ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಅವರು ಬೆಮಲ್ ನಗರದಲ್ಲಿರುವ ಜೈನ್ ಶಾಲೆ ಹಾಗೂ ಲಿಟಲ್ ಪ್ಲವರ್ ಶಾಲೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾದ ವೈ.ಎ.ನಾರಾಯಣಸ್ವಾಮಿ ಪರವಾಗಿ ಶಿಕ್ಷಕರಲ್ಲಿ ಮತಯಾಚನೆ ಮಾಡಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಹಲವು ಬದಲಾವಣೆಬಿಜೆಪಿ ಸರ್ಕಾರದ ಆಡಳಿತದಲ್ಲಿ ಬಹುತೇಕ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ. ಬಡ್ತಿ ವೇತನ ಸೇರಿದಂತೆ ಹಲವಾರು ಕ್ರಾಂತಿಕಾರಿ ಬದಲಾವಣೆಗಳನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಲಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಶಿಕ್ಷಕರ ಹೆಸರಿನಲ್ಲಿ ರಾಜಕೀಯ ಮಾಡಿದ್ದೇ ಸಾಧನೆಯಾಗಿದೆ. ರಾಜ್ಯದಲ್ಲಿ ಆಡಳಿತ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಯ ಶಿಕ್ಷಣ ಪದ್ದತಿಯನ್ನು ರದ್ದು ಮಾಡಿತು, ಆದರೆ ಗುಣಮಟ್ಟದ ಶಿಕ್ಷಣ ಜಾರಿಗೆ ತರಲು ಮುಂದಾಗಿಲ್ಲ. ಇದರ ಪರಿಣಾಮ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವೇ ಸಾಕ್ಷಿ ಎಂದು ಆರೋಪಿಸಿದರು.
ಬಿಜೆಪಿ ಹಿರಿಯ ಮುಖಂಡ ಕೆ.ಚಂದ್ರಾರೆಡ್ಡಿ ಮಾತನಾಡಿ, ಚುನಾವಣೆಗೆ ಇನ್ನು ಕೇವಲ ೬ ದಿನಗಳು ಮಾತ್ರ ಇರುವುದರಿಂದ ಅಭ್ಯರ್ಥಿಯೇ ಎಲ್ಲಾ ಕಡೆ ಬಂದು ಪ್ರಚಾರ ಮಾಡಲು ಆಗದ ಕಾರಣ ಶಿಕ್ಷಕರು ಗೊಂದಲಗಳಿಗೆ ದಾರಿ ಮಾಡಿಕೊಡದೆ ಬೆಂಬಲಿಸಬೇಕು ಎಂದರಲ್ಲದೆ ಮುಂದೆ ಜಿಪಂ ತಾಪಂ ಚುನಾವಣೆ ಬರಲಿದೆ ಆ ಚುನಾವಣೆಗೆ ಈ ಚುನಾವಣೆ ದಿಕ್ಸೂಚಿಯಾಗಬೇಕು, ವೈ.ಎ.ಎನ್ ಪರಿಷತ್ ನಲ್ಲಿ ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ ಅದನ್ನು ಮುಂದುವರೆಸಲು ಸಹಕಾರ ನೀಡಿ ಎಂದರು.ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಸಂಪಂಗಿರೆಡ್ಡಿ, ಗ್ರಾಪಂ ಸದಸ್ಯರಾದ ಬಾಬು, ಪುಣ್ಯಮೂರ್ತಿ, ವೆಂಕಟೇಶ್, ಪುರುಷೋತ್ತಮಗೌಡ, ಅನ್ಬಳಗನ್, ಬೋಸ್ಲೇ ಇತರರು ಇದ್ದರು.