ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರಿಗೆ ಶೀಘ್ರದಲ್ಲೇ ಸಿಎಂ ಆಗುವ ಭಾಗ್ಯ ಇದೆ ಎಂದು ಹಾಲುಮತದ ಗೊರವಯ್ಯ ಭವಿಷ್ಯ ನುಡಿದಿದ್ದಾರೆ.
ತುಮಕೂರು: ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರಿಗೆ ಶೀಘ್ರದಲ್ಲೇ ಸಿಎಂ ಆಗುವ ಭಾಗ್ಯ ಇದೆ ಎಂದು ಹಾಲುಮತದ ಗೊರವಯ್ಯ ಭವಿಷ್ಯ ನುಡಿದಿದ್ದಾರೆ.
ತುಮಕೂರಿನಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಮಾ. 20ರಂದು ಆಕಸ್ಮಿಕವಾಗಿ ಭೇಟಿ ನೀಡಿದ ಮೂವರು ಗೊರವಯ್ಯರು ಸಿಎಂ ಸಿದ್ದರಾಮಯ್ಯನವರು ಶೀಘ್ರ ಅಧಿಕಾರದಿಂದ ಕೆಳಗೆ ಇಳಿದು ಡಾ.ಪರಮೇಶ್ವರ್ ಅವರು ಸಿಎಂ ಆಗಲಿ ಎಂದೂ ಆಶೀರ್ವಾದ ಮಾಡಿದ್ದಾರೆ.
ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಡಾ. ನಾಗಣ್ಣ ಅವರೆದರು ಈ ಭವಿಷ್ಯ ವಾಣಿ ನುಡಿದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.