ಮೈಸೂರು ಫಿಲಂ ಸಿಟಿಗೆ ಹೈಟೆಕ್‌ ಸ್ಪರ್ಶ

Published : Mar 07, 2026, 11:19 AM IST
Karnataka Budget 2026

ಸಾರಾಂಶ

ಕನ್ನಡ ಚಿತ್ರರಂಗದ ಬಹುದಿನಗಳ ಬೇಡಿಕೆಯಾಗಿದ್ದ ಫಿಲಂ ಸಿಟಿ ಸ್ಥಾಪನೆಗೆ ಈ ಹಿಂದಿನ ಬಜೆಟ್‌ನಲ್ಲಿ ₹500 ಕೋಟಿ ಅನುಮೋದನೆ ದೊರೆತಿದ್ದು, ಈ ಬಾರಿ ಅದಕ್ಕೆ ಹೈಟೆಕ್‌ ಸ್ಪರ್ಶ ನೀಡುವ ಪ್ರಸ್ತಾವನೆಗೆ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ.

  ಬೆಂಗಳೂರು :  ಕನ್ನಡ ಚಿತ್ರರಂಗದ ಬಹುದಿನಗಳ ಬೇಡಿಕೆಯಾಗಿದ್ದ ಫಿಲಂ ಸಿಟಿ ಸ್ಥಾಪನೆಗೆ ಈ ಹಿಂದಿನ ಬಜೆಟ್‌ನಲ್ಲಿ ₹500 ಕೋಟಿ ಅನುಮೋದನೆ ದೊರೆತಿದ್ದು, ಈ ಬಾರಿ ಅದಕ್ಕೆ ಹೈಟೆಕ್‌ ಸ್ಪರ್ಶ ನೀಡುವ ಪ್ರಸ್ತಾವನೆಗೆ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ.

ಪ್ರವಾಸಿಗರಿಗೆ ಹಾಗೂ ಸಿನಿಮಾರಂಗದವರ ಅನುಕೂಲಕ್ಕಾಗಿ ಥೀಮ್‌ ಪಾರ್ಕ್‌, ಸ್ಟಾರ್‌ ಹೋಟೆಲ್‌, ರೆಸ್ಟೋರೆಂಟ್‌ಗಳ ನಿರ್ಮಾಣಕ್ಕೂ ಅನುಮೋದನೆ ಸಿಕ್ಕಿದೆ. ಅದರ ಜೊತೆಗೆ ಸರ್ಕಾರ ಹೆಸರಘಟ್ಟದಲ್ಲಿ ನಡೆಸುತ್ತಿರುವ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಗೆ ಅಗತ್ಯವಿರುವ ಆಧುನಿಕ ಉಪಕರಣಗಳನ್ನು ಒದಗಿಸಲು ಅನುಮೋದನೆ ಸಿಕ್ಕಿದೆ.

ಸ್ಪಂದಿಸಿದ್ದಕ್ಕೆ ಖುಷಿ ಇದೆ: ಜಯಮಾಲಾ

ಸರ್ಕಾರ ತಾಯಿ ಸ್ಥಾನದಲ್ಲಿರುವ ಸಂಸ್ಥೆ. ತಾಯಿ ಯಾವತ್ತೂ ಒಳಿತನ್ನೇ ಬಯಸುವುದು. ಸರ್ಕಾರವೂ ಹಾಗೇ ಮಾಡಿದೆ. ಸಿನಿಮಾಗಳಿಗೆ ನೀಡುತ್ತಿದ್ದ ಸಬ್ಸಿಡಿ ಉಳಿಸಿದ್ದಾರೆ. ಅದು ಬಹಳ ಅವಶ್ಯವಾಗಿತ್ತು. ನಷ್ಟದ ಭೀತಿಯಲ್ಲಿರುವ ನಿರ್ಮಾಪಕರಿಗೆ ಕೊನೆಯದಾಗಿ ಉಳ್ಕೊಳ್ಳೋದು ಅದೊಂದೇ. ಚಿತ್ರನಗರಿ ಕನಸು ನನಸಾಗುತ್ತಿರುವುದು ಮತ್ತೊಂದು ಖುಷಿ.  

50 ಎಕರೆ ಜಾಗಕ್ಕೆ ಬೇಡಿಕೆ ಇಟ್ಟಿದ್ದೆವು

ಇಲ್ಲಿ ಕಾರ್ಮಿಕರಿಗೆ ಉಳಿದುಕೊಳ್ಳಲು 50 ಎಕರೆ ಜಾಗಕ್ಕೆ ಬೇಡಿಕೆ ಇಟ್ಟಿದ್ದೆವು. ಆ ಬಗ್ಗೆ ಇನ್ನೊಮ್ಮೆ ಸಿಎಂ ಜತೆ ಚರ್ಚಿಸಬೇಕಿದೆ. ಹೆಸರಘಟ್ಟದ ಸಿನಿಮಾ ಇನ್ಸಿಟ್ಯೂಟ್‌ಗೆ ಆಧುನಿಕ ಸವಲತ್ತು ಸಿಗುತ್ತಿರುವುದು ಒಳ್ಳೆಯ ಸಂಗತಿ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಹೇಳಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಕ್ರೀಡೆ ಉತ್ತೇಜನಕ್ಕೆ ಸಶಕ್ತ ಕರ್ನಾಟಕ ಯೋಜನೆ
ಅಹಿಂದ ಸಮುದಾಯಕ್ಕೆ ಬಜೆಟಲ್ಲಿ ಒತ್ತು