ಹನಿಟ್ರ್ಯಾಪ್‌ ಪ್ರಕರಣ ಏ.14ರಬಳಿಕ ವಿಚಾರಣೆಗೆ ಹೋಗುತ್ತೇನೆ - ನನ್ನ ಗೌರವ ಉಳಿಸಿಕೊಳ್ಳುವ ಕೆಲಸ ಮಾಡುವೆ: ರಾಜಣ್ಣ

Published : Apr 13, 2025, 11:51 AM IST
Minister KN Rajanna

ಸಾರಾಂಶ

ಹನಿಟ್ರ್ಯಾಪ್‌ ಪ್ರಕರಣದ ತನಿಖೆ ನಡೆಯುತ್ತಿದೆ. ನಾನು ಸಹ ಏ.14ರ ಬಳಿಕ ಸಿಐಡಿ ವಿಚಾರಣೆಗೆ ಹೋಗುತ್ತೇನೆ. ಪ್ರಕರಣದಿಂದ ಯಾರಿಗೆ ಬೇಸರ, ಯಾರಿಗೆ ಖುಷಿ ಆಗಿದೆಯೋ ಗೊತ್ತಿಲ್ಲ. ಆದರೆ ನಾನಂತು ನನ್ನ ಗೌರವ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ ಎಂದು ಸಚಿವ ಕೆ.ಎನ್‌.ರಾಜಣ್ಣ ಹೇಳಿದ್ದಾರೆ.

 ಬೆಂಗಳೂರು : ಹನಿಟ್ರ್ಯಾಪ್‌ ಪ್ರಕರಣದ ತನಿಖೆ ನಡೆಯುತ್ತಿದೆ. ನಾನು ಸಹ ಏ.14ರ ಬಳಿಕ ಸಿಐಡಿ ವಿಚಾರಣೆಗೆ ಹೋಗುತ್ತೇನೆ. ಪ್ರಕರಣದಿಂದ ಯಾರಿಗೆ ಬೇಸರ, ಯಾರಿಗೆ ಖುಷಿ ಆಗಿದೆಯೋ ಗೊತ್ತಿಲ್ಲ. ಆದರೆ ನಾನಂತು ನನ್ನ ಗೌರವ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ ಎಂದು ಸಚಿವ ಕೆ.ಎನ್‌.ರಾಜಣ್ಣ ಹೇಳಿದ್ದಾರೆ.

ಹನಿಟ್ರ್ಯಾಪ್‌ ವಿಚಾರ ಬಗ್ಗೆ ಶನಿವಾರ ಮಾತನಾಡಿದ ಅವರು, ಸಿಐಡಿಯು ಹನಿಟ್ರ್ಯಾಪ್‌ ವಿಚಾರ ತನಿಖೆ ನಡೆಸುತ್ತಿದೆ. ಹೀಗಾಗಿ ತನಿಖೆ ನಡುವೆ ಈ ವಿಚಾರವಾಗಿ ನಾನು ಹೆಚ್ಚು ಮಾತನಾಡುವುದಿಲ್ಲ. ತನಿಖೆಗೆ ನಾನು ಸಹಕಾರ ನೀಡುತ್ತೇನೆ. ವಿಚಾರಣೆಗೆ ಹೋಗುತ್ತೇನೆ ಎಂದು ಹೇಳಿದರು.

ಸದನದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ಹೈಕಮಾಂಡ್‌ ಬೇಸರಗೊಂಡಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿ, ಬಸನಗೌಡ ಪಾಟೀಲ್ ಯತ್ನಾಳ್ ನಿರ್ದಿಷ್ಟವಾಗಿ ನನ್ನ ಹೆಸರು ಪ್ರಸ್ತಾಪಿಸಿ ಸದನದಲ್ಲಿ ಮಾತನಾಡಿದರು. ಹಾಗಾಗಿಯೇ ನಾನೂ ಸದನದಲ್ಲಿ ಪ್ರಕರಣದ ಬಗ್ಗೆ ವಿಷಯ ಪ್ರಸ್ತಾಪ ಮಾಡಿದೆ ರಾಜಣ್ಣ ಎಂದು ಸ್ಪಷ್ಟಪಡಿಸಿದರು.

ಇನ್ನು ಯಾರು ಬೇಸರ ಮಾಡಿಕೊಳ್ಳುತ್ತಾರೋ, ಯಾರು ಖುಷಿ ಪಡುತ್ತಾರೋ ಎಂಬುದಾಗಿ ನಾನು ತಲೆ ಕೆಡೆಸಿಕೊಳ್ಳುವುದಿಲ್ಲ. ನಾನು ಯಾರಿಗೂ ಖುಷಿಪಡಿಸುವುದಿಲ್ಲ. ನನ್ನ ಗೌರವ ಹೇಗೆ ಕಾಪಾಡಿಕೊಳ್ಳಬೇಕು ಎಂದು ನನಗೆ ಗೊತ್ತಿದೆ ಎಂದಷ್ಟೇ ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಉ.ಕ.ಅಭಿವೃದ್ಧಿ ಕೈ ಸರ್ಕಾರ ಬದ್ಧ : ಸಿಎಂ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!