ರಾಜ್ಯದ ಜನತೆಗೆ ಇದು 7ನೇ ಗ್ಯಾರಂಟಿ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

Published : Aug 11, 2026, 11:11 AM IST
cm dk shivakumar

ಸಾರಾಂಶ

ನಮ್ಮ ಸರ್ಕಾರ ಈಗಾಗಲೇ ಯಶಸ್ವಿಯಾಗಿ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದು, ಎ ಖಾತೆ ನೀಡುವುದು 6ನೇ ಗ್ಯಾರಂಟಿಯಾಗಿದೆ. ಈಗ ಜನರಿಗೆ ಕುಡಿಯುವ ನೀರು ನೀಡುವುದು ನಮ್ಮ 7ನೇ ಗ್ಯಾರಂಟಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಮಾಲೂರು : ನಮ್ಮ ಸರ್ಕಾರ ಈಗಾಗಲೇ ಯಶಸ್ವಿಯಾಗಿ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದು, ಎ ಖಾತೆ ನೀಡುವುದು 6ನೇ ಗ್ಯಾರಂಟಿಯಾಗಿದೆ. ಈಗ ಜನರಿಗೆ ಕುಡಿಯುವ ನೀರು ನೀಡುವುದು ನಮ್ಮ 7ನೇ ಗ್ಯಾರಂಟಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚೊಕ್ಕಂಡಹಳ್ಳಿ ಸಮೀಪ ಜಿಲ್ಲಾಡಳಿತ ಆಯೋಜಿಸಲಾಗಿದ್ದ ₹3200 ಕೋಟಿಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ನಾವು ಆಡಳಿತಕ್ಕೆ ಬಂದ ಮೇಲೆ ನೀಡಿದ 5 ಗ್ಯಾರಂಟಿ ಯೋಜನೆಯು ಜನತೆಯ ಬದುಕನ್ನೇ ಬದಲಾಯಿಸಿದೆ. ಪ್ರಧಾನಿ ಮೋದಿ ಸೇರಿ ಬಿಜೆಪಿಗರು ನಮ್ಮ ಗ್ಯಾರಂಟಿ ಬಗ್ಗೆ ಟೀಕಿಸಿದ್ದರು. ಆದರೆ ಅವರೇ ಚುನಾವಣೆಗಳಲ್ಲಿ ಗ್ಯಾರಂಟಿ ಯೋಜನೆ ನಕಲು ಮಾಡಿದ್ದಾರೆ ಎಂದರು.

ನಮ್ಮ ಕೃಷ್ಣ ಬೈರೇಗೌಡ ಅವರ ಅಭಿಲಾಷೆಯಂತೆ ದಶಕಗಳಿಂದ ನಿವೇಶನ ಮಾಲೀಕರು ತೊಂದರೆ ಅನುಭವಿಸುತ್ತಿದ್ದ ಬಿ-ಖಾತಾಯಿಂದ ಎ-ಖಾತಕ್ಕೆ ಬದಲಾಯಿಸಿ ಕೊಡುವ 6ನೇ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕುಡಿಯುವ ನೀರಿನ ಕೊರತೆ ಕಾಡದಂತೆ ಮಾಡುವ ನಮ್ಮ ಜಲ ಯೋಜನೆ 7ನೇ ಗ್ಯಾರಂಟಿಯಾಗಿದೆ ಎಂದರು. ಎತ್ತಿನಹೊಳೆ, ಎಚ್.ಎನ್‌. ವ್ಯಾಲಿ ಯೋಜನೆಗಳಿಗೆ ಹೆಚ್ಚಿನ ವೇಗ ನೀಡಿ 2027 ರೊಳಗೆ ಕಾಮಗಾರಿ ಪೂರ್ಣಗೊಳಿಸುವ ಸಂಕಲ್ಪ ಮಾಡಲಾಗಿದೆ. ರೈತರ ಕಣ್ಣೀರು ಒರೆಸುವ ನಮ್ಮ ಸರ್ಕಾರ ಸದಾ ಜನರ ಪರವಾಗಿ ಸರ್ಕಾರ ಇದೆ ಎಂದರು.

ಜನರಿಗೆ ಕ್ಷಮೆ ಕೇಳಿದೆ ಸಿಎಂ:

ಕಾರ್ಯಕ್ರಮಕ್ಕೆ ಬರಲು 3 ಗಂಟೆ ನಿಧಾನವಾದ ಬಗ್ಗೆ ಜನರಲ್ಲಿ ಕ್ಷಮೆ ಕೇಳಿದ ಡಿ.ಕೆ.ಶಿವಕುಮಾರ್‌, ದೆಹಲಿಯಲ್ಲಿ ನಮ್ಮ ನಾಯಕರನ್ನು ಭೇಟಿ ಮಾಡಿ ಬೆಳಗ್ಗಿನ ಜಾವ 3 ಗಂಟೆಗೆ ಮಲಗಿ 6 ಗಂಟೆಗೆ ಎದ್ದ ಕಾರಣ ಬರಲು ತಡವಾಯಿತು ಎಂದರು. ಇದೇ ವೇಳೆ ವಿವಿಧ ಇಲಾಖೆಗಳ 28419 ಮಂದಿ ಪಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.

ರಾಜ್ಯದ ದೇವ ಮೂಲೆಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ

ರಾಜ್ಯದ ದೇವ ಮೂಲೆಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ 3 ಗಂಟೆ ತಡವಾದರೂ ಸೇರಿರುವ ಜನಸ್ತೋಮ ನೋಡಿದರೆ ಇಲ್ಲಿನ ಶಾಸಕ ನಂಜೇಗೌಡ ಅವರ ಜನಪ್ರಿಯತೆ ಅರ್ಥವಾಗುತ್ತದೆ

ರಾಜ್ಯದಲ್ಲಿ ನೆಡಯುತ್ತಿರುವ ಎಸ್‌ಐಆರ್‌ ಬಗ್ಗೆ ಎಚ್ಚರವಾಗಿರಿ. ಬಿಜೆಪಿಗರು ರಾಮನ ಹುಂಡಿ ಕಳ್ಳತನ ಮಾಡಿದಂತೆ ರಾಜ್ಯದಲ್ಲಿ ಆಗಲು ಬಿಡುವುದಿಲ್ಲ. ರಾಜ್ಯದ ಪ್ರಮುಖ ದೇವಾಲಯಗಳಲ್ಲಿರುವ ಹುಂಡಿ ಜಾಗವನ್ನು ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಇರಲಿದೆ ಎಂದರು.

ಸಚಿವರಾದ ಈಶ್ವರ ಖಂಡ್ರೆ, ಸತೀಶ್‌ ಜಾರಕಿ ಹೊಳೆ, ರಾಮಲಿಂಗರೆಡ್ಡಿ, ಕೆ.ಎಚ್‌.ಮುನಿಯಪ್ಪ, ಯತಿಂದ್ರ ಸಿದ್ದರಾಮಯ್ಯ, ಯು.ಟಿ.ಖಾದರ್‌, ಶಾಸಕ ಕೆ.ವೈ.ನಂಜೇಗೌಡ, ಮಾಜಿ ಸಚಿವ ಎಂ.ಸಿ.ಸುಧಾಕರ್‌ ಇದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಚಿವ ನಾಗೇಂದ್ರ ವಜಾಕ್ಕೆ ದೋಸ್ತಿಗಳ ಆಗ್ರಹ
ಸಚಿವ ನಾಗೇಂದ್ರಗೆ ಹೊರರಾಜ್ಯ ಪ್ರಯಾಣಕ್ಕಿದ್ದ ನಿರ್ಬಂಧ ತೆರವು