ಬಿಕೆ ಚುನಾವಣೆಯಲ್ಲಿ ಗೆದ್ದಿದ್ದಾರಾ? : ಬಿವೈವಿ

Published : Oct 01, 2026, 10:55 AM IST
BY Vijayendra

ಸಾರಾಂಶ

ನಾನು ಎಲ್‌ಕೆಜಿ ಇರಬಹುದು, ಮೊದಲ ಬಾರಿಗೆ ಶಾಸಕ ಆಗಿರಬಹದು. ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರು ಪಿಎಚ್‌.ಡಿ ಮಾಡಿದರೂ ಅವರು ಈವರೆಗೂ ಯಾವುದೇ ಚುನಾವಣೆ ಗೆದ್ದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಬೆಂಗಳೂರು/ಚಿತ್ರದುರ್ಗ : ನಾನು ಎಲ್‌ಕೆಜಿ ಇರಬಹುದು, ಮೊದಲ ಬಾರಿಗೆ ಶಾಸಕ ಆಗಿರಬಹದು. ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರು ಪಿಎಚ್‌.ಡಿ ಮಾಡಿದರೂ ಅವರು ಈವರೆಗೂ ಯಾವುದೇ ಚುನಾವಣೆ ಗೆದ್ದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿ.ಕೆ.ಹರಿಪ್ರಸಾದ್‌ ಅವರ ಬ್ಯಾನರ್‌ ಹರಿದು ಹಾಕುವ ಕೀಳುಮಟ್ಟದ ರಾಜಕಾರಣದ ಅವಶ್ಯಕತೆ ನಮಗಿಲ್ಲ. ಹರಿಪ್ರಸಾದ್‌ ಅವರೇ ಕಾರ್ಯಕರ್ತರಿಗೆ ತಿಳಿಸಿ ಬ್ಯಾನರ್‌ ಹರಿಸಿಕೊಂಡು ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನಮಗೆ ಅಂಥ 420 ರಾಜಕಾರಣದ ಅಗತ್ಯವಿಲ್ಲ ಎಂದರು.

ಲಂಚದ ಆರೋಪ ಕೋರ್ಟಲ್ಲಿ ಇತ್ಯರ್ಥ:

ಲಂಚ ಪಡೆದ ಆರೋಪ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಿ.ಕೆ.ಹರಿಪ್ರಸಾದ್ ಅವರು ಹಿರಿಯರು. ನಾಲಿಗೆ ಬಿಗಿಹಿಡಿದು ಮಾತನಾಡಲಿ. ಈಗಾಗಲೇ ಇವೆಲ್ಲವೂ ಕೋರ್ಟಿನಲ್ಲಿ ಇತ್ಯರ್ಥ ಆಗಿದೆ. ಬಿ.ಎಸ್‌.ಯಡಿಯೂರಪ್ಪ ಮತ್ತು ಅವರ ಕುಟುಂಬ ನಿರಪರಾಧಿಗಳೆಂದು ಯುಪಿಎ ಸರ್ಕಾರ ಇದ್ದಾಗ ತನಿಖೆ ನಡೆದು ಸಾಬೀತಾಗಿದೆ ಎಂದರು.

ನಾವು ಈಚೆಗೆ ಬಳ್ಳಾರಿ ಚಲೋ ಬೃಹತ್ ಪಾದಯಾತ್ರೆ ಮಾಡಿದ್ದೆವು. ನಮ್ಮ ಹೋರಾಟದ ಯಶಸ್ಸಿನಿಂದ ಪ್ರೇರಣೆ ಪಡೆದ ಕೆಪಿಸಿಸಿ ಅಧ್ಯಕ್ಷರು ಸ್ವತಃ ನನ್ನ ಕ್ಷೇತ್ರ, ಯಡಿಯೂರಪ್ಪ ಅವರಿಗೆ ರಾಜಕೀಯ ಜನ್ಮ ಕೊಟ್ಟಂತಹ ಹೆಮ್ಮೆಯ ಶಿಕಾರಿಪುರ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಹೋರಾಟದ ಕಿಚ್ಚುಹಚ್ಚಿದ ಕೀರ್ತಿ ನಮ್ಮ ಶಿಕಾರಿಪುರ ಕ್ಷೇತ್ರಕ್ಕೆ ಸೇರುತ್ತದೆ. ಅವರಿಗೆ ಒಳಿತಾಗಲಿ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಿ.ಕೆ.ಹರಿಪ್ರಸಾದ್‌ ಅವರು ಹತಾಶರಾಗಿದ್ದಾರೆ. ಒಂದು ಕಡೆ ಸಿಎಂ ಡಿ.ಕೆ.ಶಿವಕುಮಾರ್ ಅವರು 100 ದಿನಗಳ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷರನ್ನು ಕರೆಯದೇ ಬಹಿಷ್ಕರಿಸಿದ್ದಾರೆ. ಹಾಗಾಗಿ ಹತಾಶರಾಗಿ ಪರ್ಯಾಯ ಪಾದಯಾತ್ರೆ ಮಾಡುತ್ತಿದ್ದಾರೆ. ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ನಾವು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಬ್ಯಾನರ್‌ ಹರಿದಿಲ್ಲ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬರಗಾಲದ ಸಂದರ್ಭದಲ್ಲಿ ರೈತರಿಗೆ ಪರಿಹಾರ ನೀಡಿಲ್ಲ. ಹೀಗಾಗಿ ರಾಜ್ಯದ ಜನರು ಛೀ, ಥೂ ಎಂದು ಉಗಿಯುತ್ತಿದ್ದಾರೆ. ರೈತಾಪಿ ಜನ ಕಾಂಗ್ರೆಸ್‌ ಸರ್ಕಾರಕ್ಕೆ ಧಿಕ್ಕಾರ ಹೇಳುತ್ತಿದ್ದಾರೆ

- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬಿಜೆಪಿ ಭದ್ರಕೋಟೆ ಶಿಕಾರಿಪುರದಲ್ಲಿ ಕಾಂಗ್ರೆಸ್‌ ಶಕ್ತಿ ಪ್ರದರ್ಶನ
ವಿಧಾನಸೌಧದ ಮೆಟ್ಟಿಲು ಮೇಲೆ ನವಂಬರ್‌ 9ರಂದು ಉರ್ದು ಹಬ್ಬ: ಖಾದರ್‌