ನಿಗಮ-ಮಂಡಳಿ ನೇಮಕಕ್ಕೆ ಹೈ ಸೂತ್ರ ಫೈನಲ್‌ - ವರಿಷ್ಠರ ಫಾರ್ಮುಲಾ ಅನುಸರಿಸಿ 1144 ಸದಸ್ಯರ ನೇಮಕ

Published : Oct 01, 2024, 11:23 AM IST
Dr G Parameshwara

ಸಾರಾಂಶ

‘ನಿಗಮ-ಮಂಡಳಿಗಳಿಗೆ ಸದಸ್ಯರ ನೇಮಕಕ್ಕೆ ಹರಸಾಹಸ ನಡೆಯುತ್ತಿದ್ದು, ಹೈಕಮಾಂಡ್‌ ಸೂಚಿಸಿರುವ ಫಾರ್ಮುಲಾ ಪಾಲನೆ ಮಾಡಿಯೇ ಸದಸ್ಯರ ನೇಮಕ ಮಾಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು : ‘ನಿಗಮ-ಮಂಡಳಿಗಳಿಗೆ ಸದಸ್ಯರ ನೇಮಕಕ್ಕೆ ಹರಸಾಹಸ ನಡೆಯುತ್ತಿದ್ದು, ಹೈಕಮಾಂಡ್‌ ಸೂಚಿಸಿರುವ ಫಾರ್ಮುಲಾ ಪಾಲನೆ ಮಾಡಿಯೇ ಸದಸ್ಯರ ನೇಮಕ ಮಾಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ನಿಗಮ-ಮಂಡಳಿಗಳಿಗೆ ಒಟ್ಟು 1,144 ಸದಸ್ಯರ ನೇಮಕ ಮಾಡಬೇಕಿದ್ದು, ಸದಸ್ಯರ ನೇಮಕದ ಬಗ್ಗೆ ನಿರ್ಧರಿಸಲು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ನೇತೃತ್ವದ ಹತ್ತು ಮಂದಿ ಸದಸ್ಯರ ಸಮಿತಿ ರಚಿಸಲಾಗಿತ್ತು.

ಆದರೆ ಹೈಕಮಾಂಡ್‌ ಶಾಸಕರಿಗೆ 3 ಮಂದಿ ಸದಸ್ಯರ ನೇಮಕಕ್ಕೆ ಮಾತ್ರ ಶಿಫಾರಸು ಅಧಿಕಾರ ನೀಡಿದೆ. ಈ ಬಗ್ಗೆ ಶಾಸಕರು ತೀವ್ರ ಅಸಮಾಧಾನಗೊಂಡಿದ್ದು, ಹಲವು ಸದಸ್ಯರು ಶಿಫಾರಸುಗಳನ್ನೇ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಉಂಟಾಗಿರುವ ಸಮಸ್ಯೆ ಬಗ್ಗೆ ಡಾ.ಜಿ. ಪರಮೇಶ್ವರ್‌ ಅವರು ಸೋಮವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಜತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೈಕಮಾಂಡ್ ಫಾರ್ಮುಲಾ ಪ್ರಕಾರ ಶಾಸಕರಿಗೆ ತಲಾ 3 ಸದಸ್ಯರ ನೇಮಕ, ವಿಧಾನಸಭೆ ಪರಾಜಿತ ಅಭ್ಯರ್ಥಿಗೆ 2, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಿಗೆ 2, ಮುಂಚೂಣಿ ಘಟಕಗಳ ಅಧ್ಯಕ್ಷರಿಗೆ 5, ಪರಿಷತ್‌ ಸದಸ್ಯರಿಗೆ 1, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ತಲಾ 75 ಸದಸ್ಯರ ನೇಮಕದ ಅಧಿಕಾರ ನೀಡಲಾಗಿದೆ.

ಆದರೆ ಬಹುತೇಕ ಶಾಸಕರು ಕೇವಲ 3 ಸದಸ್ಯರ ನೇಮಕಕ್ಕೆ ಅಧಿಕಾರ ನೀಡಿರುವುದರಿಂದ ಮುನಿಸಿಕೊಂಡಿದ್ದಾರೆ. ಶಿಫಾರಸುಗಳನ್ನೇ ನೀಡುತ್ತಿಲ್ಲ. ಹೀಗಾಗಿ ಶಾಸಕರ ಪಾಲಿನ ಸದಸ್ಯರ ನೇಮಕ ಅಧಿಕಾರವನ್ನೂ ಪಕ್ಷಕ್ಕೇ ತೆಗೆದುಕೊಳ್ಳಿ ಎಂದು ಪರಮೇಶ್ವರ್‌ ಸಲಹೆ ನೀಡಿದರು.

ಆದರೆ ಇದಕ್ಕೆ ಡಿ.ಕೆ. ಶಿವಕುಮಾರ್‌ ಅಸಮ್ಮತಿ ವ್ಯಕ್ತಪಡಿಸಿದ್ದು, ಹೈಕಮಾಂಡ್‌ ಸೂಚಿಸಿದ ಫಾರ್ಮುಲಾ ಪ್ರಕಾರವೇ ನಡೆಯಬೇಕು. ಶಾಸಕರ ಮನವೊಲಿಸಿ ಶಿಫಾರಸು ಪಟ್ಟಿ ಪಡೆಯಿರಿ ಎಂದು ಸೂಚಿಸಿದರು ಎನ್ನಲಾಗಿದೆ.

ಇನ್ನು ಇದೇ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಭೇಟಿ ಮಾಡಿ ಡಾ.ಜಿ. ಪರಮೇಶ್ವರ್‌ ಚರ್ಚಸಿದ್ದಾರೆ. ಮುಖ್ಯಮಂತ್ರಿಗಳು ಪಟ್ಟಿಗೆ ಒಪ್ಪಿಗೆ ಸೂಚಿಸಿದ ಬಳಿಕ ನಿಗಮ-ಮಂಡಳಿ ಸದಸ್ಯರ ನೇಮಕ ಅಂತಿಮವಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ವೈದ್ಯಕೀಯ ಪರಿಹಾರ ನಿಧಿ ಹಣಕ್ಕೆ ಬೆಂಗಳೂರು ಪಾಲಿಕೆ ತಡೆ