ನಿಗಮ ಮಂಡಳಿ ನಿರ್ದೇಶಕ, ಸದಸ್ಯರ ಕೈಬಿಡಲು ಸೂಚನೆ- 2 ವರ್ಷ ಅಧಿಕಾರ ಪೂರೈಸಿದವರ ತೆರವು

Published : Nov 17, 2026, 06:36 AM IST
vidhan soudha

ಸಾರಾಂಶ

ನಿಗಮ ಮತ್ತು ಮಂಡಳಿಗಳಿಗೆ ಸರ್ಕಾರದಿಂದ ನಾಮನಿರ್ದೇಶನಗೊಂಡು 2 ವರ್ಷ ಅವಧಿ ಪೂರೈಸಿರುವ ಎಲ್ಲಾ ಸದಸ್ಯ/ನಿರ್ದೇಶಕರನ್ನು ಸೇವೆಯಿಂದ ಮುಕ್ತಗೊಳಿಸುವಂತೆ ಮುಖ್ಯಮಂತ್ರಿಯವರ ಕಚೇರಿಯಿಂದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ರವಾನೆಯಾಗಿದೆ.

ಬೆಂಗಳೂರು : ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರಗಳನ್ನು ಹೊರತುಪಡಿಸಿ ಉಳಿದೆಲ್ಲ ನಿಗಮ ಮತ್ತು ಮಂಡಳಿಗಳಿಗೆ ಸರ್ಕಾರದಿಂದ ನಾಮನಿರ್ದೇಶನಗೊಂಡು 2 ವರ್ಷ ಅವಧಿ ಪೂರೈಸಿರುವ ಎಲ್ಲಾ ಸದಸ್ಯ/ನಿರ್ದೇಶಕರನ್ನು ಸೇವೆಯಿಂದ ಮುಕ್ತಗೊಳಿಸುವಂತೆ ಮುಖ್ಯಮಂತ್ರಿಯವರ ಕಚೇರಿಯಿಂದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ರವಾನೆಯಾಗಿದೆ.

2 ವರ್ಷ ಅವಧಿ ಪೂರೈಸಿರುವರ ಪದಮುಕ್ತ

ಈ ಸಂಬಂಧ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಟಿಪ್ಪಣಿ ರವಾನಿಸಿರುವ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಅವರು, ನಿಗಮ-ಮಂಡಳಿಗಳಿಗೆ ನಾಮನಿರ್ದೇಶನಗೊಂಡು 2 ವರ್ಷ ಅವಧಿ ಪೂರೈಸಿರುವ ಎಲ್ಲ ಸದಸ್ಯ/ನಿರ್ದೇಶಕರನ್ನು ಕೂಡಲೇ ಪದಮುಕ್ತಗೊಳಿಸಬೇಕು.

ಜತೆಗೆ ಈಗಾಗಲೇ ಮುಖ್ಯಮಂತ್ರಿ ಅವರು ಅನುಮೋದಿಸಿರುವ ನೂತನ ಸದಸ್ಯರು/ನಿರ್ದೇಶಕರನ್ನು ಆಯಾ ನಿಗಮ/ಮಂಡಳಿಗಳಿಗೆ ನೇಮಕಾತಿ ಮಾಡಿದ ವಿವರಗಳನ್ನು ತಕ್ಷಣ ಮುಖ್ಯಮಂತ್ರಿಯವರ ಅವಗಾಹನೆಗೆ ಸಲ್ಲಿಸುವಂತೆ ಸಂಬಂಧಿಸಿದ ಎಲ್ಲಾ ಇಲಾಖಾ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡುವಂತೆಯೂ ಕೋರಿದ್ದಾರೆ.

ಇತ್ತೀಚೆಗೆ ನಿಗಮ ಮಂಡಳಿಗಳಿಗೆ ಹೊಸ ಸದಸ್ಯರ ನೇಮಿಸಿದ್ದ ಸರ್ಕಾರ

ಅದರ ಬೆನ್ನಲ್ಲೇ 2 ವರ್ಷ ಅಧಿಕಾರ ಪೂರೈಸಿದವರ ಕೈಬಿಡಲು ಸೂಚನೆ

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿಎಂ ಕಚೇರಿಯಿಂದ ಸುತ್ತೋಲೆ

ಈ ಮೂಲಕ ಹೊಸ ಸದಸ್ಯರ ಅಧಿಕಾರಕ್ಕೆ ಅವಕಾಶ ಮಾಡಿಕೊಟ್ಟ ಸರ್ಕಾರ

ಸಿಎಂ ಸೂಚಿಸಿದವರ ನೇಮಿಸುವಂತೆ ಸುತ್ತೋಲೆಯಲ್ಲಿ ಸಿಎಸ್‌ಗೆ ಮಾಹಿತಿ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ರಾಜ್ಯದಲ್ಲಿ ಮತ ಪಟ್ಟಿಯಿಂದ ಹೊರಗುಳಿದವರ ಸೇರ್ಪಡೆಗೆ ಅಭಿಯಾನ-ಈಗ ಎಸ್‌ಎಸ್‌ಆರ್‌
ಇಂದಿನಿಂದ ಕಾಮನ್‌ವೆಲ್ತ್‌ ಸಂಸದೆಯರ ಸಭೆ ಆರಂಭ-ಲೋಕಸಭೆ ಸ್ಪೀಕರ್‌ ಬಿರ್ಲಾ ಚಾಲನೆ