ಸಿಎಂಗೆ ನೈತಿಕತೆ ಇದ್ದರೆ ಒಂದು ದಿನದ ಮಟ್ಟಿಗಾದರೂ ರಾಜೀನಾಮೆ ನೀಡಬೇಕು: ಪ್ರೇಮಕುಮಾರ್‌

KannadaprabhaNewsNetwork |  
Published : Jun 12, 2025, 12:33 AM ISTUpdated : Jun 12, 2025, 03:57 AM IST
ಸಿಎಂಗೆ ನೈತಿಕತೆ ಇದ್ದರೆ ಒಂದು ದಿನದ ಮಟ್ಟಿಗಾದರೂ ರಾಜೀನಾಮೆ ನೀಡಿ | Kannada Prabha

ಸಾರಾಂಶ

ನಿಮ್ಮ ಪ್ರಚಾರದ ಗುಂಗಿಗೆ ಬೆಂಗಳೂರು ಕುಖ್ಯಾತಿಗೆ ಒಳಗಾಗಿದೆ. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯ ಮೇಲೆ ಕ್ರಮ ಕೈಗೊಂಡಿರುವುದು ಸರಿಯಲ್ಲ. ಮಳೆಗೆ ಬೆಂಗಳೂರು ಮಳುಗಿತ್ತು ಇದರಿಂದಾಗಿ ಐಟಿ ಬಿಟಿ ಜನ ಬೇಸತ್ತರು. ಈಗ ಕಾಲ್ತುಳಿತದಿಂದ ಜಾಗಿತಕ ಮಟ್ಟದಲ್ಲಿ ಬೆಂಗಳೂರು ಕೆಟ್ಟ ಹೆಸರುಪಡೆಯಿತು.

 ಮೈಸೂರು : ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳಾದ ದಯಾನಂದ್‌ ಮತ್ತು ಎಚ್‌.ಟಿ.ಶೇಖರ್‌ ಅವರ ಅಮಾನತು ಕ್ರಮ ಸರಿಯಲ್ಲ. ಸಿಎಂಗೆ ನೈತಿಕತೆ ಇದ್ದರೆ ಒಂದು ಗಂಟೆ ಅಥವಾ ಒಂದು ದಿನದ ಮಟ್ಟಿಗಾದರೂ ರಾಜೀನಾಮೆ ನೀಡಿ ಎಂದು ಹಿಂದೂಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಮೈ.ಕಾ.ಪ್ರೇಮಕುಮಾರ್‌ ಒತ್ತಾಯಿಸಿದರು.

ನಿಮ್ಮ ಪ್ರಚಾರದ ಗುಂಗಿಗೆ ಬೆಂಗಳೂರು ಕುಖ್ಯಾತಿಗೆ ಒಳಗಾಗಿದೆ. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯ ಮೇಲೆ ಕ್ರಮ ಕೈಗೊಂಡಿರುವುದು ಸರಿಯಲ್ಲ. ಮಳೆಗೆ ಬೆಂಗಳೂರು ಮಳುಗಿತ್ತು ಇದರಿಂದಾಗಿ ಐಟಿ ಬಿಟಿ ಜನ ಬೇಸತ್ತರು. ಈಗ ಕಾಲ್ತುಳಿತದಿಂದ ಜಾಗಿತಕ ಮಟ್ಟದಲ್ಲಿ ಬೆಂಗಳೂರು ಕೆಟ್ಟ ಹೆಸರುಪಡೆಯಿತು. ಒಂದಲ್ಲ ಒಂದು ಅಪಖ್ಯಾತಿಗೆ ಗುರಿಯಾಗುತ್ತಿರುವುದು ನಾಚಿಕೆಗೇಡಿನ ವಿಷಯ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳತದೆ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ, ನಾವು ನೋಡಿದ ಪ್ರಾಮಾಣಿಕ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿರುವುದು ಸರಿಯಲ್ಲ. ಕ್ಯಾತಮಾರನಹಳ್ಳಿಯ ರಾಜು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮಾಣಿಕತೆಯಿಂದ ಕೆಲಸ ಮಾಡಿದ ಈ ಇಬ್ಬರು ಅಧಿಕಾರಿಗಳನ್ನು ತಪ್ಪಿನ ಶಿಕ್ಷೆಗೆ ಗುರಿಯಾಗಿಸಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ಮುಖ್ಯಮಂತ್ರಿಗಳು ಪ್ರತಿ ವಿಷಯಕ್ಕೂ ಸಿಡುಕುತ್ತಿದ್ದಾರೆ. ಪತ್ರಿಕಾಗೋಷ್ಠಿಗಳಲ್ಲಿ ಪತ್ರಕರ್ತರ ಪ್ರಶ್ನೆಗೆ ಉದ್ಧಟತನದ ಉತ್ತರ ಕೊಡುತ್ತಿದ್ದಾರೆ, ಅತಾಷೆಯನ್ನು ಅವರು ಬಳಸುತ್ತಿದ್ದು, ಈ ಸಂಬಂಧ ಪತ್ರಕರ್ತರ ಸಂಘಟನೆಗಳು ಧ್ವನಿ ಎತ್ತದೆ ಇರುವುದೂ ಕೂಡ ಬೇಸರ ತರಿಸಿದೆ. ಡಿಪಿಆರ್ ಮುಖ್ಯಸ್ಥರನ್ನು ರಕ್ಷಿಸುವ ಕೆಲಸ ಆಗುತ್ತಿದೆ. ಅದಕ್ಕಾಗಿ ಪೊಲೀಸರ ಮೇಲೆ ಕ್ರಮವಹಿಸಲಾಗಿದೆ ಎಂದು ದೂರಿದರು.

ಸ್ಟೇಡಿಯಂ ಬಳಿ ಜನರ ಮೇಲೆ ಹಲ್ಲೆ ನಡೆಸಿದ ಕೆಲವು ಸಿಬ್ಬಂದಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ, ಅವರನ್ನು ಕರೆಯಿಸಿ ವಿಚಾರಣೆ ನಡೆಸಿಲ್ಲ. ಗೃಹ ಮಂತ್ರಿಗಳಿಗೆ ಇದೆಲ್ಲವೂ ಗೊತ್ತಿಲ್ಲವೇ? ಗಣಿಗ ರವಿ ಸರ್ಕಾರ ಓಲೈಕೆ ಭರದಲ್ಲಿ ಉಡಾಫೆ ಮಾತುಗಳನ್ನು ಆಡುತ್ತಾರೆ. ಅವರೇನು ಜನಪ್ರತಿನಿಧಿಯ. ನಾಚಿಕೆ ಆಗಲ್ವಾ ನಿಮಗೆ? ಬಿಜೆಪಿಯ ತಪ್ಪುಗಳನ್ನು ಹೇಳಿ ತಾವು ಅಧಿಕಾರಕ್ಕೆ ಬಂದಿದ್ದು ಏಕೆ ಎಂದು ಅವರು ಪ್ರಶ್ನಿಸಿದರು.

ಹನ್ನೊಂದು ಜನರದ್ದು ಕೇವಲ ಸಾವು ಮಾತ್ರನಾ? ನಿಮಗೆ ನೈತಿಕತೆ ಇದ್ದರೆ ಒಂದು ಗಂಟೆ ಅಥವಾ ದಿನ ರಾಜೀನಾಮೆ ಕೊಡಿ, ಕುರ್ಚಿ ಮೇಲೆ ಯಾಕೆ ಇಷ್ಟು ಭಯ, ವ್ಯಾಯಾಮೋಹ ನಿಮಗೆ? ಎಂದು ಅವರು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ತ್ಯಾಗರಾಜ್, ಸಂಜಯ್, ರಾಕೇಶ್ ಭಟ್ ಇದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌ : ಬಿಜೆಪಿಗೇ 82%!
ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ