ನೂರು ಜನ ರಮೇಶ್‌ ಜಾರಕಿಹೊಳಿ ಬಂದರೂ ಡಿಕೆಶಿ ಟಚ್ ಮಾಡಲು ಆಗೋಲ್ಲ: ರವಿ ಗಣಿಗ

KannadaprabhaNewsNetwork |  
Published : Oct 31, 2023, 01:15 AM ISTUpdated : Oct 31, 2023, 01:16 AM IST
ರವಿಕುಮಾರ್್‌ | Kannada Prabha

ಸಾರಾಂಶ

ನೂರು ಜನ ರಮೇಶ್‌ ಜಾರಕಿಹೊಳಿ ಬಂದರೂ ಡಿಕೆಶಿ ಟಚ್ ಮಾಡಲು ಆಗೋಲ್ಲಒಕ್ಕಲಿಗ ನಾಯಕತ್ವ ಸಾಯಿಸಲು ಒಂದು ತಂಡ ಪ್ರಯತ್ನ: ರವಿ ಗಣಿಗ

- ಒಕ್ಕಲಿಗ ನಾಯಕತ್ವ ಸಾಯಿಸಲು ಒಂದು ತಂಡ ಪ್ರಯತ್ನ - ಡಿಕೆಶಿ ಕಾಲು ಹಿಡಿಯಲು ಬಂದಿದ್ದ ರಮೇಶ್‌ ಜಾರಕಿಹೊಳಿ ಕನ್ನಡಪ್ರಭ ವಾರ್ತೆ ಮಂಡ್ಯ ನೂರು ಜನ ರಮೇಶ್‌ ಜಾರಕಿಹೊಳಿ ಬಂದರೂ ಡಿ.ಕೆ.ಶಿವಕುಮಾರ್‌ ಅವರನ್ನು ಟಚ್ ಮಾಡುವುದಕ್ಕೆ ಆಗೋದಿಲ್ಲ. ಒಕ್ಕಲಿಗ ನಾಯಕತ್ವವನ್ನು ಸಾಯಿಸಲು ಒಂದು ತಂಡ ವ್ಯವಸ್ಥಿತ ಸಂಚು ನಡೆಸಿದೆ ಎಂದು ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್‌ ಹೇಳಿದರು. ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ರಮೇಶ್ ಜಾರಕಿಹೊಳಿ ಮತ್ತವರ ತಂಡ ಏಳು ಜನ್ಮ ಎತ್ತಿ ಬಂದರೂ ಡಿ.ಕೆ.ಶಿವಕುಮಾರ್‌ ಅವರನ್ನು ಜೈಲಿಗೆ ಕಳುಹಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಏಜೆನ್ಸಿಗಳು ರಮೇಶ್ ಜಾರಕಿಹೊಳಿ ಕೈಯಲ್ಲಿದ್ಯಾ?, ಡಿಕೆಶಿ ಜೈಲಿಗೆ ಹೋಗ್ತಾರೆ ಎನ್ನಲು ಅವರು ಯಾರು. ಅಧಿಕಾರ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಹುಚ್ಚನ ರೀತಿ ಆಡುತ್ತಿದ್ದಾನೆ. ಚುನಾವಣೆ ಮುಂಚೆ ಡಿಕೆಶಿ ಕಾಲು ಹಿಡಿಯಲು ಬಂದಿದ್ದ ರಮೇಶ್ ಜಾರಕಿಹೊಳಿ ಈಗ ಅವರನ್ನು ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ. ಆತನ ಪ್ರಯತ್ನ ಫಲಿಸದು ಎಂದರು. ಆಪರೇಷನ್ ಕಮಲ ಸುಳ್ಳು ಎಂಬ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ ರವಿಕುಮಾರ್‌, ಆಪರೇಷನ್ ಕಮಲಕ್ಕೆ ಕೈ ಹಾಕಿಲ್ಲ ಎನ್ನುವುದಾದರೆ ಕೈ ಶಾಸಕರಿಗೆ ಆಫರ್ ಮಾಡಿದ್ದು ಯಾಕೆ?, ಬೆಳಗಾವಿ ಏರ್‌ರ್ಪೋರ್ಟ್‌ನಲ್ಲಿ ಆ ಭಾಗದ ಶಾಸಕರಿಗೆ ಏನು ಆಫರ್ ಮಾಡಿದ್ರಿ?, ನೀವು ಆಫರ್ ಮಾಡಿರುವ ದಾಖಲೆಗಳು ನನ್ನ ಬಳಿ ಇದೆ‌. ಸಮಯ ಬಂದಾಗ ಎಲ್ಲವನ್ನು ಬಹಿರಂಗ ಮಾಡ್ತೀವಿ ಎಂದು ಎಚ್ಚರಿಸಿದರು. ರಮೇಶ್ ಜಾರಕಿಹೊಳಿ ಮಾತನಾಡಿರುವ ಅಷ್ಟು ಶಾಸಕರು ಮಾಧ್ಯಮದ ಮುಂದೆ ಬರ್ತಾರೆ‌. ಅವರಿಗೆ ಬಂದ ಆಫರ್ ಬಗ್ಗೆ ಅವರೇ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾರೆ. ಬಿಜೆಪಿಯವರು ನೂರು ಕೋಟಿ ಕೊಟ್ಟ ರು. ನಮ್ಮ ಶಾಸಕರು ಅವರೊಂದಿಗೆ ಹೋಗಲ್ಲ ಎಂದು ವಿಶ್ವಾಸದಿಂದ ನುಡಿದರು. ಮಹಾರಾಷ್ಟ್ರ ರೀತಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ರಮೇಶ್ ಜಾರಕಿಹೊಳಿ ಕನಸು ಕಾಣುತ್ತಿದ್ದಾರೆ. ಅದು ಎಂದಿಗೂ ನನಸಾಗದು. ಹೀಗೆ ಯೋಚಿಸುತ್ತಾ ಅವರೇ ಪತನವಾಗುತ್ತಾರೆ. ತಾಕತ್ತು, ದಮ್ಮು ಇದ್ದರೆ ಕೈ ಶಾಸಕರಿಗೆ ಆಫರ್ ಮಾಡಿದರ ಬಗ್ಗೆ ಒಪ್ಪಿಕೊಳ್ಳಲಿ ಎಂದು ಸವಾಲ್‌ ಹಾಕಿದರು. ಬಿಜೆಪಿಯವರು ನಿರುದ್ಯೋಗಿಗಳು, ಸರ್ಕಾರ ಬೀಳಿಸುವ ಕನಸು ಕಾಣುತ್ತಿದ್ದಾರೆ. ಇಲ್ಲಸಲ್ಲದ್ದನ್ನು ಹೇಳಿ ನಮ್ಮ ಶಾಸಕರ ತಲೆ ಕೆಡಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಒಳ್ಳೆ ಆಡಳಿತ ನೀಡುತ್ತಿದೆ. ಗ್ಯಾರಂಟಿಗಳು ಜನರನ್ನು ತಲುಪಿವೆ. ಇದನ್ನು ಬಿಜೆಪಿಯವರಿಂದ ಸಹಿಸಲಾಗುತ್ತಿಲ್ಲ ಎಂದರು. ಡಿಕೆಶಿ ಸಿಡಿ ಬ್ಲಾಕ್‌ ಮೇಲ್ ಮಾಡುತ್ತಾರೆ ಎಂಬ ಆರೋಪಕ್ಕೆ, ಬೆಡ್ ಮೇಲೆ ಮಲಗಲು ನಾವು ಹೋಗಿದ್ವಾ?, ರಮೇಶ್ ಜಾರಕಿಹೊಳಿ ವಿಡಿಯೋವನ್ನ ರಾಜ್ಯದ ಜನರೇ ನೋಡಿದ್ದಾರೆ. ಈ ರೀತಿ ಮಾತನಾಡಿಯೇ ಅವರು ಅಧಿಕಾರ ಕಳೆದುಕೊಂಡದ್ದು. ಸರ್ಕಾರ ಪತನವಾಗುತ್ತದೆ, ಡಿಕೆಶಿ ಜೈಲಿಗೆ ಹೋಗುತ್ತಾರೆಂಬ ತಿರುಕನ‌ ಕನಸು ಕಾಣುವುದನ್ನು ಅವರು ಬಿಡಬೇಕು ಎಂದು ಛೇಡಿಸಿದರು. ಬಿಜೆಪಿ ಸರ್ಕಾರ ಇದ್ದಾಗ ಯಾರು ನೆಮ್ಮದಿಯಿಂದ ಇರಲಿಲ್ಲ. ಬೆಳಗ್ಗೆ ಎದ್ದರೆ ಕೋಮುಗಲಭೆ ನಡೆಯುತ್ತಿತ್ತು. ಈಗ ಕಾಂಗ್ರೆಸ್ ಸರ್ಕಾರ ರಾಜ್ಯವನ್ನ ರಾಮರಾಜ್ಯ ಮಾಡಿದೆ ಎಂದರು.

PREV

Recommended Stories

ವಿಜಯ್‌ ಚುನಾವಣಾ ರಣಕಹಳೆ - ಇಲ್ಲಿ ಶುರುವಾದ ರಾಜಕೀಯ ಕಾರ್ಯಕ್ಕೆ ಮಹಾ ತಿರುವು
ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ