ಝೆನ್ ಜೀ ಹಿಂಸೆ : ಸಂಸತ್ತಿಗೆ ಉತ್ತರಿಸಲು ಶಾ ಸಿದ್ಧ

Published : Aug 11, 2026, 11:55 AM IST
Amith Shah

ಸಾರಾಂಶ

ಜು.20ರಂದು ನಡೆದ ವಿದ್ಯಾರ್ಥಿಗಳ ಮೇಲಿನ ಹಿಂಸೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉತ್ತರಕ್ಕೆ ವಿಪಕ್ಷಗಳು ಪಟ್ಟು ಹಿಡಿದಿರುವ ನಡುವೆಯೇ, ಈ ವಿಚಾರವಾಗಿ ಲೋಕಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಹಾಗೂ ಶಾ ಅವರು ಉತ್ತರ ನೀಡಲಿದ್ದಾರೆ ಎಂದು ಸರ್ಕಾರ ಘೋಷಿಸಿದೆ.

ನವದೆಹಲಿ: ಜು.20ರಂದು ನಡೆದ ವಿದ್ಯಾರ್ಥಿಗಳ ಮೇಲಿನ ಹಿಂಸೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉತ್ತರಕ್ಕೆ ವಿಪಕ್ಷಗಳು ಪಟ್ಟು ಹಿಡಿದಿರುವ ನಡುವೆಯೇ, ಈ ವಿಚಾರವಾಗಿ ಲೋಕಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಹಾಗೂ ಶಾ ಅವರು ಉತ್ತರ ನೀಡಲಿದ್ದಾರೆ ಎಂದು ಸರ್ಕಾರ ಘೋಷಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕಿರಣ್ ರಿಜಿಜು, ‘ವಿದ್ಯಾರ್ಥಿ ಆಂದೋಲನ ಹಾಗೂ ಪೊಲೀಸರ ಕ್ರಮದ ಕುರಿತು ಚರ್ಚಿಸಲು ಸರ್ಕಾರ ಸಿದ್ಧವಿದೆ. ಅಮಿತ್ ಶಾ ಅವರು ಸರ್ಕಾರದ ಪರವಾಗಿ ಉತ್ತರ ನೀಡಲಿದ್ದಾರೆ. ಆದರೆ, ವಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸುವುದಿಲ್ಲ ಹಾಗೂ ಗದ್ದಲ ನಡೆಸಿ ಸದನದಿಂದ ಹೊರನಡೆಯುವುದಿಲ್ಲ ಎಂಬ ಭರವಸೆ ನೀಡಬೇಕು’ ಎಂದರು.

ಆದಾಗ್ಯೂ ಇದರ ಬಳಿಕ ಸದನದಲ್ಲಿ ಕೋಲಾಹಲ ಮುಂದುವರಿಯಿತು. ಹೀಗಾಗಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ಟ್ರಿಬ್ಯೂನಲ್ ವಿಧೇಯಕ ಪಾಸ್‌:

ಇನ್ನೊಂದೆಡೆ, ಲೋಕಸಭೆಯಲ್ಲಿ ವಿಪಕ್ಷಗಳ ತೀವ್ರ ಗಲಾಟೆ ಮತ್ತು ಘೋಷಣೆಗಳ ನಡುವೆಯೂ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಟ್ರಿಬ್ಯೂನಲ್ ಸುಧಾರಣೆಗಳ ವಿಧೇಯಕ, 2026 ಅನ್ನು ಮಂಡಿಸಿದರು. ಯಾವುದೇ ಚರ್ಚೆಯಿಲ್ಲದೆ ಈ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ವಿವಿಧ ಟ್ರಿಬ್ಯೂನಲ್‌ಗಳ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆಗೆ ಕಮಿಷನ್ ಒಂದನ್ನು ರಚಿಸಿ, ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವುದು ಈ ವಿಧೇಯಕದ ಪ್ರಮುಖ ಉದ್ದೇಶ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಶಾ ಫ್ಯಾಂಟಸಿ ಭಾಷಣದ ಬಗ್ಗೆ ಆಸಕ್ತಿ ಇಲ್ಲ: ರಾಗಾ
ರಾಜ್ಯದ ಜನತೆಗೆ ಇದು 7ನೇ ಗ್ಯಾರಂಟಿ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌