ಚಿಕ್ಕೋಡಿ ಲೋಕಸಭೆ ಬಿಜೆಪಿ ಟಿಕೆಟ್ ಅಮಿತ್‌ ಕೋರೆಗೆ ನೀಡುವಂತೆ ಒತ್ತಾಯ

KannadaprabhaNewsNetwork |  
Published : Jan 13, 2024, 01:32 AM IST
12ಅಥಣಿ 01 | Kannada Prabha

ಸಾರಾಂಶ

ಕೆಎಲ್ಇ ಸಂಸ್ಥೆಯ ಮೂಲಕ ಇಡೀ ರಾಜ್ಯದಲ್ಲಿ ಅಷ್ಟೇ ಅಲ್ಲದೆ ದೇಶ ವಿದೇಶಗಳಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ರಾಜ್ಯಸಭೆ ಮಾಜಿ ಸದಸ್ಯರು ಮತ್ತು ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷ ಡಾ.ಪ್ರಭಾಕರ ಕೋರೆ ಪುತ್ರ ಅಮಿತ್‌ ಕೋರೆ ಅವರಿಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಭಾರತೀಯ ಜನತಾ ಪಕ್ಷದಿಂದ ಟಿಕೆಟ್ ನೀಡಬೇಕು ಎಂದು ಡಾ.ಮಲ್ಲಿಕಾರ್ಜುನ ಹಂಜಿ ಬಿಜೆಪಿ ಹೈಕಮಾಂಡ್‌ಗೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಕೋರೆ ಅವರು ಉದ್ಯಮಿಗಳಾಗಿ ಜನಶಕ್ತಿ ಫೌಂಡೇಶನ್ ಮೂಲಕ ಅನೇಕ ಸಮಾಜಮುಖಿ ಸೇವೆಗಳನ್ನು ಸಲ್ಲಿಸುತ್ತ ಬಂದಿದ್ದಾರೆ. ತಮ್ಮ ಶಿವಶಕ್ತಿ ಸಕ್ಕರೆ ಕಾರ್ಖಾನೆಯ ಮೂಲಕ ರೈತರಿಗೆ ಉತ್ತಮ ದರ ನೀಡುವ ಮೂಲಕ ಅವರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ನಿರುದ್ಯೋಗಿ ಯುವಕರಿಗೆ ಉದ್ಯೋಗವನ್ನು ನೀಡಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ನಿರ್ದೇಶಕರಾಗಿ ಕಳೆದ 25 ವರ್ಷಗಳಿಂದ ಅಮಿತ್ ಕೋರೆ ಅವರು ಸಹಕಾರ, ಶಿಕ್ಷಣ ಮತ್ತು ಕೈಗಾರಿಕಾ ಉದ್ಯಮದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಅವರು ಈ ಭಾಗದ ಲೋಕಸಭಾ ಸದಸ್ಯರಾಗುವುದರಿಂದ ಅನಿಕ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರಿಯಾಗಲಿದೆ. ಆದ್ದರಿಂದ ಭಾರತೀಯ ಜನತಾ ಪಕ್ಷದ ಕೇಂದ್ರದ ಮತ್ತು ರಾಜ್ಯದ ವರಿಷ್ಠರು ಮುತ್ತು ಹಿರಿಯ ಮುಖಂಡರು ಅಮಿತ ಕೋರೆ ಅವರಿಗೆ ಟಿಕೆಟ್ ನೀಡಬೇಕು ಎಂದು ಅಗ್ರಹಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸಿದ್ದಪ್ಪ ಮುದುಕಣ್ಣವರ, ಸಹಕಾರಿ ಮುಖಂಡ ಈರಣ್ಣಗೌಡ ಪಾಟೀಲ ಮಾತನಾಡಿದರು. ಮುಖಂಡರಾದ ಪ್ರಕಾಶ ಪಾಟೀಲ, ಸುನಿಲ ಶಿವಣಗಿ, ಶಂಭುಲಿಂಗ ಮಮದಾಪುರ, ವಿಜಯಕುಮಾರ ಬುರ್ಲಿ, ಸುರೇಶ ಮಾಚಕನವರ, ಮಹೇಶ ಚೌಗುಲಾ, ರುದ್ರಪ್ಪ ಕರಣಿ, ನ್ಯಾಯವಾದಿ ವಿ.ಬಿ.ಪಾಟೀಲ, ಬಸವರಾಜ್ ಬಸ್ ಗೌಡರ ಸೇರಿದಂತೆ ಅಮಿತ್ ಕೋರೆ ಅಭಿಮಾನಿಗಳು ಉಪಸ್ಥಿತರಿದ್ದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ