ಕೋಲಾರ : ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆ ಮಾಡುವ ಸ್ಥಾನದಲ್ಲಿ ತಮಗೆ ಅವಕಾಶ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ, ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯರಿಗೆ ಕೋಲಾರ ಕ್ಷೇತ್ರವನ್ನು ಬಿಟ್ಟು ಕೊಡುವ ಸಂದರ್ಭದಲ್ಲಿ ತಮಗೆ ಆಶ್ವಾಸನೆ ಕೊಟ್ಟಿರುವುದನ್ನು ಅವರು ಮರೆತಿಲ್ಲ, ಇತ್ತೀಚೆಗೆ ಅವರನ್ನು ಭೇಟಿಯಾದ ಸಂದರ್ಭದಲ್ಲಿ ನೆನಪಿಸಿಕೊಂಡರು ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ತಿಳಿಸಿದರು.
ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಸೂಕ್ತವಾದ ಸ್ಥಾನ ಮಾನ ಕಲ್ಪಿಸುವುದಾಗಿ ಹೇಳಿದ್ದರು. ಅದು ಯಾವುದು, ಎಂಬುವುದರ ಬಗ್ಗೆ ನಾವು ಮಾತುಕತೆ ನಡೆಸಿಲ್ಲ, ಏಕೆಂದರೆ ನನಗೆ ಕೋಲಾರದಿಂದ ಎರಡನೇ ಸಿಎಂ ಆಗಿ ಸಿದ್ದರಾಮಯ್ಯ ಆಯ್ಕೆಯಾದರೆ ಕ್ಷೇತ್ರವನ್ನು ಅಭಿವೃದ್ದಿಪಡಿಸಬಹುದಾಗಿದೆ ಎಂಬ ದೆಸೆಯಲ್ಲಿ ನಾನು ಕ್ಷೇತ್ರವನ್ನು ಸಿದ್ದರಾಮಯ್ಯರಿಗೆ ಬಿಟ್ಟು ಕೊಡಲು ಮುಂದಾಗಿದ್ದೆ ಎಂದು ಹೇಳಿದರು. ಹೈಕಮಾಂಡ್ ನಿರ್ಧಾರಿಸಲಿದೆ
ಕಾಂಗ್ರೆಸ್ ತಮಗೇನು ಹೊಸದೇನಲ್ಲ, ನಾನು ಕೃಷಿ ಸಚಿವನಾಗಿದ್ದು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗ. ಸಿದ್ದರಾಮಯ್ಯ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ನಾನು ಸಹ ಸಚಿವನಾಗಿದ್ದೇ. ಸಿದ್ದರಾಮಯ್ಯನವರು ನನಗೆ ಹಳೆಯ ಗೆಳೆಯರು ಹೊಸಬರಲ್ಲ. ನನ್ನ ಮೇಲೆ ಅವರಿಗೆ ವಿಶ್ವಾಸ ಇದೆ. ವಿಧಾನಪರಿಷತ್ ಸ್ಥಾನಕ್ಕೆ ನಾನು ಸಹ ಆಕಾಂಕ್ಷಿಯಾಗಿದ್ದೇನೆ, ಕಾಂಗ್ರೆಸ್ ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳುವುದೋ ಕಾದು ನೋಡೋಣ ಎಂದರು.
ತಾವು ಎಲ್ಲಿಂದಲೂ ಬಂದು ರಾತ್ರೋ ರಾತ್ರೀ ಫ್ಲೆಕ್ಸಿ, ಕಟೌಟ್‌ಗಳು ಕಟ್ಟಿಸಿ, ಹಣ, ಮದ್ಯ ಹಂಚಿ ನಾಯಕನಾದವನಲ್ಲ, ಯಾವುದೇ ಖರ್ಚು ವೆಚ್ಚ ಇಲ್ಲದೆ ಜನರ ವಿಶ್ವಾಸಗಳಿಸಿ ಶಾಸಕನಾಗುತ್ತಿದ್ದೇ ಹೊರತು ಈಗಿನಂತೆ ಅಲ್ಲ. ಆಗಿನ ರಾಜಕಾರಣ ಪರಿಶುದ್ದವಾಗಿತ್ತು. ನಾನು ಜಿಲ್ಲಾ ರಾಜಕೀಯ ಹಿರಿಯ ಮುತ್ಸದಿ ಪಿ.ವೆಂಕಟಗಿರಿಯಪ್ಪ, ಸಿ.ಬೈರೇಗೌಡರ ಮಾರ್ಗದರ್ಶನದಲ್ಲಿ ಬೆಳೆದು ಬಂದವನು. ಜನರಿಗೆ ಆಮಿಷ ಒಡ್ಡುವುದು, ಜಾತಿ ರಾಜಕಾರಣ, ಒಡೆದು ಆಳುವುದು ನಮಗೆ ಗೊತ್ತಿಲ್ಲ ಎಂದರು. ಕ್ರಿಪ್ಕೋ ಸಂಸ್ಥೆಗೆ 7ನೇ ಬಾರಿ ಆಯ್ಕೆ
ನಾನು ಕ್ರಿಪ್ಕೋ ಸಂಸ್ಥೆಗೆ ೬ ಭಾರಿ ಅವಿರೋಧವಾಗಿ ಆಯ್ಕೆಯಾಗಿದ್ದೆ ನಯಾ ಪೈಸೆ ವೆಚ್ಚ ಇಲ್ಲದೆ ಆಗಿದ್ದೆ. ೭ನೇ ಭಾರಿ ಚುನಾವಣೆಯನ್ನು ಎದುರಿಸ ಬೇಕಾಗಿ ಬಂದಿತು, ಎದುರಾಳಿಗೆ ಸಮಾಂತರ ಮತಗಳಿಂದಾಗಿ ಟಾಸ್ಕ್‌ನಲ್ಲಿ ನನ್ನ ಪರವಾಗಿ ಬಂದಿದ್ದರಿಂದ ನಿರ್ದೇಶಕನಾಗಿ ೭ನೇ ಭಾರಿ ಮುಂದುವರೆದಿದ್ದೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಟಿಎಪಿಸಿಎಂ ಮಾಜಿ ಅಧ್ಯಕ್ಷ ನಾಗನಾಳ ಸೋಮಣ್ಣ ಇದ್ದರು.