಳ ಚುನಾವಣೆಗೆ ಟಿಕೆಟ್ ಕೊಡುತ್ತೇನೆ ಎಂದು ಹೇಳಿದ್ದೆ. ಅದರಲ್ಲಿ ಯಾವ ತಪ್ಪಿದೆ ಎಂದು ಹೇಳಿದರು.

ಮಡಿಕೇರಿಯಲ್ಲಿ ನಾನು ಜನರಿಗೆ ಅನುಕೂಲ ಮಾಡಿದ್ದೇನೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ತ್ಯಾಗವನ್ನೇ ಮಾಡಿದ್ದಾರೆ. ಆದರೂ ಜನ ಜೆಡಿಎಸ್‌ನನ್ನು ಸೋಲಿಸಿದರು ಎಂದು ಹೇಳಿದರು.

ಜನರಿಗೆ ಕೆಲಸ ಮಾಡಬೇಕು.

ಚಾಮರಾಜ ಕ್ಷೇತ್ರದಲ್ಲಿ ಟಿಕೆಟ್ ಕೊಡಿಸಿದ್ದು ಜಿ.ಟಿ.ದೇವೆಗೌಡರು. ಎಲ್ಲವು ಸರಿಯಾಗುತ್ತೆ, ಇದಕ್ಕಿಂತ ಅತಿರೇಕ್ಕೆ ಹೋದಾಗಲು ಸರಿಯಾಗಿದೆ. ಈ‌ ಹಿಂದೆ ನಾನೇ ಅವರ ಕಾಲಿಗೆ ಹೋಗಿ ಕ್ಷಮೆ ಕೇಳಿದೆ, ಮುಂದೆ ಸರಿಯಾಗುತ್ತೆ.

ಪರೋಕ್ಷವಾಗಿ ಜಿಟಿಡಿಯನ್ನು ತಿವಿದ ಮಹೇಶ್‌

ಮೈಸೂರು: ಮಾಜಿ ಸಚಿವ ಜಿ.ಟಿ.ದೇವೇಗೌಡರಿಗೆ ವಿಪಕ್ಷ ಸ್ಥಾನ ಕೊಡದ ವಿಚಾರಕ್ಕೆ ಮುನಿಸಿಕೊಂಡ ವಿಚಾರವಾಗಿ ಪರೋಕ್ಷವಾಗಿ ಟಾಂಗ್‌ ನೀಡಿದ ಮಹೇಶ್‌, ಜನರೇ ಹಾಗೆ, ಮೊದಲು ಜಿಲ್ಲಾ ಪಂಚಾಯತ್ ಸದಸ್ಯ ಆಗುತ್ತಾರೆ. ನಂತರ ಎಂಎಲ್‌ಎ ಆಗಬೇಕು ಅನ್ನಿಸುತ್ತೆ. ಎಂಎಲ್‌ಎ ಆದ ನಂತರ ಮಂತ್ರಿ ಆಗಬೇಕು ಅನ್ನಿಸುತ್ತೆ. ಮಂತ್ರಿ ಆದಮೇಲೆ ಒಳ್ಳೆಯ ಖಾತೆ ಬೇಕು. ಅದನ್ನ ಕೊಡದಿದ್ರೆ ಅನ್ಯಾಯ ಆಯ್ತು ಅಂತ ಹೇಳುತ್ತಾರೆ. ಅವರು ಅಂದುಕೊಂಡಿದ್ದು ಆಗದಿದ್ರೆ ಕಡೆಗೆ ಕುಮಾರಸ್ವಾಮಿ ಬಯ್ಯುವ ಕೆಲಸ ಮಾಡ್ತಾರೆ. ಅಮೇಲೆ ಪಕ್ಷದ ಬೆನ್ನಿಗೆ ಚೂರಿ ಹಾಕಿ ಹೋಗುತ್ತಾರೆ. ರಾಜ್ಯದಲ್ಲಿ ಹಿಂದುಳಿದ ನಾಯಕ ಸಿಎಂ ಇದ್ದಾರೆ. ಆ ಕಾರಣಕ್ಕೆ ಹಿಂದುಳಿದ ವರ್ಗದ ನಾಯಕನಿಗೆ ಪಕ್ಷದ ಜವಾಬ್ದಾರಿ ನೀಡಬೇಕು ಎಂದು ಸುರೇಶ್ ಬಾಬುಗೆ ಸ್ಥಾನ ಕೊಟ್ಟಿದೆ.

 

Share this article