12 ವರ್ಷ ಬಳಿಕ ಜರ್ಮನಿ ನಾಕೌಟ್‌ ಪ್ರವೇಶ

Published : Jun 22, 2026, 12:13 PM IST
Germany at FIFA World Cup 2026

ಸಾರಾಂಶ

ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಡೆನಿಸ್‌ ಉಂಡಾವ್‌, 2 ಗೋಲು ಬಾರಿಸಿ ಜರ್ಮನಿಯನ್ನು ಫಿಫಾ ವಿಶ್ವಕಪ್‌ 2026ರ ನಾಕೌಟ್‌ ಹಂತಕ್ಕೆ ಕೊಂಡೊಯ್ದರು. ಐವರಿ ಕೋಸ್ಟ್‌ ವಿರುದ್ಧದ ಪಂದ್ಯದಲ್ಲಿ ಜರ್ಮನಿ 2-1 ಅಂತರದ ಗೆಲುವು ಸಾಧಿಸಿತು

ಟೊರೊಂಟೊ: ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಡೆನಿಸ್‌ ಉಂಡಾವ್‌, 2 ಗೋಲು ಬಾರಿಸಿ ಜರ್ಮನಿಯನ್ನು ಫಿಫಾ ವಿಶ್ವಕಪ್‌ 2026ರ ನಾಕೌಟ್‌ ಹಂತಕ್ಕೆ ಕೊಂಡೊಯ್ದರು. ಐವರಿ ಕೋಸ್ಟ್‌ ವಿರುದ್ಧದ ಪಂದ್ಯದಲ್ಲಿ ಜರ್ಮನಿ 2-1 ಅಂತರದ ಗೆಲುವು ಸಾಧಿಸಿತು. ಇದರೊಂದಿಗೆ 12 ವರ್ಷಗಳ ಬಳಿಕ ತಂಡ ನಾಕೌಟ್‌ ಪ್ರವೇಶಿಸಿತು.

2014ರಲ್ಲಿ ಕೊನೆ ಬಾರಿಗೆ ನಾಕೌಟ್‌

2014ರಲ್ಲಿ ಕೊನೆ ಬಾರಿಗೆ ನಾಕೌಟ್‌ ಹಂತಕ್ಕೇರಿದ್ದ ಜರ್ಮನಿ, ಆ ವರ್ಷ ಚಾಂಪಿಯನ್‌ ಆಗಿತ್ತು. 2018, 2022ರಲ್ಲಿ ಗುಂಪು ಹಂತದಲ್ಲೇ ಹೊರಬಿದ್ದಿದ್ದ 4 ಬಾರಿ ಚಾಂಪಿಯನ್‌ ತಂಡ, ಈ ಸಲ ಮತ್ತೆ ಟ್ರೋಫಿ ಮೇಲೆ ಕಣ್ಣಿಟ್ಟಿದೆ.

ಐವರಿ ಕೋಸ್ಟ್‌ಗೆ ಮುನ್ನಡೆ

30ನೇ ನಿಮಿಷದಲ್ಲಿ ಫ್ರಾಂಕ್‌ ಕೆಸ್ಸಿ ಬಾರಿಸಿದ ಗೋಲು ಐವರಿ ಕೋಸ್ಟ್‌ಗೆ ಮುನ್ನಡೆ ಒದಗಿಸಿತು. ಮೊದಲಾರ್ಧದ ಅಂತ್ಯಕ್ಕೆ ಒಂದು ಗೋಲಿಂದ ಹಿಂದಿದ್ದ ಜರ್ಮನಿ ಒತ್ತಡಕ್ಕೆ ಸಿಲುಕಿತ್ತು. ಆದರೆ 60ನೇ ನಿಮಿಷದಲ್ಲಿ ಮೈದಾನಕ್ಕಿಳಿದ ಉಂಡಾವ್‌, 68ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು. 90+4ನೇ ನಿಮಿಷದಲ್ಲಿ 2ನೇ ಗೋಲು ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ದೇಣಿಗೆ ಅಕ್ರಮ : ಅಯೋಧ್ಯೆ ಬಿಟ್ಟು ಹೋಗದಂತೆ ರಾಮ ಮಂದಿರ ಸಿಬ್ಬಂದಿಗೆ ಸೂಚನೆ
ಸ್ವಿಸ್‌ನಲ್ಲಿ ಅಮೆರಿಕ-ಇರಾನ್‌ ಸಂಧಾನ ಶುಭಾರಂಭ