ಸಿದ್ದರಾಮಯ್ಯ ಅವರೊಂದಿಗೆ ಇಡೀ ಕಾಂಗ್ರೆಸ್ ಇದೆ, ಅವರನ್ನು ತೆಗೆಯಲು ಸಾಧ್ಯವಿಲ್ಲ: ಕೆ.ಎಚ್.ಮುನಿಯಪ್ಪ

KannadaprabhaNewsNetwork |  
Published : Aug 10, 2024, 01:40 AM ISTUpdated : Aug 10, 2024, 04:12 AM IST
KH Muniyappa

ಸಾರಾಂಶ

ಬೆಳಗಾವಿ ಅಧಿವೇಶನದಲ್ಲಿ ಎಸ್ಸಿ- ಎಸ್ಟಿ ಜನಸಂಖ್ಯೆ ಆಧಾರದ ಮೇಲೆ ಗಾಂಧೀಜಿ, ಅಂಬೇಡ್ಕರ್ ಅವರ ಕನಸು ನನಸು ಮಾಡಿದ್ದೇವೆ. ಐಕ್ಯತ ಸಮಾವೇಶ ಮಾಡುವ ಮೂಲಕ ರಾಜ್ಯದಲ್ಲಿ ಪ್ರಜಾಪ್ರಭುತ್ವ ಉಳಿಯಲು ನಾವೆಲ್ಲರೂ ಒಗ್ಗೂಡಬೇಕಿದೆ ಎಂದು ಸಂದೇಶ ರವಾನಿಸಿದ್ದೇವು. ಅದರಂತೆ ಫಲಿತಾಂಶ ಬಂದಿದೆ.

 ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಇಡೀ ಕಾಂಗ್ರೆಸ್ ಇದೆ. ಅವರನ್ನು ತೆಗೆಯಲು ಸಾಧ್ಯವಿಲ್ಲ. ದೇಶದ ಅಭಿವೃದ್ಧಿಗೆ ಶ್ರಮಿಸಿ ಜನಾದೇಶಕ್ಕೆ ಬೆಲೆ ನೀಡಿ ಸಿದ್ದರಾಮಯ್ಯ ಅವರನ್ನು ನಾವು ಬಲ ಪಡಿಸುತ್ತೇವೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.

ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ 136 ಜನರನ್ನು ಆಯ್ಕೆ ಮಾಡಿ ಸುಭದ್ರ ಸರ್ಕಾರ ನಡೆಸಬೇಕು ಎಂದು ಜನಾದೇಶವಿದೆ. ಪ್ರಣಾಳಿಕೆಯಲ್ಲಿ ನೀಡಿರುವ 5 ಗ್ಯಾರಂಟಿಯನ್ನು ಶೇ.80 ಜನರಿಗೆ ತಲುಪಿಸಿದ್ದೇವೆ, ನುಡಿದಂತೆ ನಡೆದಿದ್ದೇವೆ. ಈ ರೀತಿ ಕಾರ್ಯಕ್ರಮ ಭಾರತದಲ್ಲಿ ನೀಡಿರುವುದು ಕರ್ನಾಟಕದಲ್ಲಿ ಮಾತ್ರ ಎಂದರು.

ಬೆಳಗಾವಿ ಅಧಿವೇಶನದಲ್ಲಿ ಎಸ್ಸಿ- ಎಸ್ಟಿ ಜನಸಂಖ್ಯೆ ಆಧಾರದ ಮೇಲೆ ಗಾಂಧೀಜಿ, ಅಂಬೇಡ್ಕರ್ ಅವರ ಕನಸು ನನಸು ಮಾಡಿದ್ದೇವೆ. ಐಕ್ಯತ ಸಮಾವೇಶ ಮಾಡುವ ಮೂಲಕ ರಾಜ್ಯದಲ್ಲಿ ಪ್ರಜಾಪ್ರಭುತ್ವ ಉಳಿಯಲು ನಾವೆಲ್ಲರೂ ಒಗ್ಗೂಡಬೇಕಿದೆ ಎಂದು ಸಂದೇಶ ರವಾನಿಸಿದ್ದೇವು. ಅದರಂತೆ ಫಲಿತಾಂಶ ಬಂದಿದೆ ಎಂದರು.

ಕ್ಷುಲ್ಲಕ ಕಾರಣಕ್ಕೆ ಜೆಡಿಎಸ್- ಬಿಜೆಪಿ ಪಾದಯಾತ್ರೆ ಮಾಡುತ್ತಿದ್ದಾರೆ. ಎಂಡಿಎ ನಿವೇಶನ ವಿಷಯದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿದ್ದಾರೆ. ರಾಜ್ಯ ಬೇಕಿರುವ ಯೋಜನೆಗಳಿಗೆ ಪಾದಯಾತ್ರೆ ಮಾಡಿ, ಕ್ಷುಲ್ಲಕ ಕಾರಣಕ್ಕೆ ಮಾಡಬೇಡಿ ಎಂದು ಅವರು ಸಲಹೆ ನೀಡಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಬಾಕಿ ಲಕ್ಷ್ಮಿ ಶನಿವಾರದೊಳಗೆ ಮಹಿಳೆಯರ ಬ್ಯಾಂಕ್‌ ಖಾತೆಗೆ
ರಾಜಣ್ಣ ಸಿಎಂಗಷ್ಟೇ ಅಲ್ಲ, ನನಗೂ ಪರಮಾಪ್ತ: ಡಿಕೆಶಿ