ಗೌತಮ್‌ ಗೆಲ್ಲಸಿ ನನ್ನ ಗೌರವ ಉಳಿಸಿ: ಶಾಸಕಿ ರೂಪಕಲಾ ಶಶಿಧರ್

KannadaprabhaNewsNetwork | Updated : Apr 13 2024, 04:41 AM IST

ಸಾರಾಂಶ

ಕಾಂಗ್ರೆಸ್‌ ಮುಖಂಡರು ಕಾರ್ಯಕರ್ತರು ಒಂದಾಗಿ ಚುನಾವಣೆ ಎದುರಿಸಬೇಕು ನಿಮ್ಮಲ್ಲಿರುವ ಭಿನ್ನಭಿಪ್ರಾಯ ಬದಿಗಿಟ್ಟು ಪಕ್ಷದ ಅಭ್ಯರ್ಥಿ ಗೌತಮ್‌ ಅ‍ವರಿಗೆ ಕೆಜಿಎಫ್‌ ತಾಲೂಕಿನಿಂದ ಅತಿ ಹೆಚ್ಚು ಮತ ಬರುವಂತೆ ಮಾಡಬೇಕು

 ಕೆಜಿಎಫ್ : ಕಾಂಗ್ರೆಸ್ ಮಾನ ಮಾರ್ಯದೆ ಕಾಪಾಡುವುದು ನಿಮ್ಮ ಕೈಯಲ್ಲಿದೆ. ಶಾಸಕರು ತಲೆ ಎತ್ತುವಂತೆ ಮಾಡಬೇಕು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮುಂದೆ ಹಾಗೂ ಪಕ್ಷದ ಹೈಕಮಾಂಡ್ ಮುಂದೆ ಕೆಜಿಎಫ್ ಕ್ಷೇತ್ರದ ಘನತೆ ಗೌವರ ಉಳಿಸಲು ಕಾಂಗ್ರೆಸ್‌ ಅಭ್ಯರ್ಥಿ ಗೌತಮ್‌ ಅ‍ರನ್ನು ಗೆಲ್ಲಿಸುವಂತೆ ಶಾಸಕಿ ರೂಪಕಲಾ ಶಶಿಧರ್‌ ಮನವಿ ಮಾಡಿದರು.

ಲೋಕಸಭಾ ಚುನಾವಣೆಯ ಪ್ರಚಾರ ಸಭೆ ಪಾರಂಡಹಳ್ಳಿ, ಮಾರಿಕುಪ್ಪಂ, ಘಟ್ಟಮಾದಮಂಗಳ ಗ್ರಾಪಂ, ಕಾರ್‍ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಮುಖಂಡರು ಯಾರ ಕೈ ಕಾಲು ಹಿಡಿದರೆ ಪಕ್ಷಕ್ಕೆ ಮತ ಬರುತ್ತದೆ ಎಂಬದನ್ನು ತಿಳಿದು ಕೆಲಸ ಮಾಡಬೇಕಿದೆ ಎಂದರು.

ಯುಗಾದಿ ಹಬ್ಬ ಆಚರಿಸಿಲ್ಲ ನನಗೆ ನಿದ್ದೆ ಬರುತ್ತಿಲ್ಲ, ಯುಗಾದಿ ಹಬ್ಬ ಆಚರಣೆ ಮಾಡಿಲ್ಲ, ಚುನಾವಣೆ ಮುಗಿಯುವರೆಗೂ ನಿದ್ದೆ ಮಾಡುವುದಿಲ್ಲ, ಕ್ಷೇತ್ರದ ಪ್ರತಿ ಮನೆ ಮನೆಗೂ ಹೋಗಿ ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿ ಮತ್ತು ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ ಕುರಿತು ಮತದಾರರಿಗೆ ಮನವರಿಕೆ ಮಾಡಿಕೊಟ್ಟು ಹೆಚ್ಚಿನ ಮತ ಕಾಂಗ್ರೆಸ್ ಕೊಡಿಸಿ ನಂತರ ಯುಗಾದಿ ಹಬ್ಬವನ್ನು ಆಚರಣೆ ಮಾಡುವುದಾಗಿ |ನಾರಾಯರೆಡ್ಡಿ ಸಮಾದಿ ಬಳಿ ಶಾಸಕಿ ರೂಪಕಲಾಶಶಿಧರ್ ಶಪಥ ಮಾಡಿದ್ದಾರೆ. 

ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಶಾಸಕಿ: ಪಾರಂಡಹಳ್ಳಿ ಗ್ರಾಮದಲ್ಲಿ ಸಮಯಕ್ಕೆ ಸರಿಯಾಗಿ ಶಾಸಕಿ ರೂಪಕಲಾ ಶಶಿಧರ್ ಆಗಮಿಸಿದರು ಸಭೆಗೆ ಮುಖಂಡರು ಆಗಮಿಸದ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡರ ವಿರುದ್ಧ ಗರಂ ಆದ ಶಾಸಕಿ ನಾನು ನಿಮಗೆ ಏನು ಕಡಿಮೆ ಮಾಡಿದ್ದೇನೆ ಹೇಳಿ ಎಂದು ತರಾಟೆಗೆ ತೆಗೆದುಕೊಂಡರು.

ಭಿನ್ನಾಭಿಪ್ರಾಯ ಬಿಟ್ಟು ಕೆಲಸ ಮಾಡಿ

ಮಾರಿಕುಪ್ಪ ಪಂಚಾಯ್ತಿಯ ಕೊತ್ತೂರು ಗ್ರಾಮದಲ್ಲಿ ಮಾತನಾಡಿದ ಶಾಸಕಿ ರೂಪಕಲಾಶಶಿಧರ್ ಮುಖಂಡರು ಕಾರ್ಯಕರ್ತರು ಒಂದಾಗಿ ಚುನಾವಣೆ ಎದುರಿಸಬೇಕು ನಿಮ್ಮಲ್ಲಿರುವ ಭಿನ್ನಭಿಪ್ರಾಯ ಬದಿಗಿಟ್ಟು ಪಕ್ಷದ ಅಭ್ಯರ್ಥಿಗೆ ತಾಲೂಕಿನಿಂದ ಅತಿ ಹೆಚ್ಚು ಮತ ನೀಡಬೇಕು ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಕೃಷ್ಣರೆಡ್ಡಿ, ಹಿರಿಯ ಮುಖಂಡರಾದ ಸುಬ್ಬಾರೆಡ್ಡಿ, ಮಾರಿಕುಪ್ಪಂನ ಮಾಜಿ ಗ್ರಾಮ ಪಂ ಸದಸ್ಯರಾದ ವಿಜಯ್, ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ರಾಮಕೃಷ್ಣರೆಡ್ಡಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಪ್ರಕಾಶ್, ಕಲಾ, ಮಾರಿಕುಪ್ಪ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಜಲಜಾಕ್ಷಿಶಿವ, ಮಾಜಿ ಅಧ್ಯಕ್ಷ ಪ್ರಸಾದರೆಡ್ಡಿ,ಪುರುಷೋತ್ತಮರೆಡ್ಡಿ, ಘಟ್ಟಮಾದಮಂಗಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಾಬು, ಉಪಾಧ್ಯಕ್ಷ ಜಯರಾಮರೆಡ್ಡಿ,ಬ್ಯಾಟರಾಯನಹಳ್ಳಿ ಬಾಬು, ವಕೀಲ ಪದ್ಮನಾಬರರೆಡ್ಡಿ ಇದ್ದರು

Share this article