ಬಿಜೆಪಿಗೆ ಸೇರುವಂತೆ ಆಹ್ವಾನ ಬಂದಿತ್ತು: ಮಾಜಿ ಸಿಎಂ, ಕಾಂಗ್ರೆಸ್‌ನ ಹಿರಿಯ ನಾಯಕ

Published : Oct 25, 2026, 01:11 PM IST
bjp congress

ಸಾರಾಂಶ

ಬಿಜೆಪಿಗೆ ಸೇರುವಂತೆ ನನಗೆ ಅನೇಕ ಬಾರಿ ಆಹ್ವಾನ ಬಂದಿತ್ತು. ಆದರೆ ನಾನದನ್ನು ತಿರಸ್ಕರಿಸಿದ್ದೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್‌ ಕುಮಾರ್‌ ಶಿಂಧೆ ಹೇಳಿದ್ದಾರೆ.

ಮುಂಬೈ : ‘ಬಿಜೆಪಿಗೆ ಸೇರುವಂತೆ ನನಗೆ ಅನೇಕ ಬಾರಿ ಆಹ್ವಾನ ಬಂದಿತ್ತು. ಆದರೆ ನಾನದನ್ನು ತಿರಸ್ಕರಿಸಿದ್ದೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್‌ ಕುಮಾರ್‌ ಶಿಂಧೆ ಹೇಳಿದ್ದಾರೆ.

ಶಿಖರ್‌ ಪರಾರಿಯಾ ಹಾಕಿಸಿದ್ದ ಬ್ಯಾನರ್‌ಗಳು ವಿವಾದ

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಕ್ಕೆ ಶುಭ ಹಾರೈಸಿ ತಮ್ಮ ಮೊಮ್ಮಗ ಶಿಖರ್‌ ಪರಾರಿಯಾ ಹಾಕಿಸಿದ್ದ ಬ್ಯಾನರ್‌ಗಳು ವಿವಾದಕ್ಕೆ ಕಾರಣವಾದ ಬಗ್ಗೆ ಮಾತನಾಡಿದ ಶಿಂದೆ, ‘ನಾನು ಇತ್ತೀಚೆಗೆ ಮೋದಿ ಅವರನ್ನು ಭೇಟಿಯಾಗಿದ್ದೆ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ, ಒಬ್ಬ ವ್ಯಕ್ತಿ ಅನುಸರಿಸುವ ಸಿದ್ಧಾಂತ ಮತ್ತು ತತ್ವಗಳು ಮುಖ್ಯವಾಗುತ್ತವೆ’ ಎಂದರು.

ಜತೆಗೆ, ‘ನನ್ನನ್ನೂ ಬಿಜೆಪಿ ಸೇರಿಕೊಳ್ಳುವಂತೆ ಹಲವು ಬಾರಿ ಆಹ್ವಾನಿಸಲಾಗಿತ್ತು. ಅದಕ್ಕೆ ನಾನು, ಬಿಜೆಪಿಗೆ ಬರುವುದರಂದ ಏನು ಸಾಧಿಸಿದಂತಾಗುತ್ತದೆ ಎಂದು ಕೇಳಿದ್ದೆ ಹಾಗೂ ಕಾಂಗ್ರೆಸ್‌ನಲ್ಲೇ ಇದ್ದುಕೊಂಡು ಕೆಲಸವನ್ನು ಮುಂದುವರಿಸುವುದೇ ಉತ್ತಮ ಎಂದು ಹೇಳಿದ್ದೆ’ ಎಂದರು.

ನನ್ನನ್ನೂ ಬಿಜೆಪಿ ಸೇರಿಕೊಳ್ಳುವಂತೆ ಹಲವು ಬಾರಿ ಆಹ್ವಾನಿಸಲಾಗಿತ್ತು

ಶಿಂಧೆ ಹೇಳಿಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ನಾಯಕ ಪೃಥ್ವಿರಾಜ್‌ ಚವಾಣ್‌, ‘ಕೆಲವೊಮ್ಮೆ ಜನರು ಇತರರನ್ನು ತಮ್ಮ ಪಕ್ಷಕ್ಕೆ ಸೇರಲು ಸಹಜವಾಗಿ ಆಹ್ವಾನಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ, ಪಕ್ಷದ ಉನ್ನತ ಹುದ್ದೆಯಲ್ಲಿರುವವರಿಂದಲೂ ಸಂದೇಶಗಳು ಬರುತ್ತವೆ’ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಿಇಸಿ ಜ್ಞಾನೇಶ್‌ ವಿರುದ್ಧ ಇಂಡಿಯಾ ಕೂಟದಿಂದ ‘ಅಣಕು ಸಂಸತ್ತು
ಸ್ಟಿಂಗ್‌ ಪಿತಾಮಹ ಎಲ್ಲರಿಗೂ ಗೊತ್ತಿದೆ : ವಿಜಯೇಂದ್ರ ಟೀಕೆ